– ಕಾಂಗ್ರೆಸ್ ಶಾಸಕರು ಕೂಡ ಪ್ರಕರಣದ ನಂತ್ರ ಧರ್ಮಸ್ಥಳಕ್ಕೆ ಹೋಗ್ತಿರೋದು ಏಕೆ?
– ವಿದೇಶಿ ಫಂಡಿಂಗ್ ಇದ್ರೆ ಕೇಂದ್ರ ಸರ್ಕಾರವೇ ನೋಡಬೇಕು ಎಂದ ಗೃಹಸಚಿವ
ಬೆಂಗಳೂರು: ಮಂಜುನಾಥ ಸ್ವಾಮಿ ಯಾರೋ ಒಬ್ಬರಿಗೆ ಸೇರಿಲ್ಲ, ಎಲ್ಲರನ್ನೂ ಕರೆಸಿಕೊಳ್ತಾನೆ. ಯಾರು ಬೇಕಾದರೂ ಹೋಗಿ ಮಂಜುನಾಥನ ದರ್ಶನ ಮಾಡಬಹುದು. ಅದಕ್ಕೆ ಯಾರ ಆಕ್ಷೇಪವೂ ಇಲ್ಲ. ಆದ್ರೆ ಧರ್ಮಸ್ಥಳ ಪ್ರಕರಣಗಳ (Dharmasthala Case) ನಂತರ ಹೋಗ್ತಿರೋದು ಏಕೆ? ಧರ್ಮಸ್ಥಳಕ್ಕೆ ಕಳಂಕ ಅಂಟಿದೆ ಅಂತ ಹೋಗ್ತಿದ್ದಾರೋ ಅಥವಾ ತಮ್ಮ ಕಳಂಕ ಕಳೆದುಕೊಳ್ಳಲು ಹೋಗ್ತಿದ್ದಾರೋ ಗೊತ್ತಿಲ್ಲ ಅಂತ ಗೃಹಸಚಿವ ಜಿ. ಪರಮೇಶ್ವರ್ (G Parameshwar), ಧರ್ಮಸ್ಥಳ ಯಾತ್ರೆ ಕೈಗೊಂಡ ಕಾಂಗ್ರೆಸ್ ಶಾಸಕರಿಗೆ ಕುಟುಕಿದರು.
ಕಾಂಗ್ರೆಸ್ ಶಾಸಕರಿಂದ (Congress MLAs) ಧರ್ಮಸ್ಥಳ ಚಲೋ ಆರಂಭವಾಗಿರುವ ಕುರಿತು ಮಾತನಾಡಿದ ಸಚಿವರು, ಮಂಜುನಾಥ ಯಾರೋ ಒಬ್ಬರಿಗೆ ಸೇರಿಲ್ಲ. ಮಂಜುನಾಥ ಎಲ್ಲರನ್ನೂ ಕರೆಸಿಕೊಳ್ತಾನೆ. ಯಾರು ಬೇಕಾದರೂ ಹೋಗಿ ಮಂಜುನಾಥನ ದರ್ಶನ ಮಾಡಿ ಬರಬಹುದು. ಮಂಜುನಾಥನ ದರ್ಶನಕ್ಕೆ ಹೋಗಿ ಬರೋದಿಕ್ಕೆ ಯಾರ ಆಕ್ಷೇಪವೂ ಇಲ್ಲ. ಆದ್ರೆ ಧರ್ಮಸ್ಥಳ ಪ್ರಕರಣಗಳ ನಂತರ ಹೋಗ್ತಿರೋದು ಏಕೆ ಅಂತ ಪ್ರಶ್ನಿಸಿದರು. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣಕ್ಕೆ ದೊಡ್ಡ ತಿರುವು – ಸೌಜನ್ಯ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದವರಿಗೆ SIT ಬುಲಾವ್
ಬಿಜೆಪಿ, ಜೆಡಿಎಸ್ (BJP – JDS) ನವ್ರೇ ಇರಲಿ, ಈಗ ಕಾಂಗ್ರೆಸ್‌ನವ್ರು ಯಾಕೆ ಈಗ ಹೋಗ್ತಿರೋದು. ಈ ಮೊದಲೇ ಯಾಕೆ ಹೋಗಲಿಲ್ಲ? ಸಹಜವಾಗಿ ಇದು ರಾಜಕೀಯ ಅನಿಸಿಕೊಳ್ಳುತ್ತೆ. ಅವರು ಹೋದ್ರು ಅಂತ ಇವ್ರೂ ಹೋಗ್ತಿದ್ದಾರೆ. ಧರ್ಮಸ್ಥಳಕ್ಕೆ ಕಳಂಕ ಅಂಟಿದೆ ಅಂತ ಹೋಗ್ತಿದ್ದಾರೋ ಅಥವಾ ತಮ್ಮ ಕಳಂಕ ಕಳೆದುಕೊಳ್ಳಲು ಹೋಗ್ತಿದ್ದಾರೋ ಗೊತ್ತಿಲ್ಲ. ಅವರು ದೇವರ ಮುಂದೆ ಏನು ಕೇಳಿಕೊಂಡಿರ್ತಾರೆ ಅಂತ ಯಾರಿಗೆ ಗೊತ್ತು? ಅಂತ ಟಾಂಗ್ ಕೊಟ್ಟರು. ಇದನ್ನೂ ಓದಿ: ತಲೆಬುರುಡೆ ರಹಸ್ಯ | ಶೀಘ್ರದಲ್ಲೇ ಎಲ್ಲದಕ್ಕೂ ಕ್ಲ್ಯಾರಿಟಿ ಕೊಡ್ತೀನಿ: ಯೂಟ್ಯೂಬರ್ ಸಮೀರ್ ಫಸ್ಟ್ ರಿಯಾಕ್ಷನ್
ಸೌಜನ್ಯ ಪ್ರಕರಣದ ಮರು ತನಿಖೆ ಅಂತ ಹೇಳಲ್ಲ:
