ಬೆಂಗಳೂರು: ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರದಲ್ಲಿ ಇದ್ದರೂ ಬಿಜೆಪಿಗೆ (BJP) ದೇಣಿಗೆ ಜಾಸ್ತಿ ಬಂದಿದೆ.
ಅಸೋಸಿಯೇಷನ್ ಡೆಮೊಕ್ರಾಟಿಕ್ ಡೆಮೊಕ್ರಾಟಿಕ್ (ADR) ಸಂಸ್ಥೆ 2023-24ರ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ ಸಿಕ್ಕಿದ ದೇಣಿಗೆ ವಿವರವನ್ನು ಬಹಿರಂಗ ಮಾಡಿದೆ. 20 ಸಾವಿರ ರೂ.ಗಿಂತ ಹೆಚ್ಚು ದೇಣಿಗೆ ಕೊಟ್ಟ ವಿವರಗಳನ್ನು ಎಡಿಆರ್ ಪ್ರಕಟಿಸಿದೆ.
ಕರ್ನಾಟಕದಲ್ಲಿ ಒಟ್ಟು 98.60 ಕೋಟಿ ರೂ. ಹಣ ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ಬಂದಿದೆ. ಈ ಪೈಕಿ ಬಿಜೆಪಿಗೆ 75.54 ಕೋಟಿ ರೂ., ಕಾಂಗ್ರೆಸ್ ಗೆ 17.01 ಕೋಟಿ ರೂ., ಆಪ್‌ಗೆ 6.06ಕೋಟಿ ರೂ. ದೇಣಿಗೆ ಬಂದಿದೆ. ಇದನ್ನೂ ಓದಿ: ಎರಡೇ ವಾರಕ್ಕೆ ಮುರಿದು ಬಿತ್ತು ಹಿಂದೂ ಯುವಕ, ಮುಸ್ಲಿಂ ಯುವತಿಯ ಪ್ರೇಮ ವಿವಾಹ
ರಾಜ್ಯಗಳಿಂದ ಒಟ್ಟು ರಾಜಕೀಯ ಪಕ್ಷಗಳಿಗೆ 2,544.27 ಕೋಟಿ ರೂ. ದೇಣಿಗೆ ಬಂದಿದೆ. ಈ ಪೈಕಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ ಗುಜರಾತ್ ಎರಡನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಕಚ್ಚಾ ತೈಲ ದರ ಭಾರೀ ಇಳಿಕೆ- ಭಾರತದಲ್ಲೂ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗುತ್ತಾ?
ಯಾವ ರಾಜ್ಯದಲ್ಲಿ ಎಷ್ಟು ದೇಣಿಗೆ?
ದೆಹಲಿ – 989.20 ಕೋಟಿ ರೂ.
ಗುಜರಾತ್ – 404.51 ಕೋಟಿ ರೂ.
ಮಹಾರಾಷ್ಟ್ರ – 334.079 ಕೋಟಿ ರೂ.
ತಮಿಳುನಾಡು – 142.70 ಕೋಟಿ
ತೆಲಂಗಾಣ – 112.93 ಕೋಟಿ