ಧಾರವಾಡ: ಜಿಲ್ಲೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ (Agriculture University) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೃಷಿ ಮೇಳಕ್ಕೆ ಮಂಗಳವಾರ (ಸೆ.16) ತೆರೆಬಿದ್ದಿದ್ದು, ನಾಲ್ಕೇ ದಿನದಲ್ಲಿ 23.7 ಲಕ್ಷ ಜನರು ಭೇಟಿ ನೀಡಿದ್ದಾರೆ.
ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಪ್ರತಿವರ್ಷ ನಡೆಯುವ ಕೃಷಿ ಮೇಳ ಇಡೀ ರಾಜ್ಯದಲ್ಲೇ ಹೆಸರುವಾಸಿ. ಇದನ್ನು ರೈತರ ಜಾತ್ರೆ ಎಂದೇ ಕರೆಯುತ್ತಾರೆ. ಈ ವರ್ಷ ಸೆ.13ರಿಂದ ಸೆ.16ರವರೆಗೆ ಕೃಷಿ ಮೇಳ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದಾಖಲೆಯ ಜನರು ಭೇಟಿ ನೀಡಿದ್ದಾರೆ.ಇದನ್ನೂ ಓದಿ: ದುಂಬಿ ಕೀಟಕ್ಕೆ ಚಿಪ್ ಅಳವಡಿಸಿ ಬೇಹುಗಾರಿಕೆ – ರಕ್ಷಣಾ ವ್ಯವಸ್ಥೆ, ಸೇನೆಗೆ ಸಹಕಾರಿ
ನಾಲ್ಕು ದಿನಗಳ ಕಾಲ ನಡೆದ ಈ ಕೃಷಿ ಮೇಳಕ್ಕೆ ಬರೋಬ್ಬರಿ 23.74 ಲಕ್ಷ ಜನ ಭೇಟಿ ನೀಡಿದ್ದರು. ಮೊದಲ ದಿನ ಶನಿವಾರ (ಸೆ.13) 3.65 ಲಕ್ಷ ಜನ, ಎರಡನೇ ದಿನ ಭಾನುವಾರ (ಸೆ.14) 7.74 ಲಕ್ಷ, ಮೂರನೇ ದಿನ ಸೋಮವಾರ (ಸೆ.15) 8.6 ಲಕ್ಷ ಹಾಗೂ ಕೊನೆಯ ದಿನ ಮಂಗಳವಾರ (ಸೆ.16) 3.75 ಲಕ್ಷ ಜನ ಸೇರಿ ಒಟ್ಟು 23.74 ಲಕ್ಷ ಜನ ಕೃಷಿ ಮೇಳಕ್ಕೆ ಭೇಟಿ ನೀಡಿದ್ದಾರೆ.