ಲಾಕ್‍ಡೌನ್ ಆದಗಿನಿಂದ ಎಲ್ಲರೂ ಮನೆಯಲ್ಲಿದ್ದೀರಾ. ಪ್ರತಿದಿನ ಮನೆ ಊಟ ಮಾಡಿ ಕೆಲವರಿಗೆ ಬೇಸರವಾಗಿರುತ್ತದೆ. ಒಂದು ದಿನ ಹೋಟೆಲ್‍ಗೆ ಹೋಗಿ ಊಟ ಮಾಡೋಣ ಎಂದರೆ ಸಾಧ್ಯವಿಲ್ಲ. ಇನ್ನೂ ಮನೆಯಲ್ಲಿ ರುಚಿ-ರುಚಿಯಾಗಿ ಏನಾದರೂ ಮಾಡುವಂತೆ ಮನೆಯವರು ಕೇಳುತ್ತಿರುತ್ತಾರೆ. ಹೀಗಾಗಿ ಮನೆಯಲ್ಲೇ ಡಾಬಾ ಶೈಲಿಯ ದಾಲ್ ಫ್ರೈ ಮಾಡಿ ಕೊಡಿ. ಸಿಂಪಲ್ ಆಗಿ ದಾಲ್ ಫ್ರೈ ಮಾಡುವ ವಿಧಾನ ಇಲ್ಲಿದೆ….
Advertisement
ಬೇಕಾಗುವ ಸಾಮಾಗ್ರಿಗಳು
1. ತೊಗರಿಬೇಳೆ – 1 ಕಪ್
2. ಟೊಮೆಟೊ – 1
3. ಈರುಳ್ಳಿ – 1
4. ಹಸಿ ಮೆಣಸಿನಕಾಯಿ – 2 ರಿಂದ 3
5. ಶುಂಠಿ ಮತ್ತು ಬೆಳ್ಳುಳ್ಳಿ – 1/2 ಚಮಚ
6. ಕರಿಬೇವು
7. ಸಾಸವೆ
8. ಜೀರಿಗೆ
9. ಎಣ್ಣೆ – 3 ಚಮಚ
10. ಉಪ್ಪು – ರುಚಿಗೆ ತಕ್ಕಷ್ಟು
11. ಅರಿಶಿಣ – ಚಿಟಿಕೆ
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಕುಕ್ಕರ್ ನಲ್ಲಿ ತೊಗರಿಬೇಳೆಯನ್ನು ಎರಡರಿಂದ ಮೂರು ವಿಷಲ್ ಕೂಗಿಸಿಕೊಳ್ಳಿ.
* ಹಸಿ ಮೆಣಸಿನಕಾಯಿ, ಟೊಮೆಟೊ ಮತ್ತು ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿಕೊಳ್ಳಿ.
* ಪ್ಯಾನ್ ಸ್ಟೌವ್ ಮೇಲಿಟ್ಟುಕೊಂಡು ಒಗ್ಗರಣೆಗೆ ಎರಡರಿಂದ ಮೂರು ಚಮಚ ಎಣ್ಣೆ ಹಾಕಿಕೊಳ್ಳಿ. ಒಗ್ಗರಣೆಗೆ ಆಗುವರೆಗೂ ಸ್ಟೌವ್ ಕಡಿಮೆ ಉರಿಯಲ್ಲಿರಲಿ.
* ಎಣ್ಣೆ ಬಿಸಿಯಾಗ್ತಿದ್ದಂತೆ ಸಾಸಿವೆ, ಜೀರಿಗೆ, ಕರಿಬೇವು ಹಾಕಿ. ತದನಂತರ ಕತ್ತರಿಸಿಕೊಂಡಿದ್ದ ಈರುಳ್ಳಿ, ಟೊಮೆಟೊ, ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಈರುಳ್ಳಿ ಕಂದು ಬಣ್ಣಕ್ಕೆ ಬರುತ್ತಿದ್ದಂತೆ ಚಿಟಿಕೆ ಅರಿಶಿಣ, ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿಕೊಳ್ಳಿ.
* ಕೊನೆಯದಾಗಿ ಕುದಿಸಿದ ತೊಗರಿ ಬೇಳೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ದಾಲ್ ಮಿಕ್ಸ್ ಮಾಡುತ್ತಿದ್ದಂತೆ ಒಂದು ಕಪ್ ನೀರು ಸೇರಿಸಿ, ಐದರಿಂದ ಹತ್ತು ನಿಮಿಷ ಕುದಿಸಿದ್ರೆ ಡಾಬಾ ಶೈಲಿಯ ದಾಲ್ ಫ್ರೈ ರೆಡಿ.