ಸರ್ ಚಿತ್ರದ ಚಿತ್ರಿಕರಣ ಪ್ರಾರಂಭಿಸಿದ ಧನುಷ್

Public TV
1 Min Read
dhanush 1

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್ ಅಭಿನಯಿಸುತ್ತಿರುವ ಸರ್ ಚಿತ್ರದ ಚಿತ್ರೀಕರಣವು ಪ್ರಾರಂಭಗೊಂಡಿದ್ದು, ಚಿತ್ರವು ದ್ವಿ ಭಾಷೆಯಲ್ಲಿ ಬರಲಿದೆ.

ರಾಷ್ಟ್ರೀಯ ಪ್ರಶಸ್ತಿ ವಿಜೇತ ಧನುಷ್ ಶುಕ್ರವಾರ ತಮ್ಮ ಹೊಸ ಚಿತ್ರವಾದ ಸರ್ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ತೆಲುಗು-ತಮಿಳು ಚಲನಚಿತ್ರಗಳಾದ ರಂಗ್ ದೇ ಮತ್ತು ತೊಲಿಪ್ರೇಮ ಖ್ಯಾತಿಯ ವೆಂಕಿ ಅಟ್ಲೂರಿ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಾಗ ವಂಶಿ ಹಾಗೂ ಸಾಯಿ ಸೌಜನ್ಯರವರು ಚಿತ್ರದ ನಿರ್ಮಾಪಕರಾಗಿದ್ದು, ಚಿತ್ರವು ಚೆನ್ನೈನ ಜೂನಿಯರ್ ಕಾಲೇಜಿನಲ್ಲಿ ಸೆಟ್ಟೇರಿದೆ. ಇದನ್ನೂ ಓದಿ: ಮೊದಲ ದಿನದ ಶೂಟಿಂಗ್‍ನಲ್ಲಿ ಪಾಲ್ಗೊಂಡ ಮೇಘನಾ ರಾಜ್

ಟ್ವಿಟ್ಟರ್‌ನಲ್ಲಿ ನಟ ಧನುಷ್ ಚಿತ್ರದ ಪೋಸ್ಟ್‌ರನ್ನು ಹಂಚಿಕೊಂಡಿದ್ದು, ‘ಬಹಳ ಉತ್ಸಾಹ ಹೃದಯ ಮತ್ತು ನಂಬಿಕೆಯೊಂದಿಗೆ ಸರ್ ಚಿತ್ರದ ಚಿತ್ರಿಕರಣ ಪ್ರಾರಂಭವಾಗಿದೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಜಾಲಿ ಮೂಡ್‌ನಲ್ಲಿ ನಟ ದಿಗಂತ್ – ನೇತ್ರಾಣಿಯ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್‌

Share This Article
Leave a Comment

Leave a Reply

Your email address will not be published. Required fields are marked *