ಚಿಕ್ಕಬಳ್ಳಾಪುರ: ಇತಿಹಾಸ ಪ್ರಸಿದ್ಧ ಚಿಕ್ಕಬಳ್ಳಾಪುರ ನಗರದ ಜಾಲಾರಿ ಗಂಗಮಾಂಭ ದೇವಿಯ ಶ್ರೀ ಧರ್ಮರಾಯ ಸ್ವಾಮಿ ಹೂವಿನ ಕರಗ ಮಹೋತ್ಸವ ಸಂಭ್ರಮ-ಸಡಗರ ಹಾಗೂ ಅದ್ಧೂರಿಯಿಂದ ನಡೆಯಿತು.
ಕರಗದ ಪೂಜಾರಿ ಮೇಲೂರು ನಿವಾಸಿ ಧಮೇಂದ್ರ ಹೂವಿನ ಕರಗ ಹೊರುತ್ತಿದ್ದಂತೆ, ಹೂವಿನ ಕರಗಕ್ಕೆ ಮತ್ತಷ್ಟು ಕಳೆ ಬಂದು, ಸಾಕ್ಷಾತ್ ದೇವರೆ ಬಂದವರಂತೆ ಭಕ್ತರು ಕರಗಕ್ಕೆ ಕೈಮುಗಿದು ನಮಸ್ಕರಿಸುತ್ತಿದ್ದರು. ಇದನ್ನೂ ಓದಿ: PUBLiC TV ವಿದ್ಯಾಪೀಠ | ವಿದ್ಯಾರ್ಥಿಗಳಿಗೆ ಸ್ಪಾಟ್‌ನಲ್ಲೇ ಸಿಗಲಿದೆ ಸರ್ಪ್ರೈಸ್ ಗಿಫ್ಟ್ – ತಪ್ಪದೇ ಬನ್ನಿ…
ರಾತ್ರಿಯಿಡೀ ನಡೆದ ಕರಗ ಮಹೋತ್ಸವ, ನಗರದ ಗಂಗಮ್ಮ ಗುಡಿ ರಸ್ತೆ, ಎಂ.ಜಿ.ರಸ್ತೆ, ಬಿಬಿ ರಸ್ತೆ, ಬಜಾರ್ ರಸ್ತೆಯ ಮೂಲಕ ಕರಗ ಮೆರವಣಿಗೆ ನಡೆಸಲಾಯಿತು. ಕರಗ ಮಹೋತ್ಸವದಲ್ಲಿ ಸಾವಿರಾರು ಜನ ಭಕ್ತರು ಪಾಲ್ಗೊಂಡು ಮೊಬೈಲ್‌ನಲ್ಲಿ ಸೆಲ್ಫಿಗೆ ಮುಗಿಬಿದ್ದ ದೃಶ್ಯಗಳು ಕಂಡು ಬಂತು. ಇನ್ನೂ ಸಂಸದ ಡಾ ಕೆ.ಸುಧಾಕರ್ ಸಹ ಕರಗ ಕಣ್ತುಂಬಿಕೊಂಡರು. ಇದನ್ನೂ ಓದಿ: PUBLiC TV Impact | ಜನಿವಾರ ಹಾಕಿದ್ದಕ್ಕೆ ಸಿಇಟಿಗೆ ನೋ ಎಂಟ್ರಿ – ಫ್ರೀ ಎಂಜಿನಿಯರಿಂಗ್ ಸೀಟ್ ಆಫರ್ ಕೊಟ್ಟ ಈಶ್ವರ್ ಖಂಡ್ರೆ