ನವದೆಹಲಿ: ಎಲ್‌ಪಿಜಿ ದರ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ಅಭಿವೃದ್ಧಿ ಮಾತುಗಳಿಂದ ದೂರ ಉಳಿದಿದೆ. ಸೌದೆ ಒಲೆಯಲ್ಲಿ ಅಡುಗೆ ಮಾಡುವಂತೆ ಜನರನ್ನು ಬಲವಂತವಾಗಿ ದೂಡಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ವಾಹನ “ರಿವರ್ಸ್ ಗೇರ್” ತೆಗೆದುಕೊಂಡಿದೆ. ಅದಕ್ಕೆ ಬ್ರೇಕ್ ಕೂಡ ಇಲ್ಲವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ತಿಳುವಳಿಕೆ ಇಲ್ಲದವರು, ಡಿಕೆಶಿ, ಸಿದ್ದರಾಮಯ್ಯ ಅವರಂತೆ ಯಾಕೆ ಆಡ್ತೀರಾ?: ಜೋಶಿ
Advertisement
Advertisement
ಸರ್ವೇ ವರದಿಯೊಂದರ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಗ್ರಾಮೀಣ ಭಾಗದಲ್ಲಿ ಶೇ. 42ರಷ್ಟು ಜನರು ಅಡುಗೆ ಮಾಡಲು ಎಲ್‌ಪಿಜಿ ಸಿಲಿಂಡರ್ ಬಳಕೆ ನಿಲ್ಲಿಸಿದ್ದಾರೆ. ಬೆಲೆ ಏರಿಕೆಯಿಂದ ಸಿಲಿಂಡರ್ ಖರೀದಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಅಡುಗೆಗೆ ಸೌದೆ ಒಲೆಯನ್ನೇ ಬಳಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಿಮ್ ಮಾಡುವ ವೇಳೆ ಕೈ ಬೆರಳು ಮುರಿದುಕೊಂಡ Junior NTR
Advertisement
विकास के जुमलों से कोसों दूर,
लाखों परिवार चूल्हा फूंकने पर मजबूर।
मोदी जी के विकास की गाड़ी रिवर्स गियर में है और ब्रेक भी फ़ेल हैं।#PriceHike pic.twitter.com/IwEUBUe0un
— Rahul Gandhi (@RahulGandhi) November 6, 2021
ಹಣದುಬ್ಬರ ವಿಷಯವಾಗಿ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಪಕ್ಷ ಟೀಕಿಸಿದೆ.