– ಜಯಂತ್ ಮನೆಯಲ್ಲೇ 8 ದಿನಗಳ ಕಾಲ ಹೆಣೆಯಲಾಗಿತ್ತಾ ಷಡ್ಯಂತ್ರದ ಬಲೆ?
ಮಂಗಳೂರು: ಬುರುಡೆ ಪ್ರಕರಣದಲ್ಲಿ (Dharmasthala Case) ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದ್ದು, ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬುರುಡೆ ಪ್ರಕರಣದಲ್ಲಿ ರಾಜಧಾನಿ ಬೆಂಗಳೂರಿನ (Bengaluru) ನಂಟು ಬೆಸೆದುಕೊಂಡಿದೆ. ಧರ್ಮಸ್ಥಳ ಷಡ್ಯಂತ್ರಕ್ಕೆ ಬೆಂಗಳೂರಿನಲ್ಲೇ ಸ್ಕೆಚ್ ನಡೆದಿರೋದು ಬೆಳಕಿಗೆ ಬಂದಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಆರೋಪ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು (SIT Officers) ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಬೆಳ್ತಂಗಡಿಯಿಂದ ಬೆಂಗಳೂರಿಗೆ ಕರೆತಂದಿದ್ದಾರೆ. ಬೆಳ್ಳಂಬೆಳಗ್ಗೆ ಚಿನ್ನಯ್ಯನನ್ನು ಮಹಜರು ಟ್ರಾವೆಲ್‌ಗೆ ಎಸ್‌ಐಟಿ ಅಧಿಕಾರಿಗಳು ಕರೆದುಕೊಂಡು ಬಂದಿದ್ದಾರೆ. ಚಿನ್ನಯ್ಯ ಹೇಳಿಕೆಯಲ್ಲಿ ತಿಳಿಸಿರುವ ಕೆಲವು ಸ್ಥಳಗಳ ಮಹಜರಿಗೆ ಕರೆತರಲಾಗಿದೆ. ಆದರೆ ಆರಂಭದಲ್ಲಿ ತಮಿಳುನಾಡು, ಮಂಡ್ಯ ಕಡೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೀಗ ಪ್ರಕರಣದಲ್ಲಿ ಅತಿದೊಡ್ಡ ರಹಸ್ಯ ರಿವೀಲ್ ಆಗಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ಲ್ಲಿ SIT ತನಿಖೆಗೆ ಸಮಯ ನಿಗದಿ ಮಾಡಿಲ್ಲ: ಪರಮೇಶ್ವರ್
ಬೆಂಗಳೂರು ಲಿಂಕ್
