ಧಾರವಾಡ: ಚುನಾವಣಾ (Lok Sabha Election 2024) ಕರ್ತವ್ಯದ ವೇಳೆ ಹೆಸ್ಕಾಂ ಕೇಂದ್ರ ಕಚೇರಿಯ ಎಇಇ (Hescom AEE) ಒಬ್ಬರು ಹೃದಯಾಘಾತದಿಂದ (Heart Attack) ನಿಧನರಾದ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.
ದಾವಣಗೆರೆ ಮೂಲದ ಕೃಷ್ಣಮೂರ್ತಿ ಬಿ.ಆರ್ (52) ಎಂಬವರು ಮೃತರಾದ ಅಧಿಕಾರಿ ಎಂದು ತಿಳಿದು ಬಂದಿದೆ. ಅವರನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಸೆಕ್ಟರ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಇದನ್ನೂ ಓದಿ: ಪೋಷಕರೇ ಹುಷಾರ್- ಅವಧಿ ಮೀರಿದ ಚಾಕ್ಲೇಟ್ ತಿಂದು ರಕ್ತವಾಂತಿ ಮಾಡಿದ ಕಂದಮ್ಮ!
ಕೃಷ್ಣಮೂರ್ತಿಯವರು ಹೆಸ್ಕಾಂ ಕೇಂದ್ರ ಕಚೇರಿಯಲ್ಲಿ ಎಇಇ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಮೋದಿಗೆ ಚೊಂಬು ತೋರಿಸಲು ಬಂದ ನಲಪಾಡ್ ಪೊಲೀಸರ ವಶಕ್ಕೆ!