ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣವಾಗಿ ಅರೆಸ್ಟ್ ಆಗಿರುವ ದರ್ಶನ್‌ರನ್ನು (Darshan) ಇತ್ತೀಚೆಗೆ ರಕ್ಷಿತಾ ಪ್ರೇಮ್ ದಂಪತಿ, ವಿನೋದ್ ಪ್ರಭಾಕರ್ ಭೇಟಿಯಾದ ಬೆನ್ನಲ್ಲೇ ಈಗ ನಟ ಧನ್ವೀರ್ ಕೂಡ ಪರಪ್ಪನ ಅಗ್ರಹಾರಕ್ಕೆ ತೆರಳಿ ಭೇಟಿಯಾಗಿದ್ದಾರೆ. ಬಳಿಕ ‘ಕೈವ’ ನಟ ಧನ್ವೀರ್ (Dhanveer Gowda) ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಮಾಲಿಕನಾದ ಶಿವಣ್ಣ- ‘ಉತ್ತರಕಾಂಡ’ ಚಿತ್ರದ ಫಸ್ಟ್ ಲುಕ್ ಔಟ್
ದರ್ಶನ್ ನನಗೆ ಯಾವಾಗಲೂ ಅಣ್ಣ ಅಂತಾನೇ ಹೇಳ್ತೀನಿ. ಅವರ ಅಭಿಮಾನಿಗಳು ಯಾರು ಆತಂಕಕ್ಕೆ ಒಳಗಾಗಬಾರದು. ನಾನು ಎಲ್ಲಿಯೂ ಕೂಡ ಮಾತನಾಡುತ್ತಿಲ್ಲ ಅಂತ ಎಲ್ಲರೂ ಹೇಳ್ತಿದ್ದರು. ಆದರೆ ಇದು ಮಾತನಾಡುವ ಸಂದರ್ಭವಲ್ಲ. ತನಿಖೆ ನಡೆಯುತ್ತಿರುವ ವೇಳೆ, ನಾವು ಮಾತನಾಡುವುದರಿಂದ ಎಲ್ಲವೂ ಸರಿ ಹೋಗೋದಿಲ್ಲ ಅಂತ ಗೊತ್ತಿತ್ತು ಎಂದು ಧನ್ವೀರ್ ಗೌಡ ಮಾತನಾಡಿದ್ದಾರೆ.
- Advertisement
- Advertisement
ಎಂದಿಗೂ ಕೂಡ ದರ್ಶನ್ ಅಣ್ಣನನ್ನು ನಾನು ಅಣ್ಣ ಅಂತ ಹೇಳಲು ಹೆದರಿಕೆಯಿಲ್ಲ ಹಿಂಜರಿಯೋದಿಲ್ಲ ಎಂದಿದ್ದಾರೆ. ಚಾಮುಂಡೇಶ್ವರಿ ಆಶೀರ್ವಾದದಿಂದ ಎಲ್ಲವೂ ಒಳ್ಳೆಯದಾಗಲಿದೆ ಎಂದು ಮಾತನಾಡಿದ್ದಾರೆ. ಕಾನೂನಿಗಿಂತ ಯಾರು ದೊಡ್ಡವರಿಲ್ಲ. ತಪ್ಪಾಗಿದ್ರೆ ಶಿಕ್ಷೆ ಆಗೇ ಆಗುತ್ತದೆ ಎಂದು ಪ್ರಕರಣದ ಬಗ್ಗೆ ಧನ್ವೀರ್ ಮಾತನಾಡಿದ್ದಾರೆ. ಇದನ್ನೂ ಓದಿ:ಜು.16ರಂದು ಸಿಗಲಿದೆ ’ಮ್ಯಾಕ್ಸ್’ ಚಿತ್ರದ ಅಪ್‌ಡೇಟ್- ಕಿಚ್ಚ ಕೊಟ್ರು ಗುಡ್ ನ್ಯೂಸ್
ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಡಿ. ಸಿನಿಮಾ ಮಾಡು ಶೂಟಿಂಗ್ ಕಡೆ ನೋಡು ಅಂತ ದರ್ಶನ್ ನನಗೆ ಹೇಳಿದರು. ಅಭಿಮಾನಿಗಳಿಗೆ ಧೈರ್ಯ ಹೇಳು ಅಂತ ನನಗೆ ತಿಳಿಸಿದರು. ಅವರನ್ನು ಇಂತಹ ಜಾಗದಲ್ಲಿ ನೋಡುತ್ತೇವೆ ಅಂತ ಅಂದುಕೊಂಡಿರಲಿಲ್ಲ ಬೇಜಾರಾಗುತ್ತೆ ಎಂದು ಧನ್ವೀರ್ ಮಾತನಾಡಿದ್ದಾರೆ.
ಅಂದಹಾಗೆ, ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ. ಕಳೆದ ವಾರ ಧನ್ವೀರ್‌ಗೆ ದರ್ಶನ್‌ರನ್ನು ಭೇಟಿಯಾಗುವ ಅವಕಾಶ ಸಿಕ್ಕಿರಲಿಲ್ಲ.