ಶೂಟಿಂಗ್ ಸೆಟ್‌ನಲ್ಲಿ ಅವಘಡ- ರವಿತೇಜಗೆ ಕೈಗೆ ಗಾಯ

Public TV
1 Min Read
ravi teja 3

ತೆಲುಗಿನ ನಟ ರವಿತೇಜಗೆ (Ravi Teja) ಶೂಟಿಂಗ್ ಸೆಟ್‌ನಲ್ಲಿ ಬಲಗೈಗೆ ಗಾಯವಾದ ಹಿನ್ನೆಲೆ ನಿನ್ನೆ (ಆ.23) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಸೂಕ್ತ ಚಿಕಿತ್ಸೆಯ ಬಳಿಕ ನಟ ಡಿಸ್ಚಾರ್ಜ್‌ ಆಗಿದ್ದಾರೆ. ತಾವು ಆರೋಗ್ಯವಾಗಿ ಇರೋದಾಗಿ ಎಂದು ರವಿತೇಜ ಸೋಶಿಯಲ್‌ ಮೀಡಿಯಾದಲ್ಲಿ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ:ಹುಟ್ಟೂರಿನಲ್ಲಿ ಮೀನಿಗೆ ಗಾಳ ಹಾಕುತ್ತಿರುವ ರಿಷಬ್‌ ಶೆಟ್ಟಿ ಫೋಟೋ ವೈರಲ್

ಶಸ್ತ್ರಚಿಕಿತ್ಸೆಯ ನಂತರ ಯಶಸ್ವಿಯಾಗಿ ಡಿಸ್ಚಾರ್ಜ್ ಆಗಿದ್ದು, ಉತ್ತಮ ಸ್ಥಿತಿಯಲ್ಲಿದೆ. ನಿಮ್ಮೆಲ್ಲರ ಆತ್ಮೀಯ ಆಶೀರ್ವಾದ ಮತ್ತು ಬೆಂಬಲಕ್ಕೆ ಕೃತಜ್ಞತೆಗಳು. ಶೀಘ್ರದಲ್ಲೇ ಸೆಟ್‌ಗೆ ಮರಳಲು ಉತ್ಸುಕನಾಗಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ರವಿತೇಜ ತಿಳಿಸಿದ್ದಾರೆ.

ಅಂದಹಾಗೆ, ನಿನ್ನೆ (ಆ.23) ಗಾಯವಾಗಿದ್ರೂ ಲೆಕ್ಕಿಸದೇ ಶೂಟಿಂಗ್‌ನಲ್ಲಿ ರವಿತೇಜ ಭಾಗಿಯಾದರು. ಬಳಿಕ ಬಲಗೈಗೆ ಬಿದ್ದ ಪೆಟ್ಟಿನ ನೋವು ಹೆಚ್ಚಾದ ಹಿನ್ನೆಲೆ ರವಿತೇಜರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಕೈಗೆ ಶಸ್ತ್ರಚಿಕಿತ್ಸೆ ಮಾಡಿದ ನಂತರ 6 ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ರವಿತೇಜಗೆ ವೈದ್ಯರು ಸೂಚಿಸಿದ್ದಾರೆ. ಸದ್ಯ ನಟನ ಹೆಲ್ತ್ ಅಪ್‌ಡೇಟ್ ತಿಳಿದು ಅಭಿಮಾನಿಗಳು ನಿರಾಳವಾಗಿದ್ದಾರೆ.

Share This Article