– ಜೈಲಲ್ಲಿರೋರು ಪ್ರಭಾವಿಗಳು, ಕೆಳಮಟ್ಟದಲ್ಲಿರೋರು ಅಂತ ನೋಡಲ್ಲ
ಶಿವಮೊಗ್ಗ: ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಜೈಲು ಸೇರಿರುವ (Renuka Swamy Case) ಪವಿತ್ರಗೌಡಗೆ (Pavitra Gowda) ಮನೆ ಊಟ ಕೊಡದೇ ಇರೋದು ಒಳ್ಳೆಯದು ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆಯ ಮಹಾನಿರ್ದೇಶಕ ಅಲೋಕ್ ಕುಮಾರ್ ಹೇಳಿದ್ದಾರೆ.
ಶಿವಮೊಗ್ಗ (Shivamogga) ಕಾರಾಗೃಹಕ್ಕೆ ಭೇಟಿ ನೀಡಿ, ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಪವಿತ್ರಗೌಡಗೆ ಮನೆಯೂಟಕ್ಕೆ ಹೈಕೋರ್ಟ್ ನಿಷೇಧ ಹೇರಿದ ವಿಚಾರವಾಗಿ ಮಾಹಿತಿ ನೀಡಿದರು. ನಾವು ಕಾರಾಗೃಹದಲ್ಲಿ ಒಳ್ಳೆಯ ಊಟ ನೀಡುತ್ತಿದ್ದೇವೆ. ಮನೆಯಿಂದ ತರುವ ಊಟಕ್ಕೆ ನಾವು ಅವಕಾಶ ನೀಡುವುದಿಲ್ಲ. ಕಾರಾಗೃಹದಲ್ಲಿ ತಯಾರಿಸುವ ಊಟದ ಗುಣಮಟ್ಟವನ್ನು ಎಫ್ಎಸ್ಐಎಲ್‌ಗೆ ಪರೀಕ್ಷೆಗೆ ಕಳುಹಿಸಿ ಸರ್ಟಿಪೈಟ್ ಪಡೆದ ಬಳಿಕ ಕೈದಿಗಳಿಗೆ ನೀಡುತ್ತಿದ್ದೇವೆ. ಇದನ್ನೂ ಓದಿ: ಕಾನೂನು ಎಲ್ಲರಿಗೂ ಒಂದೇ – ಮನೆ ಊಟಕ್ಕೆ ಬೇಡಿದ್ದ ಪವಿತ್ರಾಗೆ ಶಾಕ್
ಜೈಲಿನಲ್ಲಿರುವ ಕೈದಿಗಳಲ್ಲಿ ಪ್ರಭಾವಶಾಲಿ ಯಾರು, ಕೆಳಮಟ್ಟದಲ್ಲಿರೋರು ಯಾರು ಎಂದು ನೋಡಲು ಸಾಧ್ಯವಿಲ್ಲ. ಸೆಕ್ಷನ್ 30 ಕರ್ನಾಟಕ ಪ್ರಿಜನರ್ಸ್ ಆಕ್ಟ್ 1963 ಪ್ರಕಾರ ಕೈದಿಗಳಿಗೆ ಊಟ, ಬಟ್ಟೆ ಪುಸ್ತಕ ಕೂಡಬೇಕು. ಈ ನಿಯಮದ ಅಡಿ ತೀರ್ಮಾನ ಮಾಡಲಾಗುತ್ತದೆ.
ಕಾರಗೃಹದ ಕೈದಿಗಳಿಗೆ ನಾವು ನೀಡುತ್ತಿರುವ ಊಟ ಸರ್ಟಿಫೈಡ್ ಆಗಿರೋದ್ರಿಂದ, ಒಬ್ಬರಿಗೆ ಮನೆಯಿಂದ ಊಟ ನೀಡಿದ್ರೆ, ಮುಂದೆ ಸಾವಿರಾರು ಜನ ಇದೇ ರೀತಿ ಕೇಳುತ್ತಾರೆ. ಇದರಿಂದ ಪವಿತ್ರಗೌಡಗೆ ಮನೆ ಊಟ ನೀಡಲು ನಿರಾಕರಿಸಿರುವುದು ಒಳ್ಳೆಯದು ಎಂದರು. ಇದನ್ನೂ ಓದಿ: ಪ್ರಾಸಿಕ್ಯೂಷನ್ ವಿರುದ್ಧವೇ ರೇಣುಕಾಸ್ವಾಮಿ ತಾಯಿ ಹೇಳಿಕೆ

