ರಮ್ಯಾ ಕಮ್‌ಬ್ಯಾಕ್ ‘ಉತ್ತರಕಾಂಡ’ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್

Public TV
1 Min Read
RAMYA 1

ಸ್ಯಾಂಡಲ್‌ವುಡ್ ಮೋಹಕ ತಾರೆ ರಮ್ಯಾ (Ramya) ಅಭಿಮಾನಿಗಳಿಗೆ ಇದು ನಿಜಕ್ಕೂ ಸಂತಸದ ಸುದ್ದಿ. ರಮ್ಯಾ ಕಮ್‌ಬ್ಯಾಕ್ ಸಿನಿಮಾ ಉತ್ತರಕಾಂಡ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ರಮ್ಯಾ ಸದ್ಯದಲ್ಲೇ ಉತ್ತರಕಾಂಡ (Uttarakanda) ಸಿನಿಮಾ ಶೂಟಿಂಗ್‌ಗೆ ಹಾಜರಿ ಹಾಕ್ತಿದ್ದಾರೆ.

shivarajkumar actor‘ಉತ್ತರಕಾಂಡ’ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಯಾಕೆಂದ್ರೆ, ರಮ್ಯಾ (Ramya) ಕಮ್‌ಬ್ಯಾಕ್ ಸಿನಿಮಾ ಆಗಿರುವ ಕಾರಣ, ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ಅದಷ್ಟೇ ಅಲ್ಲ, ರಮ್ಯಾ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar), ಡಾಲಿ (Daali) ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಇದೇ ಎಪ್ರಿಲ್‌ನಿಂದ ಶುರುವಾಗಲಿದೆ. ಚಿತ್ರೀಕರಣದಲ್ಲಿ ಡಾಲಿ, ರಮ್ಯಾ, ಶಿವಣ್ಣ ಮೂವರು ಭಾಗಿಯಾಗುತ್ತಿದ್ದಾರೆ.

dhananjay 4‘ರತ್ನನ್ ಪ್ರಪಂಚ’ ಖ್ಯಾತಿಯ ನಿರ್ದೇಶಕ ರೋಹಿತ್ ಪದಕಿ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಉತ್ತರಕಾಂಡ ಸಿನಿಮಾ ಪಕ್ಕಾ ಆ್ಯಕ್ಷನ್ ಸೀಕ್ವೇನ್ಸ್ ಇರುವ ಚಿತ್ರವಾಗಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಸ್ಪರ್ಧಿ ತುಕಾಲಿ ಸಂತೋಷ್ ಕಾರು ಅಪಘಾತ

ಇನ್ನೂ ಶಿವಣ್ಣ, ರಮ್ಯಾ, ಡಾಲಿ ಮೂವರು ಒಂದೇ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ, ಕಥೆ ಮತ್ತು ಪಾತ್ರ ಹೇಗಿರಲಿದೆ ಎಂಬ ಕೌತುಕ ಮೂಡಿಸಿದೆ.

Share This Article