ಟರ್ಮ್ಸ್ ಆಫ್ ರೆಫರೆನ್ಸ್‌ನಲ್ಲಿ ಉಲ್ಲೇಖವಾಗದಿದ್ದರೂ ಸೌಜನ್ಯ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆಸ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಸ್‌ಐಟಿ ಅಧಿಕಾರಿಗಳು ಯಾವ ಆಧಾರದಲ್ಲಿ ಮಾಡಿದ್ದಾರೋ ಗೊತ್ತಿಲ್ಲ. ಅವರಿಗೆ ಏನು ಮಾಹಿತಿ ಸಿಕ್ಕಿದೆಯೋ ನನಗೆ ಗೊತ್ತಿಲ್ಲ. ತನಿಖೆಯಲ್ಲಿ ಬೇಕಾದಷ್ಟು ವಿಚಾರ ಕಲೆ ಹಾಕಿರ್ತಾರೆ. ಎಸ್‌ಐಟಿಯವ್ರಿಗೆ ಮಾಹಿತಿ ಕೊಡೋರು ಏನೋ ಮಾಹಿತಿ ಕೊಟ್ಟಿರಬಹುದು, ಅದಕ್ಕಾಗಿ ಉದಯ್ ಜೈನ್‌ರನ್ನ ಕರೆಸಿರಬೇಕು. ಟರ್ಮ್ಸ್ ಆಫ್ ರೆಫರೆನ್ಸ್ ನಲ್ಲಿ ಇಲ್ಲದಿದ್ರೂ ಲಿಂಕ್ ಇರುತ್ತಲ್ವಾ? ಲಿಂಕ್ ಗಳ ಪರಿಶೀಲನೆ ಮಾಡಬೇಕಲ್ವಾ? ಇಲ್ಲದಿದ್ರೆ ತನಿಖೆ ಪೂರ್ಣ ಆಗೋದಿಲ್ಲ. ಕ್ರಾಸ್ ರೆಫರೆನ್ಸ್ ನಲ್ಲಿ ಯಾರು ಏನು ಮಾಹಿತಿ ಕೊಟ್ಟಿದ್ದಾರೋ, ಧರ್ಮಸ್ಥಳ ಪ್ರಕರಣಗಳ ಸಂಬಂಧ ಏನೋ ಲಿಂಕ್ ಸಿಕ್ಕಿರಬೇಕು. ಇದು ಸೌಜನ್ಯ ಪ್ರಕರಣದ ಮರು ತನಿಖೆ ಅಂತ ನಾನು ಹೇಳೋದಿಲ್ಲ. ಯಾವ ಲಿಂಕ್, ಯಾವ ಉದ್ದೇಶದಿಂದ ತನಿಖೆ ಮಾಡ್ತಿದ್ದಾರೆ ಅಂತ ಆಮೇಲೆ ಗೊತ್ತಾಗುತ್ತೆ. ಇದರ ಬಗ್ಗೆ ನಾವು ಈಗಲೇ ಏನೂ ಹೇಳೋದಿಕ್ಕೆ ಆಗೋದಿಲ್ಲ ಅಂತ ಸ್ಪಷ್ಟಪಡಿಸಿದ್ರು.
ಇದೇ ವೇಳೆ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ತನಿಖೆ ಎನ್‌ಐಎಗೆ ಕೊಡಿ ಎಂದು ಅಮಿತ್ ಶಾಗೆ ಹೆಚ್‌ಡಿಕೆ ಮನವಿ ವಿಚಾರ ಕುರಿತು ಮಾತನಾಡಿ, ಅವರು ಮನವಿ ಮಾಡಿರಬಹುದು, ಎಸ್‌ಐಟಿ ಸರಿಯಿಲ್ಲ ಅಂದಿದ್ರು. ತನಿಖೆಯೇ ಸರಿಯಲ್ಲ ಅಂತಿದ್ದವರು ಈಗ ಎನ್‌ಐಎ ತನಿಖೆ ಮಾಡಲಿ ಅಂತಿದ್ದಾರೆ, ಅದೂ ಕೂಡಾ ತನಿಖೆಯೇ ಅಲ್ವಾ? ವಿದೇಶದಿಂದ ಹಣ ಬಂದಿದೆ ಅಂತ ಆರೋಪ ಬಂದಾಗ ಅದನ್ನು ಕೇಂದ್ರ ಸರ್ಕಾರವೇ ನೋಡಬೇಕು, ರಾಜ್ಯ ಸರ್ಕಾರ ನೋಡೋಕ್ಕಾಗಲ್ಲ. ಎಸ್‌ಐಟಿ ತನಿಖೆ ಮಾಡ್ತಿರೋದು ಹೆಣಗಳನ್ನು ಹೂಳಿರುವ ಬಗ್ಗೆ. ಇದರಲ್ಲಿ ಏನಾದ್ರೂ ನ್ಯೂನತೆಗಳಿದ್ರೆ ಬೇರೆ ಆಕ್ಷನ್ ನೋಡಬಹುದು. ಎನ್‌ಐಎ ಮಧ್ಯಪ್ರವೇಶ ಮಾಡುವ ಮುನ್ನ ಜಸ್ಟಿಫಿಕೇಷನ್ ಮಾಡಬೇಕು. ಅದು ಆದರೆ ರಾಜ್ಯ ಸರ್ಕಾರಕ್ಕೆ ಆಪ್ಷನ್ ಇರೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶಿ ಫಂಡಿಂಗ್ – ತನಿಖೆಗೆ ಇಡಿ ಎಂಟ್ರಿ