ಬೆಂಗಳೂರು: ಬಿಜೆಪಿಯ ಮಾಜಿ ಸಚಿವ, ಹಾಲಿ ಶಾಸಕರ ಹನಿಟ್ರ್ಯಾಪ್ ಪ್ರಕರಣ ಕ್ಷಣದಿಂದ ಕ್ಷಣಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಆರೋಪಿ ರಾಘವೇಂದ್ರ ಅಲಿಯಾಸ್ ರಘು ಮನೆಯಲ್ಲಿದ್ದ ಹಾರ್ಡ್ ಡಿಸ್ಕ್ ನಲ್ಲಿ ಇಬ್ಬರು ಶಾಸಕರು ಒಳಗೊಂಡಂತೆ 10 ಜನರ ಖಾಸಗಿ ವಿಡಿಯೋಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಇಬ್ಬರು ಶಾಸಕರನ್ನು ಸೇರಿದಂತೆ 10 ಜನರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಲು ರಾಘವೇಂದ್ರ ತನ್ನ ಗೆಳತಿಯನ್ನು ಬಳಸಿಕೊಂಡಿದ್ದನು. ಈ ಕೆಲಸಕ್ಕೆ ಗೆಳತಿ ಮೊದಲು ಹಿಂದೇಟು ಹಾಕಿದ್ದಳು. ಆದರೆ ಹಣದಾಸೆಗಾಗಿ ಹನಿಟ್ರ್ಯಾಪ್ ಗೆ ರಘುಗೆ ಸಾಥ್ ನೀಡಿದ್ದಳು. ರಾಘವೇಂದ್ರನ ಗೆಳತಿ ಕಿರುತೆರೆಯ ನಟಿಯೆಂದು ಹೇಳಲಾಗುತ್ತಿದ್ದು, ಈಕೆ ಕಿರುತೆರೆಗಾಗಿ ತೆಗೆಸಿದ್ದ ಫೋಟೋಗಳನ್ನು ಬಳಸಿ ಪ್ರಭಾವಿ ವ್ಯಕ್ತಿಗಳನ್ನು ಬಲೆಗೆ ಬೀಳಿಸಲು ರಾಘವೇಂದ್ರ ಪ್ಲಾನ್ ಮಾಡಿಕೊಳ್ಳುತ್ತಿದ್ದನು.
Advertisement
Advertisement
ರಾಘವೇಂದ್ರನ ಗೆಳತಿಯದ್ದು ಹೈದರಾಬಾದ್ ಮೂಲದ ಮುಸ್ಲಿಂ ಯುವಕನೊಂದಿಗೆ ಮದುವೆಯಾಗಿತ್ತು. ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದರಿಂದ ಗಂಡನನ್ನು ತೊರೆದು ಬೆಂಗಳೂರು ಸೇರಿದ್ದಳು. ಇಲ್ಲಿಯೇ ಪರಿಚಯವಾದವನೇ ಮೇಕಪ್ ಆರ್ಟಿಸ್ಟ್ ರಾಘವೇಂದ್ರ. ಈಕೆಯ ಮೂಲಕವೇ ಇಬ್ಬರು ಶಾಸಕರು ಸೇರಿದಂತೆ 10 ಜನರನ್ನು ಹನಿಟ್ರ್ಯಾಪ್ ಬಲೆಯಲ್ಲಿ ಸಿಲುಕಿಸಿದ್ದನು.
Advertisement
ಕಾಲೇಜು ಯುವತಿಯರ ಹೆಸರಿನಲ್ಲಿ ಹುಡುಗಿಯನರನ್ನು ರಘು ತಯಾರು ಮಾಡುತ್ತಿದ್ದನು. ಇದೇ ಯುವತಿಯರು ಶಾಸಕ ಬಳಿ ತೆರಳಿ ಅಧ್ಯಯನ ಮಾಡುತ್ತಿದ್ದೇವೆ. ವಾಸ್ತವ್ಯಕ್ಕೆ ಸ್ಥಳ ಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದರು. ಶಾಸಕರಿಗೆ ಹುಡುಗಿಯರ ನಂಬರ್ ಕೊಡಿಸಿ ಪರಿಚಯ ಸಹ ಮಾಡಿಸುತ್ತಿದ್ದನು. ಇತ್ತ ಶಾಸಕರ ನಂಬರ್ ಪಡೆದ ಯುವತಿಯರು ಪದೇ ಪದೇ ಕಾಲ್ ಮಾಡಿ ಬಣ್ಣದ ಮಾತುಗಳಿಂದ ತಮ್ಮ ಮೋಡಿಯ ವ್ಯೂಹದಲ್ಲಿ ಸಿಲುಕಿಸಿಕೊಳ್ಳುತ್ತಿದ್ದರು.
Advertisement
ಶಾಸಕರು ತಮ್ಮ ಮೋಡಿಗೆ ಸಿಲುಕುತ್ತಿದ್ದಂತೆ ಐಷಾರಾಮಿ ಹೋಟೆಲ್ ಗಳಲ್ಲಿ ರೂಮ್ ಬುಕ್ ಮಾಡುತ್ತಿದ್ದರು. ಈ ವೇಳೆ ತಿಳಿಯದಂತೆ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಬಿಜೆಪಿಯ ಮಾಜಿ ಸಚಿವ, ಶಾಸಕರಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣದಲ್ಲಿ ಆರೋಪಿ ರಾಘವೇಂದ್ರ ಮತ್ತು ಆತನ ಗೆಳತಿಯ ಬಂಧನವಾಗಿದೆ.
ಇಷ್ಟು ಮಾತ್ರವಲ್ಲದೇ ಮೈ ಎಸ್‍ಎಂಎಸ್ ಆ್ಯಪ್ ಮೂಲಕ ಕಂಡವರ ಖಾಸಗಿತನಕ್ಕೆ ರಘು ಕನ್ನ ಹಾಕುತ್ತಿದ್ದನು. ಬೇರೆಯವರ ಮೊಬೈಲ್ ನಲ್ಲಿ ಮೈ ಎಸ್‍ಎಂಎಸ್ ಎಂಬ ಆ್ಯಪ್ ಹಾಕಿ ತನ್ನ ಮೊಬೈಲಿಗೆ ಅವರ ಮೆಸೇಜ್ ಗಳು ಬರುವಂತೆ ಮಾಡುತ್ತಿದ್ದನು. ಈ ಸಂಬಂಧ ರಘು ಮೇಲೆ ಸೈಬರ್ ಕ್ರೈಂನಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಖಾಸಗಿತನಕ್ಕೆ ಧಕ್ಕೆ ಆರೋಪದಡಿ ಮೈಸೂರಿನಲ್ಲಿಯೂ ರಘು ವಿರುದ್ಧ ಪ್ರಕರಣಗಳು ದಾಖಲಾಗಿವೆ.