ಡಾಲಿ ಧನಂಜಯ್ (Dhananjay) ನಟನೆಯ ಹೊಯ್ಸಳ ಸಿನಿಮಾಗೆ ಭರದಿಂದ ಚಿತ್ರೀಕರಣ ನಡೆಯುತ್ತಿದೆ. ಕೆ.ಆರ್.ಜಿ ಸ್ಟುಡಿಯೋ ಬ್ಯಾನರ್ಸ್ ಅಡಿಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಧನಂಜಯ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಕೂಡ ಕುತೂಹಲ ಮೂಡಿಸಿತ್ತು. ಹಾಗಾಗಿ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ನಿರೀಕ್ಷೆ ಕೂಡ ಹೆಚ್ಚಾಗಿತ್ತು. ಅದಕ್ಕೂ ಇದೀಗ ತೆರೆ ಬಿದ್ದಿದೆ. ಹೊಯ್ಸಳ ಸಿನಿಮಾವನ್ನು ಮುಂದಿನ ವರ್ಷ ಬಿಡುಗಡೆ ಮಾಡುತ್ತಿದ್ದು, ಮಾರ್ಚ್ 30ರಂದು ದಿನಾಂಕ ನಿಗಧಿ ಆಗಿದೆ.
ಇದು ಧನಂಜಯ್ ಅವರ 25ನೇ ಸಿನಿಮಾ. ಅದ್ಧೂರಿಯಾಗಿಯೇ ಈ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎನ್ನುವುದು ಚಿತ್ರತಂಡದ ಆಸೆ. ಹೀಗಾಗಿ ಇಷ್ಟು ಬೇಗ ದಿನಾಂಕ ಫಿಕ್ಸ್ ಮಾಡಿ, ಹೊಯ್ಸಳ (Hoysala) ಉತ್ಸವಕ್ಕೆ ಎಲ್ಲರೂ ರೆಡಿಯಾಗಿರಿ ಎಂದು ಹೇಳಿದ್ದಾರೆ ನಿರ್ಮಾಪಕರು. ವಿಜಯ್ ಎನ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ಇದೊಂದು ಹೊಸ ಬಗೆಯ ಕಥೆಯನ್ನು ಹೊಂದಿದೆಯಂತೆ. ಇದನ್ನೂ ಓದಿ:ರಾಕೇಶ್‌ಗಾಗಿ ಬಿಗ್ ಬಾಸ್ ಮನೆನಾ ಎರಡು ಮನೆ ಮಾಡಬೇಕಾ: ಸೋನು ವಿರುದ್ಧ ಗುರೂಜಿ ಗರಂ
ಡಾಲಿ ಜೊತೆ ಅಮೃತಾ ಅಯ್ಯಂಗಾರ್ (Amrita Iyengar) ಈ ಸಿನಿಮಾದಲ್ಲಿ ನಟಿಸಿದ್ದು, ರಾಘು ಶಿವಮೊಗ್ಗ, ಅಚ್ಯುತ್ ಕುಮಾರ್ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಈ ಚಿತ್ರಕ್ಕಾಗಿ ಧನಂಜಯ್ ಒಂದಷ್ಟು ತೂಕ ಕಳೆದುಕೊಂಡು ಪೊಲೀಸ್ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಸಲಗ ಸಿನಿಮಾದಲ್ಲಿ ಡಾಲಿ ಪೊಲೀಸ್ ಪಾತ್ರ ಮಾಡಿದ್ದರೂ, ಅದಕ್ಕಿಂತಲೂ ಈ ಪಾತ್ರ ಸಾಕಷ್ಟು ಭಿನ್ನವಾಗಿದೆ ಎನ್ನಲಾಗುತ್ತಿದೆ.