ನವಿಲಿನಂತೆ ಮಿಂಚಿದ ಜಾನ್ವಿ ಕಪೂರ್

Public TV
1 Min Read
janhvi kapoor

ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಸಂಗೀತ ಕಾರ್ಯಕ್ರಮಕ್ಕೆ ಬಾಲಿವುಡ್ ನಟ, ನಟಿಯರ ದಂಡೇ ಹಾಜರಿ ಹಾಕಿದೆ. ಇವರೆಲ್ಲರ ನಡುವೆ ಜಾನ್ವಿ ಕಪೂರ್ ನವಿಲಿನಂತೆ ಕಂಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:ಪ್ರಭಾಸ್‌ಗಾಗಿ ಏನು ಬೇಕಾದ್ರೂ ಮಾಡ್ತೀನಿ ಎಂದ ‘ಹೆಡ್‌ಬುಷ್’ ನಟಿ ಪಾಯಲ್

janhvi kapoor 2

ನಟಿ ಜಾನ್ವಿ ಕಪೂರ್ ನವಿಲಿನಂತೆ ಲೆಹೆಂಗಾ ಡಿಸೈನ್‌ ಮಾಡಿರುವ ಧಿರಿಸಿನಲ್ಲಿ ಮಿರ ಮಿರ ಮಿಂಚಿದ್ದಾರೆ. ನೀಲಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸುತ್ತಿರುವ ಜಾನ್ವಿ ಲುಕ್ ನೋಡಿ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ನಟಿಯ ವಿಭಿನ್ನ ಉಡುಗೆಗೆ ಫ್ಯಾಷನ್ ಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ.

janhvi kapoor 3

ಅನಂತ್, ರಾಧಿಕಾ ಸಂಗೀತ ಕಾರ್ಯಕ್ರಮದಲ್ಲಿ ಬಾಯ್‌ಫ್ರೆಂಡ್ ಶಿಖರ್ ಜೊತೆ ನಟಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ. ಈ ಮೂಲಕ ಇಬ್ಬರ ಡೇಟಿಂಗ್ ವಿಷ್ಯ ಮತ್ತೆ ಗಾಸಿಪ್ ಮಂದಿಯ ಬಾಯಿಗೆ ಆಹಾರವಾಗಿದೆ.

janhvi kapoor 4

ಅಂದಹಾಗೆ, ಜ್ಯೂ.ಎನ್‌ಟಿಆರ್ ಜೊತೆ ‘ದೇವರ’ (Devara) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಹಳ್ಳಿ ಹುಡುಗಿಯ ಪಾತ್ರದಲ್ಲಿ ಜಾನ್ವಿ ಜೀವ ತುಂಬಿದ್ದಾರೆ.

janhvi 2

ರಾಮ್ ಚರಣ್ ಮತ್ತು ಬುಚ್ಚಿಬಾಬು ಕಾಂಬಿನೇಷನ್ ಸಿನಿಮಾದಲ್ಲಿ ನಟಿಗೆ ಚಾನ್ಸ್ ಸಿಕ್ಕಿದೆ. ಇಲ್ಲಿಯೂ ಡಿಫರೆಂಟ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ನಟ ಶಿವರಾಜ್‌ಕುಮಾರ್‌ ಕೂಡ ಕಾಣಿಸಿಕೊಳ್ತಿದ್ದಾರೆ.

Share This Article