ಬೆಂಗಳೂರು: ಧರ್ಮಸ್ಥಳ ಕ್ಷೇತ್ರಕ್ಕೆ (Dharmasthala Temple) ಅವಮಾನ ಎಸಗಿದ ಸಮೀರ್ (Youtuber Sameer) ಬಂಧನಕ್ಕೆ ಹೋದಾಗ ಆತ ನಾಪತ್ತೆಯಾಗಿರುವುದು ವಿಚಾರ ಬೆಳಕಿಗೆ ಬಂದಿದೆ.
ಸಮೀರ್ ವಿರುದ್ಧ ಸರಣಿ ದೂರುಗಳು ರಾಜ್ಯಾದ್ಯಂತ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಗೃಹ ಇಲಾಖೆ ಆತನ ಬಂಧನಕ್ಕೆ ಸೂಚಿಸಿತ್ತು. ಅದರಂತೆ ಆತನ ಮೊಬೈಲ್ ಸಂಖ್ಯೆಯ ಮೂಲಕ ಜಾಗ ಪತ್ತೆ ಹಚ್ಚಿದಾಗ ಬನ್ನೇರುಘಟ್ಟದ ನಿವಾಸ ತೋರಿಸಿತ್ತು.
ಈ ಆಧಾರದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಧರ್ಮಸ್ಥಳ ಠಾಣೆಯ ಸಬ್ ಇನ್ಸ್‌ಪೆಕ್ಟರ್, ಇಬ್ಬರು ಪೊಲೀಸ್ ಸಿಬ್ಬಂದಿ ಸಮೀರ್‌ನನ್ನು ಬಂಧಿಸಲು ಜಿಗಣಿಯ ಹುಲ್ಲಳ್ಳಿಯ ಕ್ರೈಸ್ಟ್ ಕಾಲೇಜು ಪಕ್ಕದಲ್ಲಿರುವ ಮನೆಗೆ ಬಂದಿದ್ದಾರೆ. ಧರ್ಮಸ್ಥಳ ಪೊಲೀಸರಿಗೆ ಬನ್ನೇರುಘಟ್ಟ ಪೊಲೀಸರು ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಗಿರೀಶ್ ಮಟ್ಟಣ್ಣನವರ್, ತಿಮರೋಡಿ, ಸಮೀರ್ ವಿರುದ್ಧ ಸ್ನೇಹಮಯಿ ಕೃಷ್ಣ ದೂರು
ತಾಯಿ, ಸಹೋದರಿ ಜೊತೆ ನೆಲೆಸಿದ್ದ ಸಮೀರ್ ಪೊಲೀಸರು ಮನೆಗೆ ಬಂದಾಗ ಆತ ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿ ಇಲ್ಲದ ಕಾರಣ ಸಮೀರ್ ಬಂದ ತಕ್ಷಣ ತಿಳಿಸುವಂತೆ ಕುಟುಂಬಸ್ಥರಿಗೆ ತಿಳಿಸಿ ಪೊಲೀಸರು ತೆರಳಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದ ಅನಾಮಿಕನ ಹುಟ್ಟೂರಲ್ಲಿ ʻಪಬ್ಲಿಕ್ ಟಿವಿʼ – ಮಾಸ್ಕ್ ಮ್ಯಾನ್ ಊರು ಯಾವ್ದು? ಓದಿದ್ದೇನು?
ಈಗಾಗಲೇ ಸಮೀರ್‌ಗೆ ಮೂರು ಬಾರಿ ಪೊಲೀಸರು ನೋಟಿಸ್ ನೀಡಿದ್ದರು. ಮೂರು ಬಾರಿ ನೋಟಿಸ್ ನೀಡಿದರೂ ಪ್ರತಿಕ್ರಿಯೆ ನೀಡಿಲ್ಲ.ಹೀಗಾಗಿ ವಾರೆಂಟ್ ಪಡೆದು ಪೊಲೀಸರು ಬಂಧನಕ್ಕೆ ಆಗಮಿಸಿದ್ದರು.