ಧರ್ಮಸ್ಥಳ ಬರುಡೆ ಪ್ರಕರಣಕ್ಕೆ ಬೆಂಗಳೂರು ಲಿಂಕ್ ಇರೋದು ಬೆಳಕಿಗೆ ಬಂದಿದೆ. ಧರ್ಮಸ್ಥಳದ ಷಡ್ಯಂತ್ರದ ಸ್ಕೆಚ್ ಬೆಂಗಳೂರಿನಲ್ಲೇ ನಡಿದಿದ್ದು, ತಿಮರೋಡಿ ಆಪ್ತ ಜಯಂತ್ (Jayanth) ಬುರುಡೆ ಷಡ್ಯಂತ್ರದ ಸೂತ್ರಧಾರಿಯಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ತಿಮರೋಡಿ ಆಪ್ತ ಜಯಂತ್, ಚಿನ್ನಯ್ಯನಿಗೆ ತಲೆಬುರುಡೆ ಕೊಟ್ಟಿದ್ನಾ ಅನ್ನೋ ಅನುಮಾನ ಮೂಡಿದ್ದು, ವಿಚಾರಣೆ ವೇಳೆ ಚಿನ್ನಯ್ಯ ಜಯಂತ್ ಹೆಸರು ಬಾಯ್ಬಿಟ್ಟಿದ್ದಾನೆ. ಷಡ್ಯಂತ್ರದ ಪ್ರಮುಖ ಪಾತ್ರಧಾರಿಯೇ ಜಯಂತ್ ಎನ್ನಲಾಗ್ತಿದ್ದು, ಚಿನ್ನಯ್ಯನ ಹೇಳಿಕೆ ಆಧಾರದ ಮೇಲೆ ಬೆಂಗಳೂರಿನ ಮಲ್ಲಸಂದ್ರದಲ್ಲಿರುವ ಮನೆ ಮೇಲೆ ಎಸ್‌ಐಟಿ ರೇಡ್ ಮಾಡಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್; ಎಸ್‌ಐಟಿಗೆ 500 ಪುಟಗಳ ದಾಖಲೆ ನೀಡಿದ ಗಿರೀಶ್ ಮಟ್ಟಣ್ಣನವರ್
ಚಿನ್ನಯ್ಯ ಸಮ್ಮುಖದಲ್ಲಿ ಮಲ್ಲಸಂದ್ರದಲ್ಲಿರುವ ಜಯಂತ್ ಮನೆಯಲ್ಲಿ ಮಹಜರ್ ನಡೆದಿದ್ದು, ಎಸ್‌ಐಟಿ ಇಂಚಿಂಚೂ ಶೋಧ ನಡೆಸಿದೆ. ಬಾಡಿಗೆ ಮನೆ ಹೊಂದಿರುವ ಜಯಂತ್, ಪಿತೂರಿ ಸಾಧಕರ ಕೂಟದ ಸಭೆ ನಡೆಸಿದ್ದರು ಅನ್ನೋ ಅನುಮಾನ ಇದೆ. ಇಲ್ಲೇ ಬುರುಡೆ ಗ್ಯಾಂಗ್ ಧರ್ಮಸ್ಥಳ ವಿರುದ್ಧ ಷಡ್ಯಂತ್ರದ ಮಸಲತ್ತು ಹೆಣೆಯಲಾಗಿತ್ತಾ ಅನ್ನೋ ಶಂಕೆ ಇದ್ದು, ಮಸಲತ್ತಿನ ಸಭೆಯಲ್ಲಿ ಚಿನ್ನಯ್ಯ ಭಾಗಿಯಾಗಿದ್ದ ಅನ್ನೋ ಆಧಾರದಲ್ಲಿ ಸಾಕ್ಷಿಗಾಗಿ ಎಸ್‌ಐಟಿ ತಲಾಶ್ ನಡೆಸಿದೆ. ಕ್ರೈಂ ಸೀನ್ ಮರು ಸೃಷ್ಟಿಸಿ ಮನೆಯ ಮುಂಬಾಗಿಲಿನಿಂದಲೇ ಎಸ್‌ಐಟಿ ಮಹಜರು ನಡೆಸಿದೆ. ಇದನ್ನೂ ಓದಿ: SITಯಿಂದ ತಿಮರೋಡಿ, ಚಿನ್ನಯ್ಯ ವಿಚಾರಣೆ – ಸಮೀರ್ ಆದಾಯ ಮೂಲ ಕೆದಕಿದ ಖಾಕಿ, ಇನ್ನಷ್ಟು ರಹಸ್ಯ ಬಯಲು!
