ಮಂಡ್ಯ: ಎಲ್ಲೆಲ್ಲಿ ಡಬಲ್ ಎಂಜಿನ್ ಸರ್ಕಾರ ಇದೆಯೋ ಅಲ್ಲೆಲ್ಲಾ ಅಭಿವೃದ್ಧಿ ಆಗಿದೆ. ಬೇರೆ ಸರ್ಕಾರಗಳಿರುವ ರಾಜ್ಯದಲ್ಲಿ ಕೇಂದ್ರದ ಯೋಜನೆಗಳು ತಲುಪಿಲ್ಲ. ಹಿಂದೆಂದೂ ಆಗದ ಅಭಿವೃದ್ಧಿ ಕಳೆದ 5 ವರ್ಷಗಳಲ್ಲಿ ಆಗಿದೆ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ.
ಮಂಡ್ಯದಲ್ಲಿ (Mandya) ನಡೆದ ಬಿಜೆಪಿ (BJP) ಯುವ ಮೋರ್ಚಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮ ಧ್ವನಿ ಕಾಂಗ್ರೆಸ್ (Congress), ಜೆಡಿಎಸ್ ಅಡಿಪಾಯ ಅಲ್ಲಾಡುವಂತಿರಬೇಕು ಎಂದು ಕಾರ್ಯಕರ್ತರಿಗೆ ಹುರುಪು ತುಂಬಿದರು. ಇದನ್ನೂ ಓದಿ:ಬಿಜೆಪಿಯಿಂದ ಪ್ರಣಾಳಿಕೆ ರಚನಾ ಕಾರ್ಯ ಚುರುಕು; ಜನರಿಂದ ಸಲಹೆ ಸಂಗ್ರಹಕ್ಕೆ ಚಾಲನೆ
ಕಳೆದ 70 ವರ್ಷಗಳಲ್ಲಿ ಆಗದ ಹೈವೇ, ರೈಲ್ವೆ ಅಭಿವೃದ್ಧಿ ಕೆಲಸ ಬಿಜೆಪಿ ಸರ್ಕಾರದಲ್ಲಿ ಆಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಕಟ್ಟಿದ ಮೆಡಿಕಲ್ ಕಾಲೇಜುಗಳಿಗಿಂತ ಹೆಚ್ಚು ಕಾಲೇಜು ಮೋದಿ ಸರ್ಕಾರ ಮಾಡಿದೆ. ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳು ಮನೆ ಮನಗಳಿಗೆ ತಲುಪಿಸಬೇಕು ಎಂದರು.
ಹಳೇ ಮೈಸೂರಿನ ಜನರು ಬೆಂಗಳೂರಿಗೆ ಕೆಲಸಕ್ಕೆ ಬರುತ್ತಾರೆ. ಕಾರಣ ಇಲ್ಲಿಂದ ಗೆದ್ದವರು ಯುವಕರಿಗೆ ಉದ್ಯೋಗ ನೀಡುವ ಕೆಲಸ ಮಾಡಲಿಲ್ಲ. ಬೊಮ್ಮಾಯಿ ನೇತೃತ್ವದ ಸರ್ಕಾರ ಮೈಶುಗರ್ ಗೆ ಹಣ ನೀಡಿ ಕಾರ್ಖಾನೆ ಆರಂಭಿಸಿದೆ. ಕಣ್ಣು ಬಿಡದ ಬೆಕ್ಕಿನ ಮರಿಗಳು ಜೆಡಿಎಸ್, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಿದೆ. ಕಣ್ಣು ಬಿಡಿ. ಅಧಿಕಾರಕ್ಕೆ ಬರುವುದು ಬಿಜೆಪಿ ಪಕ್ಷ ಎಂದು ಅಜ್ಜಿ ಮತ್ತು ಬೆಕ್ಕಿನಮರಿಗಳ ಕಥೆ ಹೇಳಿ ಕಾಂಗ್ರೆಸ್ ಹಾಗೂ ಜೆಡಿಎಸ್ (JDS) ಪಕ್ಷಗಳನ್ನು ಅಣಕಿಸಿದರು. ಇದನ್ನೂ ಓದಿ: ನಾನು ಹುಟ್ಟಿರೋದೆ ಮಾಂಸ ತಿನ್ನೋ ಜಾತಿಯಲ್ಲಿ, ಆದ್ರೆ ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ: ಸಿ.ಟಿ ರವಿ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k
I don’t think the title of your article matches the content lol. Just kidding, mainly because I had some doubts after reading the article.