ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ದಿನದಿಂದ ದಿನಕ್ಕೆ ಏರಿಳಿತದ ನಡುವೆ ಇದೀಗ ಕಳೆದ ಒಂದು ವಾರದಿಂದ ಶೇ.0.5 ಒಳಗೆ ಪಾಸಿಟಿವ್ ಪ್ರಮಾಣ ಬರುತ್ತಿದೆ. ಈ ಹಿನ್ನೆಲೆ ಜನರು ನಿಟ್ಟುಸಿರು ಬಿಡುತ್ತಿರುವ ವೇಳೆಯಲ್ಲಿ ಮತ್ತೆ ಜಿಲ್ಲೆಯಲ್ಲಿ ರೂಪಾಂತರಿ ಮಹಾಮಾರಿ ವೈರಸ್ ವಕ್ಕರಿಸಲು ರೆಡಿ ಅಗುತ್ತಿದೆ.
Advertisement
ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ರೂಪಾಂತರಿಯಾದ ಮಹಾಮಾರಿ ಕೋವಿಡ್ ಡೆಲ್ಟಾ ವೇರಿಯಂಟ್ ತಳಿ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಡೆಲ್ಟಾ ವೇರಿಯಂಟ್ 19 ಪ್ರಕರಣ ಪತ್ತೆಯಾಗಿದೆ. ಇಂದು ನಿಮ್ಹಾನ್ಸ್ ನಿಂದ ಬಂದಿರುವ ವರದಿಯಲ್ಲಿ 19 ಜನರಿಗೆ ಡೆಲ್ಟಾ ವೇರಿಯಂಟ್ ಇರುವುದು ದೃಢವಾಗಿದೆ. ಇದುವರೆಗೆ 67 ಸ್ಯಾಂಪಲ್ ಕಲೆಕ್ಟ್ ಮಾಡಲಾಗಿತ್ತು. ಅದರಲ್ಲಿ 19 ಪ್ರಕರಣಗಳು ಪತ್ತೆಯಾಗಿವೆ. ಇದನ್ನೂ ಓದಿ: ಆಸ್ಕರ್ ಆತ್ಮ ಸ್ವರ್ಗ ಸಾಮ್ರಾಜ್ಯ ತಲುಪಿದೆ – ಉಡುಪಿ ಬಿಷಪ್ ಪ್ರಾರ್ಥನೆ
Advertisement
Advertisement
ಈಗಾಗಲೇ ಆರೋಗ್ಯ ಇಲಾಖೆಯ ಬಳಿ ಎಲ್ಲರ ಸಂಪರ್ಕ ಇರುವುದರಿಂದ ಕೂಡಲೇ ಪತ್ತೆ ಹಚ್ಚಲಾಗುವುದು. ಅವರ ಆರೋಗ್ಯದ ಮೇಲೆ ನಿಗಾ ಇರಿಸಿ ಚಿಕಿತ್ಸೆ ಕೊಡಲಾಗುವುದು ಎಂದು ಕೊಡಗು ಡಿಎಚ್‍ಓ ವೆಂಕಟೇಶ್ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲೆಯ ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು, ಇಲ್ಲದೇ ಹೋದ್ರೆ ಡೆಲ್ಟಾ ವೇರಿಯಂಟ್ ಪ್ರಕರಣಗಳು ಮತ್ತಷ್ಟು ಜಿಲ್ಲೆಯಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲೆಯ ಜನರು ಡೆಲ್ಟಾ ವೇರಿಯಂಟ್ ಪತ್ತೆ ಆಗಿರುವುದರಿಂದ ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: ಆಹಾರ, ಸೆಕ್ಸ್ ಯಾವುದನ್ನ ಆಯ್ಕೆ ಮಾಡಿಕೊಳ್ಳುತ್ತೀರಾ..?: ಶೃತಿ ಕೊಟ್ರು ಬೋಲ್ಡ್ ಆನ್ಸರ್