ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರ ರೇಪ್ & ಮರ್ಡರ್ (Dharmasthala case) ಆಗಿದೆ ಅಂತ ಎಐ ವಿಡಿಯೋ ಮೂಲಕ ಸಂಚಲನ ಸೃಷ್ಟಿಸಿದ್ದ ಯೂಟ್ಯೂಬರ್ ಸಮೀರ್ (YouTuber Sameer) ಬೆಳ್ತಂಗಡಿ (Belthangady) ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದ. ಅಧಿಕಾರಿಗಳು ಆತನಿಗೆ 4:30 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಕಾಲ್ಪನಿಕ ವಿಡಿಯೋ ಮೂಲಕ ದೊಂಬಿ ಸೃಷ್ಟಿಯಲು ಯತ್ನಿಸಿದ್ದಾನೆ ಎಂದು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದ ಧರ್ಮಸ್ಥಳ ಪೊಲೀಸರು ಎರಡೆರಡು ನೊಟೀಸ್ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ನಾಲ್ವರು ವಕೀಲರ ಜೊತೆ ಸಮೀರ್ ಹಾಜರಾಗಿದ್ದ. ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಫುಲ್ ಗ್ರಿಲ್ ಮಾಡಿದ್ದಾರೆ. ಆರಂಭದಲ್ಲಿ ಜೋಷ್‍ನಲ್ಲೇ ಉತ್ತರಿಸಿದ್ದ ಸಮೀರ್ ನಂತರ ತಣ್ಣಗಾಗಿದ್ದಾನೆ.
ಮೂಲಗಳ ಪ್ರಕಾರ ಸಮೀರ್‌ಗೆ ಈ ಕೆಳಗಿನ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದ್ದಾರೆ ಎನ್ನಲಾಗಿದೆ.
* ಯಾವ ಆಧಾರದ ಮೇಲೆ ವಿಡಿಯೋ ಮಾಡಿದೆ..?
* ಈ ಎಐ ವಿಡಿಯೋ ಮಾಡಲು ನಿನಗೆ ಇದ್ದ ಮಾಹಿತಿ ಏನು…?
* ದೊಂಬಿ ಗಲಭೆಗೆ ಪ್ರಚೋದನೆ ನೀಡುವಂತ ವಿಡಿಯೋ ಮಾಡಿದ್ದು ಯಾಕೆ..?
* ಎಲ್ಲರೂ ಮಾತನಾಡಿಕೊಂಡು ಒಟ್ಟಿಗೆ ಸಂಚು ರೂಪಿಸಿದ್ರಾ..?
* ತಮ್ಮದೇ ಲೆಕ್ಕಾಚಾರದಲ್ಲಿ ಧರ್ಮಸ್ಥಳ ವಿರುದ್ಧ ಅಪಪ್ರಚಾರಕ್ಕೆ ಮುಂದಾದ್ರಾ…!?
* ಇಷ್ಟು ಜನರಲ್ಲಿ ವೈಯುಕ್ತಿಕ ಅಜೆಂಡಾ ಇಟ್ಟುಕೊಂಡು ಎಂಟ್ರಿ ಆದವರು ಯಾರು..?
* ಹೋರಾಟದ ಹೆಸರಲ್ಲಿ ಯಾರ್ಯಾರು ತೆರೆಮರೆಯಲ್ಲಿ ಇದ್ದಾರೆ…!?
* ಈ ಎಲ್ಲಾ ಬೆಳವಣಿಗೆಯ ಹಿಂದಿನ ಮಾಸ್ಟರ್ ಮೈಂಡ್ ಯಾರು..?
* ಮಾಸ್ಕ್ ಮ್ಯಾನ್‍ಗೂ ನಿನಗೂ ಏನು ಸಂಬಂಧ..?
* ಉಳಿದ 3 ಮಂದಿಗೂ ನಿನಗೂ ಯಾವಗಿನಿಂದ ಪರಿಚಯ…? ಎಂದು ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ದೂತನ ಬಂಡವಾಳ ಬಯಲು
ಇಲ್ಲ ಸಲ್ಲದ ಸುಳ್ಳು ಕತೆಗಳನ್ನು ಸೃಷ್ಟಿಸಿ ಎಲ್ಲರನ್ನೂ ಮರಳು ಮಾಡಿದ್ದವನೇ ಯೂಟ್ಯೂಬರ್ ಸಮೀರ್ ಎಂ.ಡಿ. ಯಾವುದೋ ಕೋಣೇಲಿ ಕೂತ್ಕೊಂಡು ಎಐ ವಿಡಿಯೋಗಳ ಮೂಲಕ ಜನರಿಗೆ ಮಂಕುಬೂದಿ ಎರಚಿ ಲೈಕ್ಸ್, ವೀವ್ಸ್ ಪಡೆದಿದ್ದ ದೂತನ ಬಂಡವಾಳ ಬಯಲಾಗಿದೆ. ತಾನು ಹೇಳಿದ್ದೇ ಸತ್ಯ ಅಂತ ನಂಬಿಸಿ, ಶಿವತಾಂಡವ ಶುರುವಾಗುತ್ತೆ. ನೋಡಿ ಸತ್ಯ ಹೇಗೆ ಹೊರಬರುತ್ತದೆ? ಎಲ್ಲದಕ್ಕೂ ಸಾಕ್ಷ್ಯ ಇದೆ ಅಂತಾ ಪುಂಖಾನುಪುಂಖವಾಗಿ ಸುಳ್ಳಿನ ಅರಮನೆಯನ್ನೇ ಕಟ್ಟಿದ್ದ. ದೂರುದಾರನಿಗೆ ʻಭೀಮ’ ಎಂದು ಹೆಸರಿಟ್ಟಿದ್ದೇ ಸುಳ್ಳುಕೋರ ಸಮೀರ್. ಅನನ್ಯಾ ಭಟ್ ಎನ್ನುವ ನಕಲಿ ಯುವತಿಯನ್ನು ಸೃಷ್ಟಿಸಿ ಧರ್ಮಸ್ಥಳ ಕ್ಷೇತ್ರಕ್ಕೆ, ಭಕ್ತರ ಭಾವನೆಗೆ ಚ್ಯುತಿ ಬರುವಂತೆ ಮಾಡಿದ್ದೇ ಈತ. ಬೀದಿಗೆ ಬನ್ನಿ ಹೋರಾಟ ಮಾಡಿ ಅಂತಾನೂ ಕರೆ ಕೊಟ್ಟಿದ್ದ. ಈತನ ವಿಡಿಯೋಗೆ ಫಂಡಿಂಗ್ ಬರುತ್ತಿದೆ ಅನ್ನೋ ಆರೋಪವೂ ಇದೆ.