ತಮಿಳು ಹೆಸರಾಂತ ನಟ ಧನುಷ್ ತಮ್ಮ ಮಗ ಎಂದ ದಂಪತಿಗೆ ನೋಟಿಸ್

Public TV
2 Min Read
dhanush

ಟಾಲಿವುಡ್ ಸೂಪರ್‌ಸ್ಟಾರ್‌  ಧನುಷ್ ನನ್ನ ಮಗ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ದಂಪತಿಗೆ ನೋಟಿಸ್ ಕಳುಹಿಸುವ ಮೂಲಕ ಹೊಸ ಶಾಕ್ ನೀಡಿದ್ದಾರೆ ಧನುಷ್ ತಂದೆ. ಧನುಷ್ ಹೆಸರನ್ನು ಹಾಳು ಮಾಡುತ್ತಿರುವ ಆ ದಂಪತಿಗೆ ನಟ ಧನುಷ್ ಮತ್ತು ಅವರ ತಂದೆ ಕಸ್ತೂರಿ ರಾಜಾ ನೋಟಿಸ್ ಕಳುಹಿಸಿದ್ದಾರೆ.

dhanush

ವಕೀಲ ಎಸ್.ಹಾಜಾ ಮೊಹಿದೀನ್ ಗಿಸ್ತಿ ಮೂಲಕ ಧನುಷ್ ತಂದೆ ತಂದೆ ಎನ್ನಲಾದ ಆ ದಂಪತಿಗೆ ನೋಟಿಸ್ ನೀಡಿದ್ದು, ಈ ನೋಟಿಸ್‌ನಲ್ಲಿ, ನನ್ನ ಕಕ್ಷಿದಾರರು ಇನ್ನು ಮುಂದೆ ತಮ್ಮ ವಿರುದ್ಧ ಸುಳ್ಳು, ಅಸಮರ್ಥನೀಯ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡದಂತೆ ನಿಮ್ಮಿಬ್ಬರಿಗೆ ಕರೆ ನೀಡುತ್ತಿದ್ದಾರೆ. ಒಂದು ವೇಳೆ ಇದನ್ನು ನೀವು ಪಾಲಿಸಲು ವಿಫಲವಾದರೆ ನನ್ನ ಕಕ್ಷಿದಾರರು ಈ ನಿಟ್ಟಿನಲ್ಲಿ ತಮ್ಮ ಹಕ್ಕು ರಕ್ಷಿಸುವ ಸಲುವಾಗಿ ನ್ಯಾಯಾಲಯವನ್ನು ಸಂಪರ್ಕಿಸುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾರವಾರದಲ್ಲಿ ಉದ್ದ ಕಣ್ಣಿನ ಅಪರೂಪದ ಏಡಿ ಪತ್ತೆ 

dhanush 1

ನೀವು ಧನುಷ್ ಅವರ ವಿರುದ್ಧ ಮಾಡುತ್ತಿರುವ ಸುಳ್ಳು, ಅಸಮರ್ಥನೀಯ ಮತ್ತು ಮಾನಹಾನಿಕರ ಆರೋಪಗಳಿಂದ ಅವರಿಗೆ ಮಾನನಷ್ಟವಾಗಿದೆ. ಅವರ ಖ್ಯಾತಿಗೆ ಕಳಂಕ ಬಂದಿದೆ. ಹೀಗಾಗಿ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

dhanush 1

ನೀವು ಮಾಡಿರುವ ಆರೋಪಗಳು ಸುಳ್ಳು ಎಂದು ಪತ್ರಿಕಾ ಹೇಳಿಕೆ ನೀಡಿ, ಈ ರೀತಿಯ ಆರೋಪಗಳನ್ನು ಮಾಡಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ದಂಪತಿಯನ್ನು ಕೇಳಿದ್ದಾರೆ. ಒಂದು ವೇಳೆ ನಾವು ಹೇಳಿದಂತೆ ಮಾಡದೆ ಹೋದರೆ, ನಿಮ್ಮ ವಿರುದ್ಧ ಮಾನನಷ್ಟಕ್ಕೆ ಪರಿಹಾರವಾಗಿ 10 ಕೋಟಿ ರೂ ಮೊಕದ್ದಮೆಯನ್ನು ಎದುರಿಸಲು ಸಜ್ಜಾಗುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.

Dhanush sends legal notice to couple claiming him to be their biological son | People News | Zee News

ದಕ್ಷಿಣ ಭಾರತದ ಸೂಪರ್‌ಸ್ಟಾರ್ ಧನುಷ್ ತಮ್ಮ ಪುತ್ರ ಎಂದು ಮಧುರೈ ಮೂಲದ ದಂಪತಿ ಆಗಾಗ ಹೇಳಿಕೊಳ್ಳುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ವೃದ್ಧ ದಂಪತಿ ಧನುಷ್ ತಮ್ಮ ಮಗ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಈ ಹಿನ್ನೆಲೆ ಪಿತೃತ್ವ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಧನುಷ್‌ಗೆ ಕೆಲ ದಿನಗಳ ಹಿಂದೆಯಷ್ಟೇ ಸಮನ್ಸ್ ನೀಡಿತ್ತು. ಇದನ್ನೂ ಓದಿ: ನಮ್ಮ ಮೇಲೆ ಅತ್ಯಾಚಾರ ನಿಲ್ಲಿಸಿ – ಕಾನ್ ಚಿತ್ರೋತ್ಸವದಲ್ಲಿ ಬೆತ್ತಲಾದ ಉಕ್ರೇನ್ ಮಹಿಳೆ 

Dhanush sends legal notice to couple claiming him to be their biological son | India Post News Paper

ಕಳೆದ ಹಲವು ವರ್ಷದಿಂದ ಈ ಪ್ರಕರಣ ನಡೆಯುತ್ತಿದೆ. ವೃದ್ಧ ದಂಪತಿ ಧನುಷ್ ತಮ್ಮ ಪುತ್ರ ಎಂದು ಕೋಟ್‌ಗೆ  ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದರಿಂದ ಈ ಕುರಿತಾಗಿ ಕೋರ್ಟ್ ಧನುಷ್‌ಗೆ  ಸಮನ್ಸ್ ಜಾರಿ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *