ಧಾರವಾಡ: ಪಾಕಿಸ್ತಾನ ವಿರುದ್ಧ ನಡೆದ ಕಾರ್ಗಿಲ್ ಯುದ್ಧದ ಗೆಲುವಿನ 20ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆ ಕಾರ್ಗಿಲ್ ಸ್ತೂಪದ ಬಳಿ ವಿಜಯೋತ್ಸವ ಕಾರ್ಯಕ್ರಮ ನಡೆಲಾಯಿತು.
ನಗರದಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ಕಾರ್ಗಿಲ್ ಸ್ತೂಪದ ಬಳಿ ಹುತಾತ್ಮರಿಗೆ ಗೌರವ ಸಲ್ಲಿಸುವ ಮೂಲಕ ಕಾರ್ಗಿಲ್ ವಿಜಯೋತ್ಸವ ಆರಚಣೆ ಮಾಡಲಾಯಿತು. ಇದರಲ್ಲಿ ಎನ್‍ಸಿಸಿ ಮತ್ತು ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಉತ್ತರ ಕರ್ನಾಟಕ ಸೈನಿಕ ಕಲ್ಯಾಣ ಮಂಡಳಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಹೈಕೋರ್ಟ್ ರಿಜಿಸ್ಟ್ರರ್ ಜನರಲ್ ವಿ ಶ್ರೀಶಾನಂದ, ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಕೆವಿಜಿ ಬ್ಯಾಂಕ್ ಮುಖ್ಯಸ್ಥರು ಸೇರಿ ಹಲವರು ಭಾಗವಹಿಸಿದ್ದರು.