BelgaumDistrictsKarnatakaLatestLeading NewsMain Post

ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ರದ್ದಾಗುವ ಸುಳಿವು – ಸಿಎಂ ನಿರ್ಧರಿಸುತ್ತಾರೆ ಎಂದ ದೇವೇಂದ್ರ ಫಡ್ನವಿಸ್

ಬೆಳಗಾವಿ: ಮಹಾರಾಷ್ಟ್ರ (Maharashtra) ಗಡಿ ಸಮನ್ವಯಕ್ಕೆ ಸಚಿವರ (Ministers) ಬೆಳಗಾವಿ (Belagavi) ಭೇಟಿ ರದ್ದಾಗುವ ಬಗ್ಗೆ ಅನುಮಾನ ಮೂಡಿದೆ. ಈ ಬಗ್ಗೆ ಮಹಾರಾಷ್ಟ್ರ ಡಿಸಿಎಂ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ಬಗ್ಗೆ ಸಿಎಂ ನಿರ್ಧರಿಸುತ್ತಾರೆ ಎಂದು ಮುಂಬೈನಲ್ಲಿ ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವಿಸ್ (Devendra Fadnavis) ಹೇಳಿದ್ದಾರೆ.

ಮುಂಬೈನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಡಿ ವಿವಾದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ಆಗಲಿ, ಮಹಾರಾಷ್ಟ್ರ ಆಗಲಿ ನಿರ್ಣಯ ಕೈಗೊಳ್ಳಲಾಗುವುದಿಲ್ಲ. ಏನೇ ನಿರ್ಣಯ ಕೈಗೊಳ್ಳಬೇಕಿದ್ದರೂ ಸುಪ್ರೀಂ ಕೋರ್ಟ್ ತಗೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಯಾವುದೇ ಹೊಸ ವಿವಾದ ಸೃಷ್ಟಿಸುವುದು ಯೋಗ್ಯವಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.

ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ರದ್ದಾಗುವ ಸುಳಿವು - ಸಿಎಂ ನಿರ್ಧರಿಸುತ್ತಾರೆ ಎಂದ ದೇವೇಂದ್ರ ಫಡ್ನವಿಸ್

ನಾಳೆ ಮಹಾಪರಿನಿರ್ವಾಹಣ ದಿನದ ನಿಮಿತ್ತ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡಲಿದ್ದರು. ಸಚಿವರು ಕೈಗೊಂಡ ನಿರ್ಣಯ ಯಾರೂ ತಡೆಯಲು ಸಾಧ್ಯವಿಲ್ಲ. ಆದರೆ ಮಹಾಪರಿನಿರ್ವಾಹಣ ದಿನ ನಾವು ಈ ರೀತಿ ವಾದ ಸೃಷ್ಟಿಸುವುದು ಸರಿಯೇ? ನಾವು ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಈ ಬಗ್ಗೆ ಸಿಎಂ ಏಕನಾಥ್ ಶಿಂಧೆ ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜೋಡೋ ಯಾತ್ರೆ ವೇಳೆ ಮೋದಿ ಪರ ಘೋಷ – ತಲೆಕೆಡಿಸಿಕೊಳ್ಳದೇ ಗಾಳಿಯಲ್ಲಿ ಮುತ್ತು ತೇಲಿಸಿದ ರಾಗಾ

ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ರದ್ದಾಗುವ ಸುಳಿವು - ಸಿಎಂ ನಿರ್ಧರಿಸುತ್ತಾರೆ ಎಂದ ದೇವೇಂದ್ರ ಫಡ್ನವಿಸ್

ಮಹಾಪರಿನಿರ್ವಾಹಣ ದಿನ ಅತ್ಯಂತ ಮಹತ್ವದ ದಿನ. ಅಂದು ಯಾವುದೇ ಅಹಿತಕರ ಘಟನೆ ಆಗಬಾರದು. ಈ ದಿನ ಯಾವುದೇ ಪ್ರತಿಭಟನೆ ಆಗುವುದು ಯೋಗ್ಯವಲ್ಲ. ಭವಿಷ್ಯದಲ್ಲಿ ನಾವು ಬೆಳಗಾವಿಗೆ ಹೋಗೋದನ್ನು ಯಾರಿಂದಲೂ ತಡೆಯಲು ಆಗುವುದಿಲ್ಲ. ಸ್ವತಂತ್ರ್ಯ ಭಾರತದ ಯಾವುದೇ ಪ್ರದೇಶಕ್ಕೆ ಹೋಗಲು ಯಾರೂ ಯಾರನ್ನೂ ತಡೆಯಲಾಗಲ್ಲ. ಮಹಾಪರಿನಿರ್ವಾಹಣ ದಿನ ಇರುವುದರಿಂದ ಬೆಳಗಾವಿ ಭೇಟಿ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಅಂತಿಮ ನಿರ್ಧಾರ ಸಿಎಂ ಕೈಗೊಳ್ಳುತ್ತಾರೆ ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಇದನ್ನೂ ಓದಿ: Gujarat Exit Poll Result: ಗುಜರಾತ್‌ನಲ್ಲಿ ಸತತ 7ನೇ ಬಾರಿ ಬಿಜೆಪಿಗೆ ಅಧಿಕಾರ

Live Tv

Leave a Reply

Your email address will not be published. Required fields are marked *

Back to top button