ತಮಿಳರ ಮುಂದೆ ಶಿವಣ್ಣನ ಹಾಡಿ ಹೊಗಳಿದ ನಟ ಧನುಷ್

Public TV
1 Min Read
Dhanush Shivaraj Kumar 1

ನ್ನಡದಲ್ಲಿ ಮಾತ್ರವಲ್ಲ, ತಮಿಳಿನಲ್ಲೂ ಶಿವರಾಜ್ ಕುಮಾರ್ (Shivaraj Kumar) ಮಿಂಚುತ್ತಿದ್ದಾರೆ. ಈಗಾಗಲೇ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ಅಬ್ಬರಿಸಿದ್ದ ಶಿವಣ್ಣ, ಇದೀಗ ಧನುಷ್ ಜೊತೆಗೆ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹಾಡು ಬಿಡುಗಡೆ ಸಮಾರಂಭ ಚೆನ್ನೈನಲ್ಲಿ (Chennai) ನಡೆದಿದೆ. ಈ ಸಮಾರಂಭದಲ್ಲಿ ಶಿವರಾಜ್ ಕುಮಾರ್ ಅವರನ್ನು ಹಾಡಿಹೊಗಳಿದ್ದಾರೆ ಧನುಷ್. ತಂದೆಯ ಹೆಸರು ಉಳಿಸಲು ನಿಮ್ಮನ್ನು ನಾವು ಮಾದರಿಯಾಗಿ ಇಟ್ಟುಕೊಳ್ಳಬೇಕು ಎಂದಿದ್ದಾರೆ.

Dhanush Shivaraj Kumar 2

ಧನುಷ್ (Dhanush) ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಕ್ಯಾಪ್ಟನ್ ಮಿಲ್ಲರ್ (Captain Miller) ಸಿನಿಮಾ ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಬಹಳ ಸದ್ದು ಮಾಡ್ತಿದೆ. ರಜನಿಕಾಂತ್ ಜೈಲರ್ ನಲ್ಲಿ ನರಸಿಂಹ ಆಗಿ ದರ್ಶನ ಕೊಟ್ಟು ಕ್ರೇಜ್ ಕ್ರಿಯೇಟ್ ಮಾಡಿದ್ದ ಟಗರು ಶಿವನ ಹೊಸ ಅವತಾರ ನೋಡೋದಿಕ್ಕೆ ಫ್ಯಾನ್ಸ್ ಕಾತುರರಾಗಿದ್ದಾರೆ. ಇತ್ತ ಧನುಷ್ 49ನೇ ಚಿತ್ರ ಇದಾಗಿದ್ದು, ಹೀಗಾಗಿ ಸಹಜವಾಗಿ ನಿರೀಕ್ಷೆ ಹೆಚ್ಚಿದೆ. ಸದ್ಯ ಕ್ಯಾಪ್ಟನ್ ಮಿಲ್ಲರ್ ಬಿಡುಗಡೆಗೆ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ.

Captain Miller 1

ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಪೊಂಗಲ್ (Sankranti) ಹಬ್ಬದ ಸ್ಪೆಷಲ್ ಆಗಿ ಧನುಷ್-ಶಿವಣ್ಣ ಸಿನಿಮಾ ತೆರೆಗೆ ಬರಲಿದೆ. 2024, ಜನವರಿ 12ರಂದು ‘ಕ್ಯಾಪ್ಟನ್ ಮಿಲ್ಲರ್’ ವಿಶ್ವದಾದ್ಯಂತ ತೆರೆ ಕಾಣಲಿದೆ.  ಈ ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ಧನುಷ್ ಜೋಡಿಯಾಗಿ ಪ್ರಿಯಾಂಕಾ ಮೋಹನನ್ ನಟಿಸಿದ್ದಾರೆ. ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತೆರೆದುಕೊಳ್ಳುವ ಕಥೆ ಎಂದು ಹೇಳಲಾಗುತ್ತಿದೆ.

 

ಈಗಾಗಲೇ ರಿಲೀಸ್ ಆಗಿರೋ ಟೀಸರ್ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ. ಧನುಷ್ ಉದ್ದ ಕೂದಲು, ಗಡ್ಡ ಮೀಸೆ ಬಿಟ್ಟು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಹಾಗೇ ಶಿವರಾಜ್‌ಕುಮಾರ್ ಕೂಡ ಕುದುರೆ ಏರಿ ಬರುವ ಸನ್ನಿವೇಶ ಅವರ ಅಭಿಮಾನಿಗಳಿಗೆ ಥ್ರಿಲ್ ಹೆಚ್ಚಿಸಿದೆ. ಸದ್ಯ ಈ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಜಿವಿ ಪ್ರಕಾಶ್ ಈ ಸಿನಿಮಾಗೆ ಹಿನ್ನೆಲೆ ಸಂಗೀತ ಹಾಗೂ ಟ್ಯೂನ್‌ಗಳನ್ನು ಕಂಪೋಸ್ ಮಾಡಿದ್ದಾರೆ.

Share This Article