ಹಣ, ಅಧಿಕಾರದ ಸುತ್ತ ‘ಕುಬೇರ’- ಟೀಸರ್‌ನಲ್ಲಿ ಮಿಂಚಿದ ಧನುಷ್, ರಶ್ಮಿಕಾ

Public TV
1 Min Read
rashmika mandanna 2

ಮಿಳು ನಟ ಧನುಷ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಕುಬೇರ’ (Kubera) ಚಿತ್ರದ ಟೀಸರ್ ರಿಲೀಸ್ ಆಗಿದೆ. ಹಣ ಮತ್ತು ಶ್ರೀಮಂತ ವ್ಯಕ್ತಿಯ ಕಥೆಯನ್ನು ಈ ಸಿನಿಮಾ ಹೇಳುತ್ತದೆ. ಟೀಸರ್ ಮೂಲಕನೇ ಅಭಿಮಾನಿಗಳ ಗಮನ ಸೆಳೆದಿದೆ. ಇದನ್ನೂ ಓದಿ:ಯಶ್ ‘ರಾಮಾಯಣ’ ಪ್ರಾಜೆಕ್ಟ್‌ನಲ್ಲಿ ವಿವೇಕ್ ಒಬೆರಾಯ್?

dhanush 1 1ಧನುಷ್ (Dhanush) ಭಿಕ್ಷುಕ ಪಾತ್ರದಲ್ಲಿ ಕಾಣಿಸಿಕೊಂಡಿದ್ರೆ, ರಶ್ಮಿಕಾ ಪಕ್ಕಾ ಮಿಡಲ್ ಕ್ಲಾಸ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಉದ್ದನೆಯ ಗಡ್ಡ ಹರಿದ ಬಟ್ಟೆಯಲ್ಲಿ ಧನುಷ್ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ದುಡ್ಡಿನ ಸುತ್ತ ಹೆಣೆಯಲಾದ ಕಥೆ ಎಂಬುದನ್ನು ಟೀಸರ್‌ನಲ್ಲಿ ಹಿಂಟ್ ಬಿಟ್ಟು ಕೊಡಲಾಗಿದೆ. ಇದನ್ನೂ ಓದಿ:‘ಅನಿಮಲ್’ ನಟಿಗೆ ಬಂಪರ್ ಆಫರ್- ಪ್ರಭಾಸ್‌ಗೆ ನಾಯಕಿಯಾದ ತೃಪ್ತಿ ದಿಮ್ರಿ

ಕುಬೇರ ಟೀಸರ್‌ನಲ್ಲಿ ಒಬ್ಬ ಮನುಷ್ಯನಿಗೆ ಹಣದ ದುರಾಸೆ ಎಷ್ಟಿರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ. ದುಡ್ಡೇ ಹೈಲೆಟ್ ಆಗಿದ್ದು, ಟೀಸರ್ ಹಾಡಿನ ರೂಪದಲ್ಲಿ ತೋರಿಸಲಾಗಿದೆ. ಕನ್ನಡ ಟೀಸರ್‌ನಲ್ಲಿ ‘ನಂದು ನಂದು ನನ್ನದೇ ಈ ಲೋಕವಯ್ಯ’ ಎಂಬ ಹಾಡಿನ ಸಾಲು ಪ್ರೇಕ್ಷಕರ ಗಮನ ಸೆಳೆದಿದೆ.

dhanushನಾಗರ್ಜುನ ಅಕ್ಕಿನೇನಿ ಶ್ರೀಮಂತ ವ್ಯಕ್ತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ತಯಾರಾಗಿದೆ. ಇದೇ ಜೂನ್ 20ರಂದು ಚಿತ್ರ ರಿಲೀಸ್ ಆಗಲಿದೆ. ಫಿದಾ, ಲವ್ ಸ್ಟೋರಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಶೇಖರ್ ಕಮ್ಮುಲಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಧನುಷ್ ಹಾಗೂ ರಶ್ಮಿಕಾ ನಟಿಸಿರುವ ಈ ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

Share This Article