ತಮಿಳು ನಾಡು (Tamil Nadu) ಹಾಗೂ ಕೇರಳದಲ್ಲಿ (Kerala) ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರಕ್ಕೆ ಅಷ್ಟೇನೂ ಸ್ಪಂದನೆ ಸಿಗದೇ ಇದ್ದರೂ, ಇತರ ರಾಜ್ಯಗಳಲ್ಲಿ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಿದ್ದರೂ ಈ ಸಿನಿಮಾ ಮೂರೇ ದಿನದಲ್ಲಿ 35.25 ಕೋಟಿ ಗಳಿಸುವ ಮೂಲಕ ಅಚ್ಚರಿ ಮೂಡಿಸಿದೆ. ರಿಲೀಸ್ ದಿನ ಚಿತ್ರಕ್ಕೆ ಅಷ್ಟೇನೂ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಆದರೆ, ಶನಿವಾರದಿಂದ ಬಹುತೇಕ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.
Advertisement
ದಿ ಕೇರಳ ಸ್ಟೋರಿ ಸಿನಿಮಾದ ಮೊದಲ ದಿನ (ಶುಕ್ರವಾರ) ಗಳಿಕೆ 8.03 ಕೋಟಿ ರೂ., ಎರಡನೇ ದಿನ (ಶನಿವಾರ) ಗಳಿಕೆ 11.22 ಕೋಟಿ ರೂಪಾಯಿ ಮೂರನೇ ದಿನ (ರವಿವಾರ) ಗಳಿಕೆ 16 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮೂರು ದಿನದ ಒಟ್ಟು ಆದಾಯ 35.25 ಕೋಟಿ ಎಂದು ಬಾಲಿವುಡ್ ಸಿನಿಮಾ ಲೆಕ್ಕಿಗ ತರುಣ್ ಆದರ್ಶ ಟ್ವೀಟ್ ಮಾಡಿದ್ದಾರೆ. ಕೆಲವು ಸಿನಿಮಾಗಳ ಕಂಪೇರ್ ಕೂಡ ಅವರು ಮಾಡಿದ್ದಾರೆ.
Advertisement
Advertisement
ದೇಶದಾದ್ಯಂತ ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್ ಆಗಿದೆ. ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಮೂಡಿ ಬಂದಿದ್ದು, ಕೇರಳದಲ್ಲೂ ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಮಾಲೀಕರು ಹಿಂದೇಟು ಹಾಕಿದ್ದರು. ಕೇರಳ ಸರಕಾರದ ಸಪೋರ್ಟ್ ಇಲ್ಲದ ಕಾರಣದಿಂದಾಗಿ ಮತ್ತು ಪ್ರತಿಭಟನೆಯ ಕಾವು ಜೋರಾಗಿದ್ದರಿಂದ ಚಿತ್ರಮಂದಿರಗಳ ಮಾಲೀಕರು ಭಯದಲ್ಲಿದ್ದಾರಂತೆ. ಈ ಕಾರಣದಿಂದಾಗಿ ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿಲ್ಲ. ಇದನ್ನೂ ಓದಿ:ಮಕ್ಕಳು ಜನಿಸಿದಾಗ ಪ್ರೇಮ್ ಪರಿಸ್ಥಿತಿ ಹೇಗಿತ್ತು? ಕಷ್ಟದ ದಿನಗಳ ಬಗ್ಗೆ ನಟನ ಮಾತು
Advertisement
ಈಗಾಗಲೇ ವಿವಾದಕ್ಕೆ ಕಾರಣವಾಗುವಂತಹ ಮತ್ತು ಆಕ್ಷೇಪಕ್ಕೆ ಗುರಿಯಾಗಿರುವ ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ. ಬರೋಬ್ಬರಿ 10 ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿದೆ. ಅಲ್ಲದೇ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ನೀಡಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನ, ಕೆಲ ಸಂಭಾಷಣೆಗಳು ಹಾಗೂ ಕಮ್ಯುನಿಸ್ಟ್ ಪಕ್ಷದವರ ಬಗ್ಗೆ ಆಡಿದ ಮಾತುಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ.