ಹಾಸನಾಂಬೆ ದರ್ಶನಕ್ಕೆ ಭಕ್ತರ ದಂಡು – ವಿಶೇಷ ಪಾಸ್ ಪಡೆದ್ರೂ 2 ತಾಸು ಕ್ಯೂ ನಿಲ್ಲಬೇಕು!

Public TV
1 Min Read
Hasanamba Darshana 1

ಹಾಸನ: ಹಾಸನಾಂಬೆ ದರ್ಶನಕ್ಕಾಗಿ 4ನೇ ದಿನವಾದ ಇಂದು ಭಕ್ತರ ದಂಡೇ ದೇವಾಲಯದತ್ತ ಹರಿದು ಬರುತ್ತಿದೆ. ಇಂದು ಬೆಳಗ್ಗೆಯಿಂದಲೇ ಸುಮಾರು 2 ಕಿಲೋಮೀಟರ್ ಉದ್ದದ ಸಾಲಿನಲ್ಲಿ ಭಕ್ತರು ದೇವಿ ದರ್ಶನಕ್ಕಾಗಿ ಕಾದು ನಿಂತಿದ್ದಾರೆ. ವೀಕೆಂಡ್ ಹಿನ್ನೆಲೆಯಲ್ಲಿ ಇಂದು ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

Hasanamba Darshana 2

ನಿನ್ನೆ ಮಳೆ ಜೋರಾಗಿದ್ದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡು ಬಂದಿತ್ತು. ಆದರೆ ಇಂದು ಮಳೆ ಕೂಡಾ ಕಡಿಮೆಯಾಗಿದ್ದು ಭಕ್ತರು ತಂಡೋಪತಂಡವಾಗಿ ದೇವಸ್ಥಾನದತ್ತ ಬರುತ್ತಿದ್ದಾರೆ. ಹಾಸನಾಂಬಾ ದೇವಸ್ಥಾನದಿಂದ ಬಿಎಂ ರಸ್ತೆಯಲ್ಲಿರುವ ಧರ್ಮಸ್ಥಳ ಆಯುರ್ವೇದ ಆಸ್ಪತ್ರೆವರೆಗೂ ಸುಮಾರು 2 ಕಿಲೋ ಮೀಟರ್ ಉದ್ದದಲ್ಲಿ ಸರತಿ ಸಾಲು ಇದೆ. ಈ ಸರತಿ ಸಾಲು ಇನ್ನಷ್ಟು ಬೆಳೆಯುವ ಸಾಧ್ಯತೆಯೇ ಹೆಚ್ಚಾಗಿದೆ. ಇಂದು ಕೂಡಾ ಮಳೆ ಬಂದರೆ ದೇವಿ ದರ್ಶನಕ್ಕೆ ಬಂದ ಭಕ್ತರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.

ಅವ್ಯವಸ್ಥೆ: ಹಾಸನಾಂಬೆಯ ದರ್ಶನಕ್ಕೆ ವಿಶೇಷ ಪಾಸ್ ವ್ಯವಸ್ಥೆ ಮಾಡಿದರೂ ಭಕ್ತರಿಗೆ ಅಂಥಾ ಮಹತ್ತರ ಪ್ರಯೋಜನವೇನೂ ಆಗಿಲ್ಲ. 300 ರೂ. ನೀಡಿ ಪಾಸ್ ಪಡೆದರೂ 2 ತಾಸು ಕ್ಯೂನಲ್ಲೇ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೇವಿಯ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡದ ಜಿಲ್ಲಾಡಳಿತದ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 20ರಂದು ರಾತ್ರಿಯವರೆಗೆ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅ.21ರಂದು ಗರ್ಭಗುಡಿಯ ಬಾಗಿಲು ಮುಚ್ಚುತ್ತಾರೆ.

Hasanamba Darshana 3

Hasanamba Darshana 4

Hasanamba Darshana 5

Hasanamba Darshana 7

Hasanamba Darshana 8

Hasanamba Darshana 9

Hasanamba Darshana 10

Hasanamba Darshana 11

Hasanamba Darshana 12

Hasanamba Darshana 13

Hasanamba Darshana 14

Hasanamba Darshana 15

Hasanamba Darshana 16

Hasanamba Darshana 17

HASANAMBE 9

HASANAMBE 7

HASANAMBE 6

HASANAMBE 5

Share This Article
Leave a Comment

Leave a Reply

Your email address will not be published. Required fields are marked *