ವಿಚ್ಛೇದನ ಕೋರಿ ಕೊನೆಗೂ ಕೋರ್ಟ್ ಮೆಟ್ಟಿಲೇರಿದ ಧನುಷ್-ಐಶ್ವರ್ಯ

Public TV
1 Min Read
dhanush

ನವರಿ 2022 ರಂದು ತಾವಿಬ್ಬರೂ ದೂರ ಆಗುತ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು ಐಶ್ವರ್ಯ ರಜನಿಕಾಂತ್ (Aishwarya Rajinikanth). ಆ ನಂತರ ಅದನ್ನು ನಟ ಧನುಷ್ (Dhanush) ಕೂಡ ಖಚಿತ ಪಡಿಸಿದ್ದರು. ಅದಾದ ನಂತರ ಇಬ್ಬರನ್ನೂ ಒಟ್ಟಾಗಿಸುವ ಪ್ರಯತ್ನ ನಡೆಯಿತು. ಸ್ವತಃ ರಜನಿಕಾಂತ್ ಅವರೇ ಇಬ್ಬರೊಂದಿಗೂ ಮಾತನಾಡಿದ್ದರು. ಆದರೆ, ಪ್ರಯತ್ನ ವಿಫಲವಾಗಿತ್ತು.

aishwarya rajinikanth 4

ಜನವರಿ 2022ರಲ್ಲೇ ಘೋಷಿಸಿದ್ದು ಈಗ ಕೋರ್ಟ್ (Court) ಮೆಟ್ಟಿಲು ಏರಿದೆ. ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ (Divorce) ಅರ್ಜಿ ಸಲ್ಲಿಸಿದ್ದಾರೆ ಎಂದು ಆಪ್ತರು ಖಚಿತ ಪಡಿಸಿದ್ದಾರೆ ಎಂದು ಆಗ್ಲಂ ವೆಬ್ ಸೈಟ್ ವೊಂದು ವರದಿ ಮಾಡಿದೆ.  ಪರಸ್ಪರ ಒಪ್ಪಿಗೆಯಿಂದ ಸೆಕ್ಷನ್ 13 ಬಿ ಅಡಿಯಲ್ಲಿ ಅವರು ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ.

aishwarya rajinikanth 3

ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿಗೆ 18 ವರ್ಷಗಳ ನೆನಪುಗಳಿವೆ. ಲಿಂಗ ಮತ್ತು ಯಾತ್ರಾ ಹೆಸರಿನ ಇಬ್ಬರು ಪುತ್ರರೂ ಇದ್ದಾರೆ. ಐಶ್ವರ್ಯ ನಿರ್ದೇಶಕಿಯಾಗಿ ಹಲವಾರು ಚಿತ್ರಗಳನ್ನು ಮಾಡಿದ್ದರೆ, ಧನುಷ್ ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಹಾಗಾಗಿ ಈ ಜೋಡಿ ದೂರ ಆಗುತ್ತಿರುವುದು ಸಹಜವಾಗಿಯೇ ಅಭಿಮಾನಿಗಳಿಗೆ ಶಾಕ್ ಆಗಿದೆ.

ವಿಚ್ಛೇದನ ಘೋಷಿಸಿದ ನಂತರ ಇಬ್ಬರೂ ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದರು. ಧನುಷ್ ಸಿನಿಮಾಗೆ ಐಶ್ವರ್ಯ, ಪತ್ನಿಯ ಚಿತ್ರಕ್ಕೆ ಧನುಷ್ ಅಭಿನಂದನೆಗಳನ್ನು ಸಲ್ಲಿಸುತ್ತಾ, ಮತ್ತೆ ಒಂದಾಗುವ ಸೂಚನೆ ಎನ್ನುವಂತೆ ದಿನಗಳನ್ನು ದೂಡುತ್ತಿದ್ದರು. ಎರಡು ವರ್ಷಗಳ ಬಳಿಕ ಮತ್ತೆ ಶಾಕ್ ನೀಡಿದೆ ಈ ಜೋಡಿ.

Share This Article