ಟಾಲಿವುಡ್ ನಟ ಪವನ್ ಕಲ್ಯಾಣ್ (Pawan Kalyan) ಇದೀಗ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಪವನ್ ಕಲ್ಯಾಣ್, ಖಾದಿ ಬಿಟ್ಟು ಕಾವಿ ತೊಟ್ಟಿದ್ದಾರೆ. ವಾರಾಹಿ ಮಾತಾ ದೀಕ್ಷೆ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಜನಸೇನಾ ಪಕ್ಷದ ಶಾಸನಸಭೆಗೂ ಇದೇ ವೇಷದಲ್ಲಿ ಬಂದಿದ್ದಾರೆ. ಸದ್ಯ ಆ ಫೋಟೊಗಳು ವೈರಲ್ ಆಗುತ್ತಿದೆ. ಜೂನ್ 26ರಿಂದ ಪವನ್ ಕಲ್ಯಾಣ್ 11 ದಿನಗಳ ಕಾಲ ವಾರಾಹಿ ಮಾತಾ ದೀಕ್ಷೆ (Varahi Deeksha) ತೆಗೆದುಕೊಂಡಿದ್ದಾರೆ. ಹಾಗಾಗಿ ಅವರು ಕಾವಿ ಧರಿಸಿದ್ದಾರೆ ಎಂದು ಪಕ್ಷದ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.
ಈ ವೇಳೆ, ಹಣ್ಣು, ದ್ರವಾಹಾರವನ್ನು ಮಾತ್ರ ಸ್ವೀಕರಿಸುತ್ತಾರೆ. ವರ್ಷದ ಹಿಂದೆ ವಾರಾಹಿ ವಿಜಯಯಾತ್ರೆ ಮಾಡಿದ್ದರು. ವಾರಾಹಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು ಪವನ್ ಕಲ್ಯಾಣ್. ಇದನ್ನೂ ಓದಿ:ಅಕ್ಷಯ್ ಕುಮಾರ್ ಮನೆಗೆ ಭೇಟಿ- ಮದುವೆ ಆಮಂತ್ರಣ ನೀಡಿದ ಅನಂತ್ ಅಂಬಾನಿ
ಅಂದಹಾಗೆ, ಓಜಿ, ಹರಿಹರ ವೀರ ಮಲ್ಲು ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿವೆ. ಸದ್ಯ ಡಿಸಿಎಂ ಆಗಿರುವ ಪವನ್ ಕಲ್ಯಾಣ್ ಇದರ ನಡುವೆ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿ ಕೊಡಬೇಕಿದೆ.