ಧಾರವಾಡ: ಯಾವುದೇ ದಾಖಲಾತಿ ಇಲ್ಲದೇ ಮುಂಬೈನಿಂದ (Mumbai) ಹುಬ್ಬಳ್ಳಿಗೆ (Hubballi) ಖಾಸಗಿ ಬಸ್‌ನಲ್ಲಿ ಸಾಗಿಸುತ್ತಿದ್ದ 98 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಧಾರವಾಡ ಠಾಣಾ ಪೊಲೀಸರು ಜಪ್ತಿ ಮಾಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಧಾರವಾಡದ (Dharawada) ನರೇಂದ್ರ ಕ್ರಾಸ್ ಬಳಿ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಎರಡು ದಿನಗಳ ಹಿಂದೆ ಆ ಬಸ್ ತಡೆದು ಚಿನ್ನಾಭರಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 18.14 ಲಕ್ಷ ಮೌಲ್ಯದ ಕ್ಷೀರ ಭಾಗ್ಯ ಹಾಲಿನ ಪುಡಿ ಜಪ್ತಿ
ಭವರ್‌ಸಿಂಗ್ ಬಂಧಿತ ವ್ಯಕ್ತಿ. ಈತನಿಂದ ಒಬರೊಬ್ಬರಿ 98 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಸಾಮಾನುಗಳನ್ನು ಜಪ್ತಿ ಮಾಡಲಾಗಿದೆ. ಮೇಲ್ನೋಟಕ್ಕೆ ಸುಮಾರು 2 ಕೋಟಿ ರೂ. ನಷ್ಟು ಚಿನ್ನಾಭರಣವನ್ನು ಜಪ್ತಿ ಮಾಡಲಾಗಿತ್ತು ಎಂದು ಊಹಿಸಲಾಗಿತ್ತು. ಆದರೆ, 98 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಸಾಮಾನುಗಳನ್ನು ಜಪ್ತಿ ಮಾಡಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸಕುಮಾರ್ ಅವರೇ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನದ್ದು 80 ಪರ್ಸೆಂಟ್ ಭ್ರಷ್ಟಾಚಾರ ಸರ್ಕಾರ: ಕಟೀಲ್ ವಾಗ್ದಾಳಿ
ಮೂಲತಃ ರಾಜಸ್ಥಾನದವನಾದ ಹಾಗೂ ಹಾಲಿ ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ವಾಸವಿದ್ದ ಭರವರಸಿಂಗ್ ಚೌಹಾಣ್ ಎಂಬಾತ ಯಾವುದೇ ದಾಖಲೆ ಇಲ್ಲದೇ ಒಂದು ಬ್ಯಾಗ್ ಹಾಗೂ ಒಂದು ಸೂಟ್‌ಕೇಸ್‌ನಲ್ಲಿ ಒಟ್ಟು 1237.20 ಗ್ರಾಂ ತೂಕದ ಚಿನ್ನದ ಆಭರಣ ಹಾಗೂ ಚಿನ್ನದ ಬಿಸ್ಕೆಟ್, 15 ಕೆಜಿ ಬೆಳ್ಳಿಯ ಗಟ್ಟಿ ಆಭರಣ ಹಾಗೂ ಸಾಮಾನುಗಳನ್ನು ಸಾಗಿಸುತ್ತಿದ್ದ. ಒಟ್ಟು 98 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಸಾಮಾನುಗಳನ್ನು ಆತನಿಂದ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಿಟೇಲ್ ಸ್ಟೋರ್ ತೆರೆಯಲು ಮುಂದಾದ ಆಪಲ್
ಭವರಸಿಂಗ್ ಕೊರಿಯರ್ ಸರ್ವಿಸ್ ಕೆಲಸ ಮಾಡುತ್ತಿದ್ದ. ರಾಜಸ್ತಾನ (Rajasthan) ಮೂಲದ ನರಪಲ್‌ಸಿಂಗ್ ಬಾಲೋಥ್ ಕೂಡ ಕೊರಿಯರ್ ಸರ್ವಿಸ್ ಕೆಲಸ ಮಾಡುತ್ತಿದ್ದ. ನರಪಲ್ ಸಿಂಗ್ ಕೈಕೆಳಗಡೆ ಈ ಭವರ್‌ಸಿಂಗ್ ಕೆಲಸ ಮಾಡುತ್ತಿದ್ದ. ಸದ್ಯ ಭವರ್‌ಸಿಂಗ್ ಪೊಲೀಸರ ವಶದಲ್ಲಿದ್ದು, ನರಪಲ್‌ಸಿಂಗ್ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಜಾಲ ಬೀಸಲಾಗಿದೆ. ಸದ್ಯ ಧಾರವಾಡದಲ್ಲಿ ಸಿಕ್ಕ ಚಿನ್ನ ಹಾಗೂ ಬೆಳ್ಳಿಯ ಆಭರಣಕ್ಕೆ ಯಾವುದೇ ದಾಖಲೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿಯನ್ನು ಸ್ವತಃ ಐಜಿಪಿಯವರೇ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಛತ್ತೀಸ್‌ಗಢ ಎನ್‌ಕೌಂಟರ್| 35 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