8 ದಿನಗಳ ಕಾಲ ನಡೆದಿತ್ತಾ ಮಹಾ ಪ್ಲ್ಯಾನ್
ಮಂಗಳೂರಿಗೆ ಭೇಟಿ ಕೊಡುವ ಮುನ್ನ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಹೆಣೆಯಲಾಗಿದೆ ಎನ್ನುವ ಅನುಮಾನ ಇದೆ. ಜಯಂತ್ ಮನೆಯಲ್ಲಿಯೇ ಕುಳಿತು ನಿರಂತರ ಪ್ಲ್ಯಾನ್ ಮಾಡಿದ್ದು, ಜಡ್ಜ್ ಮುಂದೆ ಹೇಳಿಕೆ ನೀಡಲು ಸ್ಕ್ರಿಪ್ಟ್ ನೀಡಲಾಗಿತ್ತಾ ಅನ್ನೊ ಶಂಕೆಯೂ ವ್ಯಕ್ತವಾಗಿದೆ. ಮಲ್ಲಸಂದ್ರದಲ್ಲಿರುವ ಜಯಂತ್ ಬಾಡಿಗೆ ಮನೆಯಲ್ಲಿ ಚಿನ್ನಯ್ಯ ಕಳೆದ ಏಪ್ರಿಲ್‌ನಲ್ಲಿ 8 ದಿನಗಳ ಕಾಲ ಇದ್ದ. ಇದೇ ವೇಳೆ ಬುರುಡೆ ಷಡ್ಯಂತ್ರ ಹೆಣೆಯಲಾಗಿದೆ ಎನ್ನಲಾಗ್ತಿದೆ.
ಸುಜಾತ ಭಟ್‌ರನ್ನು ವಶಕ್ಕೆ ಪಡೆಯೋದು ಅನುಮಾನ
ಈ ನಡುವೆ ಸುಜಾತಾ ಭಟ್‌ಗೆ ಎಸ್‌ಐಟಿಯಿಂದ ಬಿಗ್ ರಿಲೀಫ್ ಸಿಕ್ಕಿದೆ. ಸುಜಾತ ಭಟ್‌ರನ್ನು ಎಸ್‌ಐಟಿ ವಶಕ್ಕೆ ಪಡೆಯೋದು ಅನುಮಾನ ಎನ್ನಲಾಗಿದೆ. ವಯಸ್ಸು ಹಾಗೂ ಅನಾರೋಗ್ಯದ ಕಾರಣ ವಶಕ್ಕೆ ಪಡೆಯದಿರಲು ತೀರ್ಮಾನಿಸಲಾಗಿದೆ. ಸುಜಾತ ಭಟ್ ಮೇಲೆ ಇರುವುದು ತಪ್ಪು ಮಾಹಿತಿ ನೀಡಿದ ಆರೋಪ. ತಪ್ಪು ಮಾಹಿತಿಯಲ್ಲೂ ತಮ್ಮದೇ ಕಥೆ ಹೇಳಿಕೊಂಡಿದ್ದಾರೆಯೇ ಹೊರತು ನೇರವಾಗಿ, ನಿರ್ದಿಷ್ಟವಾಗಿ ಯಾರ ಮೇಲೂ ಆರೋಪ ಮಾಡುತ್ತಿಲ್ಲ. ತಮ್ಮ ಸಮಸ್ಯೆಯನ್ನು ಯಾರು ಕೇಳಿಸಿಕೊಳ್ಳದಿದ್ದಾಗ ಮಗಳ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಆಗ ಸುಜಾತ ಭಟ್‌ರನ್ನ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಬುರುಡೆ ಗ್ಯಾಂಗ್ ಮುಂದಾಗಿದೆ. ಅಲ್ಲದೇ ವಿಚಾರಣೆ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಇವರ ಕುಟುಂಬದ ಆಸ್ತಿ ಸೇರಿರುವುದು ಗೊತ್ತಾಗಿದೆ. ಅದರ ಲೆಕ್ಕದಲ್ಲಿ ಈಗ ನನಗೆ ಹಣ ಸಿಕ್ಕರೆ ನನ್ನ ಜೀವನ ನಿರ್ವಾಹಣೆಗೆ ಸಹಾಯ ಆಗುತ್ತದೆ ಎಂದು ಕಣ್ಣೀರಿಟ್ಟಿದ್ದಾರೆ. ತೀರ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಬಹುದಾದ ಪ್ರಕರಣ ಅಲ್ಲ ಎಂಬ ಕಾರಣಕ್ಕೆ ಸಧ್ಯಕ್ಕೆ ವಶಕ್ಕೆ ಪಡೆಯುವ ಅಥವ ಬಂಧನ ಮಾಡದಿರಲು ಎಸ್‌ಐಟಿ ತೀರ್ಮಾನಿಸಿದೆ.