ಕನ್ನಡದ ನಟಿ ಶ್ರೀಲೀಲಾ (Sreeleela) ಟಾಲಿವುಡ್ನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ‘ಪುಷ್ಪ 2’ನಲ್ಲಿ (Pushpa 2) ಸೊಂಟ ಬಳುಕಿಸಿದ ಮೇಲೆ ನಟಿಗೆ ಅವಕಾಶಗಳು ದುಪ್ಪಟ್ಟಾಗಿದೆ. ಇದೀಗ ಬಂಪರ್ ಅವಕಾಶವೊಂದು ನಟಿಯ ಪಾಲಾಗಿದೆ. ತೆಲುಗಿನ ಸ್ಟಾರ್ ನಟನ ಪುತ್ರನಿಗೆ ನಾಯಕಿಯಾಗಿದ್ದಾರೆ. ಇದನ್ನೂ ಓದಿ:ತಂದೆಯ ಆರೋಗ್ಯದ ಬಗ್ಗೆ ಪುತ್ರಿ ನಿವೇದಿತಾ ಶಿವರಾಜ್ಕುಮಾರ್ ಹೇಳಿದ್ದೇನು?
Advertisement
ಕೆಲ ದಿನಗಳ ಹಿಂದೆ ನಾಗ ಚೈತನ್ಯಗೆ ನಾಯಕಿಯಾಗುವ ಅವಕಾಶ ಶ್ರೀಲೀಲಾಗೆ ಸಿಕ್ಕಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ಅಖಿಲ್ ಅಕ್ಕಿನೇನಿ ನಟನೆಯ ಹೊಸ ಚಿತ್ರಕ್ಕೆ ‘ಕಿಸ್ಸಿಕ್’ ನಟಿ ಹೀರೋಯಿನ್ ಆಗಿದ್ದಾರೆ ಎನ್ನಲಾಗಿದೆ. ನಟನೆಗೆ ಸ್ಕೋಪ್ ಇರುವ ಪಾತ್ರ ಇದಾಗಿದ್ದು, ಕಥೆ ವಿಭಿನ್ನವಾಗಿದೆಯಂತೆ. ಈ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.
Advertisement
Advertisement
ಸದ್ಯ ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿ ಅಕ್ಕಿನೇನಿ ಸಹೋದರರಿಗೆ ನಾಯಕಿಯಾಗ್ತಿದ್ದಾರೆ ಎಂಬ ಸುದ್ದಿ ಕೇಳಿಯೇ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಹಾಗಾದ್ರೆ ಸದ್ಯ ಹರಿದಾಡುತ್ತಿರುವ ಈ ವಿಚಾರ ನಿಜನಾ? ಚಿತ್ರತಂಡದ ಕಡೆಯಿಂದ ಕ್ಲ್ಯಾರಿಟಿ ಸಿಗುತ್ತಾ? ಎಂಬುದನ್ನು ಕಾದುನೋಡಬೇಕಿದೆ.