ಬೆಂಗಳೂರು: ಈ ತಿಂಗಳ ಅಂತ್ಯಕ್ಕೆ ಧರ್ಮಸ್ಥಳ ಕೇಸ್ (Dharmasthala Case) ತನಿಖೆಗೆ ಸಂಬಂಧಿಸಿದಂತೆ ಎಸ್‌ಐಟಿ (SIT) ವರದಿ ಸಲ್ಲಿಕೆ ಆಗುವ ಸಾಧ್ಯತೆ ಇದೆ.
ಈ ತಿಂಗಳಲ್ಲಿ ಪ್ರಕ್ರಿಯೆ ಮುಗಿಸಲು ಸರ್ಕಾರದಿಂದ ಸೂಚಿಸಿರುವುದಾಗಿ ‘ಪಬ್ಲಿಕ್ ಟಿವಿ’ಗೆ ಉನ್ನತ ಮೂಲಗಳು ಮಾಹಿತಿ ನೀಡಿವೆ. ಮುಂದಿನ ವಾರದಲ್ಲಿ ಧರ್ಮಸ್ಥಳ ಕೇಸ್ ಎಸ್‌ಐಟಿ ರಿಪೋರ್ಟ್ ನ್ಯಾಯಾಲಯಕ್ಕೆ ರಿಪೋರ್ಟ್ ಸಲ್ಲಿಸಲು ಸಿದ್ಧತೆ ನಡೆದಿದ್ದು, ಮುಂದಿನ ವಾರ ಧರ್ಮಸ್ಥಳ ರಹಸ್ಯ ಬಯಲಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಜಾತಿ, ಧರ್ಮದ ಹೆಸರಲ್ಲಿ ಜಗಳ ಮಾಡೋದ್ರಲ್ಲಿ ನಿಮ್ಮ ಜಿಲ್ಲೆ ನಂ.1 ಇತ್ತು; ಮಂಗಳೂರಲ್ಲಿ ಸಿದ್ರಾಮಯ್ಯ ಭಾಷಣ
ಜು.20 ರಂದು ಎಸ್‌ಐಟಿ ರಚನೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿತ್ತು. ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಗಳ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿತ್ತು. ಅದಾದ ಬಳಿಕ ತನಿಖೆಯ ಭಾಗವಾಗಿ ಸಾಕಷ್ಟು ಬೆಳವಣಿಗೆಗಳು ಕೂಡ ನಡೆದಿದ್ದವು. ತದನಂತರ ದೂರು ಕೊಟ್ಟವರೇ ಉಲ್ಟಾ ಹೊಡೆದು ಪ್ರಕರಣದ ತಿರುವನ್ನೇ ಬದಲಾಯಿಸಿದ್ದರು.
ಆದರೆ ಈಗ 100 ದಿನಗಳ ಬಳಿಕ ಎಸ್‌ಐಟಿ ವರದಿ ಕುತೂಹಲ ಹೆಚ್ಚಿದ್ದು, ಎಲ್ಲರ ಅಸಲಿಯತ್ತು ಬಯಲಾಗುತ್ತಾ ಕಾದುನೋಡಬೇಕಿದೆ.

