Advertisements

ನಾನು ಬಾಬರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದೆ, ಶಿವಸೇನೆ ನಾಯಕರು ಯಾರೂ ಇರಲಿಲ್ಲ : ಫಡ್ನವೀಸ್

ಮುಂಬೈ: ಬಾಬರಿ ಮಸೀದಿ ಧ್ವಂಸದ ವೇಳೆ ನಾನು ಪಾಲ್ಗೊಂಡಿದ್ದೆ. ಆದರೆ ಅಲ್ಲಿ ಯಾವ ಶಿವಸೇನೆ ನಾಯಕರು ಕಾಣಲಿಲ್ಲ  ಎಂದು ಶಿವಸೇನೆಗೆ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿರುಗೇಟು ನೀಡಿದರು.

Advertisements

ರ‍್ಯಾಲಿಯಲ್ಲಿ ಮಾತನಾಡಿದ ಅವರು, ಬಾಬರಿ ಕಟ್ಟಡವನ್ನು ಧ್ವಂಸಗೊಳಿಸಿದ ದಿನ ಅಯೋಧ್ಯೆಯಲ್ಲಿದ್ದ ಸಕ್ರಿಯ ಕರಸೇವಕರಲ್ಲಿ ನಾನೂ ಇದ್ದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಭವ್ಯವಾದ ರಾಮಮಂದಿರ ನಿರ್ಮಾಣಕ್ಕಾಗಿ ಕರಸೇವೆಯಲ್ಲಿ ಭಾಗವಹಿಸಿದ್ದೆ. ನನ್ನನ್ನು ಜೈಲಿನಲ್ಲಿ ಇರಿಸಲಾಯಿತು. ನನ್ನ ಮೇಲೆ ಲಾಠಿಚಾರ್ಜ್ ಮಾಡಲಾಯಿತು ಎಂದರು.

Advertisements

ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆಯಲು ಹೆದರುವವರು ಬಾಬ್ರಿ ಮಸೀದಿ ಧ್ವಂಸದಲ್ಲಿ ಭಾಗವಹಿಸಿದ್ದರು ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಬಾಬರಿ ಮಸೀದಿ ಕೆಡವಿದಾಗ ನೀವು ಓಡಿಹೋಗಿದ್ದಿರಿ: ಬಿಜೆಪಿಗೆ ಉದ್ಧವ್‌ ಠಾಕ್ರೆ ತರಾಟೆ

ಬಾಬ್ರಿ ಮಸೀದಿಯನ್ನು ಮಸೀದಿ ಎಂದೇ ಪರಿಗಣಿಸುವುದಿಲ್ಲ. ಇದು ಕೇವಲ ಕಟ್ಟಡವಾಗಿತ್ತು ಎಂದು ನಾನು ಪರಿಗಣಿಸುತ್ತೇನೆ ಎಂದ ಅವರು, ಕೆಲವರು ತಾವು ಮಹಾರಾಷ್ಟ್ರ ಎಂದು ಭಾವಿಸುತ್ತಾರೆ. ಅವರ ಅಗೌರವ ಎಂದರೆ ಮಹಾರಾಷ್ಟ್ರದ ಅಗೌರವ. ಆದರೆ ಅವರಿಗೆ ನೀವು ರಾಜ್ಯವಲ್ಲ ಎಂಬುದು ತಿಳಿದಿರಬೇಕು. ಹನ್ನೆರಡು ಕೋಟಿ ಜನರು ಮಹಾರಾಷ್ಟ್ರದಲ್ಲಿದ್ದಾರೆ ಎಂದರು. ಇದನ್ನೂ ಓದಿ: ಎರಡೂವರೆ ಗಂಟೆ ಸಭೆ – ರಾಜ್ಯದಲ್ಲೂ ಯುವ ಮುಖಗಳಿಗೆ ಮಣೆ?

Advertisements

ಜೈಲಿನಲ್ಲಿರುವ ಮಾಜಿ ಸಚಿವ ಅನಿಲ್ ದೇಶಮುಖ್ ಹಾಗೂ ಹಾಲಿ ಸಚಿವ ನವಾಬ್ ಮಲಿಕ್ ಅವರನ್ನು ಉಲ್ಲೇಖಿಸಿದ ಅವರು, ಮೊದಲು ಮನೆಯಿಂದ ಕೆಲಸವಿತ್ತು. ಈಗ ಜೈಲಿನಿಂದ ಕೆಲಸವಿದೆ ಎಂದು ಟೀಕಿಸಿದರು.

Advertisements
Exit mobile version