ಬೆಂಗಳೂರು: ಸೋಶಿಯಲ್ ಮೀಡಿಯಾ ಸ್ಟಾರ್ ಧನುಶ್ರೀ ಅವರ ಜನಪ್ರಿಯತೆ ಬಿಗ್‍ಬಾಸ್ ಮನೆಗೆ ಹೋಗಿ ಬಂದ ನಂತರ ಹೆಚ್ಚಿದೆ. ಬಿಗ್‍ಬಾಸ್ ಕನ್ನಡ ಸೀಸನ್8ರ ಸ್ಪರ್ಧಿಯಾಗಿದ್ದ ಧನುಶ್ರೀ ಅವರಿಗೆ ಸಿನಿಮಾದ ಜೊತೆಗೆ ಫೋಟೋಶೂಟ್‍ಗಳಲ್ಲೂ ಅವಕಾಶ ಅರಸಿ ಬರುತ್ತಿವೆ. ಇದೀಗ ಅವರ ಒಂದು ಫೋಟೋಶೂಟ್ ಸಖತ್ ಸುದ್ದಿಯಾಗುತ್ತಿದೆ.
ಧನುಶ್ರೀ ಇತ್ತೀಚೆಗೆ ಅಯ್ಯಂಗಾರಿ ಮದುಮಗಳ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಐಯ್ಯಂಗಾರಿ ಮಧುಮಗಳಾಗಿ ಪೋಸ್ ಕೊಟ್ಟಿರುವ ಧನುಶ್ರೀ, ಆ ಚಿತ್ರಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಇದನ್ನೂ ಓದಿ: ಹೊಸ ಕಾರು ಖರೀದಿಸಿದ ಬಿಗ್‍ಬಾಸ್ ಸ್ಪರ್ಧಿ ಧನುಶ್ರೀ
ರೇಷ್ಮೆ ಸೀರೆಯುಟ್ಟು, ಮ್ಯಾಂಚಿಂಗ್ ಆಭರಣಗಳನ್ನು ಧರಿಸಿ, ಸಖತ್ ಕ್ಲಾಸಿ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಧನುಶ್ರೀ ಅವರ ಈ ಲುಕ್ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ.
View this post on Instagram
ಇತ್ತೀಚೆಗೆ ಧನುಶ್ರೀ ಫೋಟೋಶೂಟ್‍ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಅವರು ವಿಭಿನ್ನವಾದ ಲುಕ್ ಹಾಗೂ ಸ್ಟೈಲ್‍ನಲ್ಲಿ ಮಿಂಚುತ್ತಿದ್ದಾರೆ. ದಿನೇ ದಿನೇ ಅವರಿಗೆ ಸಿಗುತ್ತಿರುವ ಅವಕಾಶಗಳು ಹೆಚ್ಚುತ್ತಿವೆ. ಇದನ್ನೂ ಓದಿ: ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ: ನಟಿ ವಿಜಯಲಕ್ಷ್ಮಿ
ಧನುಶ್ರೀ ಅವರು ಆಗಾಗ ತಮ್ಮ ಮೇಕಪ್ ಹಾಗೂ ಡ್ಯಾನ್ಸ್ ಮೂವ್‍ಗಳ ಕಾರಣಕ್ಕೆ ಚರ್ಚೆಯಲ್ಲಿರುತ್ತಾರೆ. ಈ ಹಿಂದೆಯೂ ಬಿಗ್‍ಬಾಸ್ ಮನೆಯಲ್ಲಿ ಮೇಕಪ್ ಕಾರಣಕ್ಕೆ ಸುದ್ದಿಯಾಗಿದ್ದರು. ಕೆಲವು ದಿನಗಳ ಹಿಂದೆ ತಾವು ಹೊಸ ಕಾರು ಖರೀದಿಸಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು.