-ತಪ್ಪು ಮಾಹಿತಿ ನೀಡಿದ್ದ ಅಧಿಕಾರಿಗೆ ಖಡಕ್ ವಾರ್ನಿಂಗ್
ಚಾಮರಾಜನಗರ: ಎಷ್ಟು ಹಣ ಬೇಕದರೂ ಖರ್ಚು ಮಾಡಿ. ಯಾವುದೇ ಕಾರಣಕ್ಕೂ ಜನರು ಗುಳೇ ಹೋಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಅವರು ಬರ ಪರಿಶೀಲನಾ ಸಭೆಯಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿನ ಕೊಳವೆಬಾವಿಗಳ ಬಗ್ಗೆ ಸರಿಯಾದ ಮಾಹಿತಿ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ರವಿಕುಮಾರ್ ಗೆ ದೇಶಪಾಂಡೆ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಭೆಯ ಮುಂಭಾಗಕ್ಕೆ ಕರೆಸಿ ಅಧಿಕಾರಿಗೆ ಸಚಿವರು ಕ್ಲಾಸ್ ತೆಗೆದುಕೊಂಡಿದ್ದಾರೆ. 4 ಸಾವಿರ ಕೊಳವೆ ಬಾವಿ ಇವೆ, 6 ಸಾವಿರ ಚಾಲ್ತಿಯಲ್ಲಿ ಇವೆ ಎಂದು ತಪ್ಪು ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದರು. ಹೀಗಾಗಿ ಬರದ ನಡುವೆ ನೀರಿಗಾಗಿ ಜನ ಪರಿತಪಿಸುತ್ತಿರುವಾಗ ತಪ್ಪು ಮಾಹಿತಿ ನೀಡಿದಕ್ಕೆ ಸಚಿವರು ಗರಂ ಆಗಿ ಅಧಿಕಾರಿಗೆ ಎಚ್ಚರಿಗೆ ನೀಡಿದರು.
Advertisement
Advertisement
ಯಾವುದೇ ಕಾರಣಕ್ಕೂ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಬಾರದು. ಎಷ್ಟು ಹಣ ಬೇಕದರೂ ಖರ್ಚು ಮಾಡಿ. ಯಾವುದೇ ಕಾರಣಕ್ಕೂ ಜನರು ಗುಳೇ ಹೋಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ದೇಶಪಾಂಡೆ ಅವರು ಸೂಚಿಸಿದರು.
Advertisement
ನಾವು ಕೇಳಿದರೆ ತುಂಬ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಹೇಳುತ್ತೀರಾ ಆದ್ರೆ ಕಂದಾಯ ಸಚಿವರ ಮುಂದೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತೀರಾ ಎಂದು ಹನೂರು ಶಾಸಕ ನರೇಂದ್ರ ಕೂಡ ಅಧಿಕಾರಿಯ ತರಾಟೆ ತೆಗೆದುಕೊಂಡರು.
Advertisement
ಅಷ್ಟೇ ಅಲ್ಲದೆ ಜುಲೈನಲ್ಲಿ ಮೋಡ ಬಿತ್ತನೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ರೈತರು ಸಂಕಷ್ಟದಲ್ಲಿ ಇದ್ದಾರೆ. ಮುಂದಿನ ತಿಂಗಳು ಮೋಡ ಬಿತ್ತನೆ ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ. ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಎರಡು ಕೇಂದ್ರಗಳನ್ನಾಗಿ ಮಾಡಲಾಗಿದೆ. ಟೆಕ್ನಿಕಲ್ ಟೀಮ್ ಎಲ್ಲಿ ಮೋಡ ಬಿತ್ತನೆ ಮಾಡಬೇಕೆಂದು ತೀರ್ಮಾನ ಮಾಡುತ್ತದೆ. ಚಾಮರಾಜನಗರದಲ್ಲೂ ಮೋಡ ಬಿತ್ತನೆ ಮಾಡಲು ಅವಕಾಶವಿದೆ. ಇದಕ್ಕೆ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]