Advertisements

ಡಾಲಿ ಧನಂಜಯ್ ತುಳಿಯಲು ಸಜ್ಜಾಗಿವೆಯಾ ಕಾಣದ ಕೈಗಳು?

ಡವ ರಾಸ್ಕಲ್ ಯಶಸ್ವಿ ಅಲೆಯಲ್ಲಿ ತೇಲುತ್ತಿರುವ ಡಾಲಿ ಧನಂಜಯ್ ಅವರನ್ನು ತುಳಿಯಲು ಸ್ಯಾಂಡಲ್ ವುಡ್ ನಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆಯಾ? ಹಾಗಂತ ಸ್ವತಃ ಧನಂಜಯ್ ಅವರೇ ಮಾಧ್ಯಮವೊಂದಕ್ಕೆ ನೀಡಿದ ಆಡಿಯೋ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ‘ಹೆಡ್ ಬುಷ್’ ಸಿನಿಮಾಗೆ ಸಂಬಂಧಿಸಿದ ವಿವಾದವೊಂದರ ಕುರಿತು ಮಾತನಾಡಿರುವ ಅವರು ಕಾಣದ ಕೈಗಳು ಯಾಕೆ ಈ ರೀತಿ ಕೆಲಸ ಮಾಡುತ್ತಿವೆ ಎನ್ನುವುದು ನನಗೂ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

Advertisements

ಡಾಲಿ ಧನಂಜಯ್ ‘ಹೆಡ್ ಬುಷ್’ ಚಿತ್ರಕ್ಕಾಗಿ ಹಣ ಮತ್ತು ಶ್ರಮ ಎರಡನ್ನೂ ಹೂಡಿದ್ದಾರೆ. ಈಗಾಗಲೇ ಸಿನಿಮಾದ ಬಹುತೇಕ ಶೂಟಿಂಗ್ ಕೂಡ ಮುಗಿದಿದೆ. ಅಗ್ನಿ ಶ್ರೀಧರ್ ಅವರ ಪುಸ್ತಕವೊಂದನ್ನು ಆಧರಿಸಿ ಈ ಸಿನಿಮಾ ಬರುತ್ತಿದ್ದು, ಅದರಲ್ಲಿ ಬೆಂಗಳೂರಿನ ಅಂಡರ್ ವರ್ಲ್ಡ್ ಡಾನ್ ಎಂದೇ ಖ್ಯಾತರಾಗಿದ್ದ ಜಯರಾಜ್ ಅವರ ಪಾತ್ರವೂ ಇದೆ. ಈ ಪಾತ್ರದ ಕುರಿತಾಗಿ ಜಯರಾಜ್ ಪುತ್ರ ಅಜಿತ್ ಆಕ್ಷೇಪವನ್ನು ವ್ಯಕ್ಯ ಪಡಿಸಿದ್ದಾರೆ. ತಮ್ಮ ಅನುಮತಿ ಇಲ್ಲದೇ ತಮ್ಮ ತಂದೆಯ ಕುರಿತಾಗಿ ಸಿನಿಮಾ ಮಾಡುತ್ತಿದ್ದಾರೆ ಎಂದು ವಿರೋಧಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಈ ಸಿನಿಮಾ ರಿಲೀಸ್ ಮಾಡದಂತೆ ಕೋರ್ಟ್ ಗೂ ಹೋಗುವುದಾಗಿ ಅವರು ಹೇಳಿದ್ದಾರೆ. ಇದನ್ನೂ ಓದಿ : ಹಿರಿಯ ರಂಗಕರ್ಮಿ, ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮೀಬಾಯಿ ನಿಧನ

Advertisements

ಈ ಕುರಿತು ಪ್ರತಿಕ್ರಿಯೆ ನೀಡಿರುವ ಧನಂಜಯ್, ‘ನನಗೂ ಫಿಲ್ಮ್ ಚೇಂಬರ್ ನಿಂದ ಕರೆ ಬಂದಿತ್ತು. ನಾನು ಆಸ್ಪತ್ರೆಯಲ್ಲಿ ಇರುವ ಕಾರಣಕ್ಕಾಗಿ ಮೇ.13ರ ನಂತರ ಚೇಂಬರ್ ಗೆ ಬರುವುದಾಗಿ ತಿಳಿಸಿದ್ದೇನೆ. ಅಷ್ಟಕ್ಕೂ ನಾವು ಸಿನಿಮಾ ಮಾಡುವ ವಿಚಾರ ಅಜಿತ್ ಅವರಿಗೆ ಗೊತ್ತಿದೆ. ಅವರು ನನ್ನ ಒಳ್ಳೆಯ ಫ್ರೆಂಡ್. ಈ ಸಿನಿಮಾ ಮಾಡುವಾಗ ವಿಶ್ ಮಾಡಿದ್ದರು. ತಮ್ಮ ತಂದೆಯ ಪಾತ್ರವು ಹೇಗೆ ಬರುತ್ತಿದೆ ಎಂದು ಕೇಳುತ್ತಿದ್ದರು. ಆದರೆ, ದಿಢೀರ್ ಅಂತ ಹೀಗೆ ಕಂಪ್ಲೆಂಟ್ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಅವರು ಹೀಗೆ ಮಾಡಿದ್ದಾರೆ ಅಂದರೆ, ಅದರ ಹಿಂದೆ ಕಾಣದ ಕೈಗಳು ಇವೆ ಅನಿಸುತ್ತದೆ’ ಎಂದಿದ್ದಾರೆ ಡಾಲಿ ಧನಂಜನ್. ಇದನ್ನೂ ಓದಿ : ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ

Advertisements

ಅವರು ಕೋರ್ಟ್, ಕಾನೂನು ಅಂತ ಹೋಗುವುದಾದರೆ ಅಥವಾ ಈ ಕುರಿತು ಏನೇ ಮಾತುಕತೆ ಇದ್ದರೆ ಅದನ್ನು ಅಗ್ನಿ ಶ್ರೀಧರ್ ಅವರ ಜತೆ ಮಾಡಬೇಕು. ನಾವು ಅವರ ಕೃತಿಯ ಹಕ್ಕು ಪಡೆದುಕೊಂಡೇ ಸಿನಿಮಾ ಮಾಡಿದ್ದೇವೆ. ಶ್ರೀಧರ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ನಮ್ಮ ಸಿನಿಮಾಗೂ, ಅಜಿತ್ ಅವರ ಆರೋಪಕ್ಕೂ ಸಂಬಂಧ ಇರದು. ಅವರು ಅಗ್ನಿ ಶ್ರೀಧರ್ ಅವರ ಜತೆಯೇ ಮಾತುಕತೆ ಆಡಬೇಕು ಎಂದಿದ್ದಾರೆ ಧನಂಜಯ್.

Advertisements
Exit mobile version