ನವದೆಹಲಿ/ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಇನ್ನಷ್ಟು ಕಗ್ಗಂಟಾಗಿದೆ. ಬುಧವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಒಂದೂವರೆ ತಾಸು ಮಾತುಕತೆ ನಡೆಸಿದರೂ ಫಲಪ್ರದವಾಗಿಲ್ಲ.
ದೆಹಲಿಯ ಸಫ್ದರ್‍ಜಂಗ್ ರಸ್ತೆಯಲ್ಲಿನ ತಮ್ಮ ನಿವಾಸಕ್ಕೆ ಭೇಟಿ ಕೊಟ್ಟ ರಾಹುಲ್‍ಗಾಂಧಿಯನ್ನು ದೇವೇಗೌಡರು ಖುದ್ದು ಸ್ವಾಗತಿಸಿದರಾದರೂ, ಸೀಟು ಹಂಚಿಕೆ ಮಾತುಕತೆ ವೇಳೆ ಬಗ್ಗಲಿಲ್ಲ. ಕಾಂಗ್ರೆಸ್ 9 ಕ್ಷೇತ್ರಗಳನ್ನು ಬಿಟ್ಟು ಕೊಡಲು ಒಪ್ಪಿತು. ಆದ್ರೆ 10 ಕ್ಷೇತ್ರಗಳಿಗೆ ದೇವೇಗೌಡರು ಬಿಗಿಪಟ್ಟು ಹಿಡಿದಿದ್ದರಿಂದ ಮಾತುಕತೆ ವಿಫಲವಾಯ್ತು. ಮೈತ್ರಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ಹಂಚಿಕೆಗೆ ಪಾಲನೆಯಾಗಿರೋ 3ನೇ 1 ಭಾಗದಂತೆ, ಸೀಟು ಕೂಡ ಹಂಚಿಕೆಯಾಗಲಿ ಎಂದು ದೇವೇಗೌಡರ ಬೇಡಿಕೆ ಇಟ್ಟಿದ್ದಾರೆ.
Advertisement
Advertisement
ಎಚ್‍ಡಿಡಿ ಬೇಡಿಕೆ ಏನು?
ಮೂರನೇ ಒಂದು ಭಾಗದಷ್ಟು ಸೀಟು ಹಂಚಿಕೆಯಾಗಬೇಕು. ಹೀಗಾಗಿ ಕನಿಷ್ಠ 10 ಲೋಕಸಭಾ ಕ್ಷೇತ್ರ ಬಿಟ್ಟು ಕೊಡಬೇಕು. ರಾಜ್ಯದಲ್ಲಿ ಮೈತ್ರಿಯಾಗಿ ನಾವು ದೇಶಕ್ಕೆ ಸಂದೇಶ ಕಳುಹಿಸಿದ್ದೇವೆ. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದು ನಮಗೆ ಮುಖ್ಯವಾಗುತ್ತದೆ. ಈ ಕಾರಣಕ್ಕೆ ಹಾಲಿ ಸಂಸದ ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಡಿ. ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಬೆಂಗಳೂರು ಉತ್ತರ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ವಿಜಯಪುರ, ಬೀದರ್ ಕ್ಷೇತ್ರವನ್ನು ನಮಗೆ ಬಿಟ್ಟಕೊಡಿ. ಚಿಕ್ಕಬಳ್ಳಾಪುರದಲ್ಲಿ ಒಕ್ಕಲಿಗರೇ ಅಭ್ಯರ್ಥಿ ಆಗಬೇಕು. ಆ ಕಾರಣಕ್ಕಾಗಿ ಆ ಕೇತ್ರವನ್ನೂ ನಮಗೆ ಬಿಟ್ಟುಕೊಡಿ ಎಂದು ಎಚ್‍ಡಿಡಿ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಹೈಕಮಾಂಡಿಗೆ ಎಚ್ಚರಿಕೆ:
ಕಾಂಗ್ರೆಸ್-ಜೆಡಿಎಸ್ ನಡುವೆ ಸೀಟು ಹಂಚಿಕೆಯ ಚೌಕಾಸಿ ನಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ಸಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಜೆಡಿಎಸ್‍ಗೆ ಬಿಟ್ಟು ಕೊಡದೆ ಕಾಂಗ್ರೆಸ್ ಪಕ್ಷವೇ ಉಳಿಸಿಕೊಳ್ಳಬೇಕೆಂದು ಶಾಸಕ ಡಾ. ಸುಧಾಕರ್ ಆಗ್ರಹಿಸಿದ್ದಾರೆ. ಒಂದು ವೇಳೆ, ಜೆಡಿಎಸ್‍ಗೆ ಏನಾದರೂ ಬಿಟ್ಟು ಕೊಟ್ಟರೆ ನಾವು ಪಕ್ಷದ ವಿರುದ್ಧ ಕೆಲಸ ಮಾಡಬೇಕಾಗುತ್ತದೆ ಅಂತ ಶಾಸಕ ಸುಧಾಕರ್ ಹೈಕಮಾಂಡಿಗೆ ಎಚ್ಚರಿಕೆ ನೀಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv