ಕೊಪ್ಪಳ: ಜಿಲ್ಲೆಯ ಹೊಸಲಿಂಗಾಪುರ ಗ್ರಾಮದ ಕರಿಮಾರಿಯಮ್ಮ ದೇವಿಯ ಜಾತ್ರಾಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಭಕ್ತಾದಿಗಳು ದೇಹದಂಡನೆ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದ್ರು.
Advertisement
ವಿಚಿತ್ರ ಅಂದ್ರೆ ಕಬ್ಬಿಣದ ಸರಪಳಿಯನ್ನು ಬೆನ್ನಿಗೆ ಚುಚ್ಚಿಕೊಂಡು ದೇವರ ರಥ ಎಳೆದಿದ್ದು ನೋಡುಗರನ್ನ ನಿಬ್ಬೆರಗಾಗಿಸಿತು. ಇನ್ನೂ ಕೆಲವರು ಕಾರು ಎಳೆದ್ರೆ ಮತ್ತೆ ಕೆಲವರು ಗಲ್ಲಕ್ಕೆ ಮಾರುದ್ದ ತ್ರಿಷೂಲ ಚುಚ್ಚಿಕೊಂಡು ಹರಕೆ ತೀರಿಸಿದ್ರು. 23 ವರ್ಷಗಳಿಂದ ನಡೆದುಕೊಂಡು ಬರ್ತಿರುವ ಈ ವಿಶಿಷ್ಟ ಜಾತ್ರೆಗೆ ರಾಜ್ಯವಷ್ಟೇ ಅಲ್ಲದೆ ಹೊರರಾಜ್ಯದ ಭಕ್ತರು ಬಂದು ತಮ್ಮ ಹರಕೆ ತೀರಿಸ್ತಾರೆ.
Advertisement
Advertisement
23 ವರ್ಷಗಳಿಂದ ಈ ರೀತಿ ದೇವರ ರಥ ಎಳೆಯುತ್ತಿದ್ದೇವೆ. ಇದರಿಂದ ನಾವು ಅಂದುಕೊಂಡಿದ್ದೆಲ್ಲಾ ಆಗಿದೆ. ಅಂದ್ರೆ ಒಳ್ಳೆಯದೇ ಆಗಿದೆ. ಬೆನ್ನಿಗೆ ಚುಚ್ಚಿಕೊಂಡ್ರೆ ಏನೂ ಆಗಲ್ಲ. ಮೂರೇ ದಿನದಲ್ಲಿ ಗಾಯ ವಾಸಿಯಾಗತ್ತೆ ಅಂತಾ ಭಕ್ತ ನಾಗರಾಜ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
Advertisement
ಮನೆತನದಲ್ಲಿ ಏನಾದ್ರೂ ಸಮಸ್ಯೆಗಳು ಬಂದ್ರೆ ಅಥವಾ ಏನಾದ್ರೂ ತೊಂದ್ರೆಗಳು ಬಂದಲ್ಲಿ ಕಬ್ಬಿಣದ ಸರಪಳಿಯನ್ನು ಬೆನ್ನಿಗೆ ಚುಚ್ಚಿ ಕಾರು ಅಥವಾ ರಥ ಎಳೆಯೋದು ಹೀಗೆ ಏನಾದ್ರು ಒಂದು ರೀತಿಯಲ್ಲಿ ದೇವರ ಸೇವೆ ಮಾಡಿದ್ದಲ್ಲಿ ನಮ್ಮಲ್ಲಿರುವ ತೊಂದರೆಗಳು ಅಥವಾ ಕಷ್ಟಗಳು ನಿವಾರಣೆಯಾಗುತ್ತವೆ ಅಂತಾ ಭಕ್ತ ಚಂದ್ರಶೇಖರ್ ಹೇಳಿದ್ದಾರೆ.