ಬೆಂಗಳೂರು: ಮೋದಿ ಗ್ಯಾರಂಟಿಯಲ್ಲಿ ರಸವೇ ಇಲ್ಲ. ನಾವು ಗ್ಯಾರಂಟಿಗಳನ್ನು ಕೊಟ್ಟೆವು. ಕೊಟ್ಟ ಮಾತನ್ನು ಉಳಿಸಿಕೊಂಡೆವು. ಅವರು ಮಾತು ಕೊಟ್ಟಿದ್ದನ್ನು ಉಳಿಸಿಕೊಳ್ಳಲಿಲ್ಲ ಎಂದು ಬಿಜೆಪಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಟಾಂಗ್ ಕೊಟ್ಟರು.
ಲೋಕಸಭಾ ಚುನಾವಣೆ ಹಿನ್ನೆಲೆ ‘ಪಬ್ಲಿಕ್ ಟಿವಿ’ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮೋದಿ ಗ್ಯಾರಂಟಿಯಲ್ಲಿ ರಸವೇ ಇಲ್ಲ. ನಾವು ಗ್ಯಾರಂಟಿಗಳನ್ನು ಕೊಟ್ಟೆವು. ಈಗ ನಮ್ಮದು ಗೃಹಲಕ್ಷ್ಮಿ ಇದೆ. ಎಐಸಿಸಿ ‘ಮಹಾಲಕ್ಷ್ಮಿ’ ಯೋಜನೆ ಕೊಡುತ್ತೇವೆ ಎಂದಿದ್ದಾರೆ. ಯುವಕರ ಬದುಕಿಗೂ ಹಣ ಕೊಡುತ್ತಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಅವರು ಮಾತು ಕೊಟ್ಟಿದ್ದನ್ನು ಉಳಿಸಿಕೊಳ್ಳಲಿಲ್ಲ. ತೆಗೆಯಿರಿ ಅವರ ಪ್ರಣಾಳಿಕೆಯನ್ನು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಮೈತ್ರಿ ಮುನಿಸು – ಭಾನುವಾರ ಮೈಸೂರಿನಲ್ಲಿ ಪ್ರಜ್ವಲ್ ರೇವಣ್ಣ, ಪ್ರೀತಂಗೌಡ ಮುಖಾಮುಖಿ
Advertisement
Advertisement
ಈಗ ಜನ ಬಹಳ ವಿದ್ಯಾವಂತರು, ಬುದ್ದಿವಂತರಿದ್ದಾರೆ. ನಮ್ಮ ಪ್ರತಿಯೊಂದು ನಡೆಯನ್ನೂ ಗಮನಿಸುತ್ತಾರೆ. ಒಬ್ಬ ವ್ಯಕ್ತಿ, ಪಕ್ಷವನ್ನು ಬೆಂಬಲಿಸಿದರೆ ನನಗೇನು ಲಾಭ ಅಂತ ನೋಡ್ತಾರೆ. ಭಾವನೆ ಮೇಲಲ್ಲ, ಬದುಕಿನ ಮೇಲೆ ಪ್ರಯೋಜನ ಎಂಬುದು ಪ್ರತಿಯೊಬ್ಬರಿಗೂ ಅರ್ಥ ಆಗಿದೆ. ಇದು ಈ ತಲೆಮಾರಿನ ಒಂದು ಅಭಿಪ್ರಾಯ ಎಂದು ತಿಳಿಸಿದರು.
Advertisement
2023 ರ ವಿಧಾನಸಭಾ ಚುನಾವಣೆಯಲ್ಲಿ ಜನ ಡಬಲ್ ಎಂಜಿನ್ ಸರ್ಕಾರವನ್ನು ನಂಬಲಿಲ್ಲ. ಸಿದ್ದರಾಮಯ್ಯ ಮತ್ತು ನನ್ನನ್ನು ನಂಬಿದರು. 136 ಸೀಟ್ ಕೊಟ್ಟರು. ಇದರ ಮಧ್ಯದಲ್ಲಿ ನಾವು ಜನರ ನೋವನ್ನು ಅರ್ಥ ಮಾಡಿಕೊಂಡಿದ್ದೇವೆ. ಭಾರತ್ ಜೋಡೊ ಯಾತ್ರೆಯಲ್ಲಿ ಜನ ಅನೇಕ ಕಷ್ಟಗಳನ್ನು ಹೇಳಿಕೊಂಡಿದ್ದರು. ಜನರಿಗೆ ಹೊಟ್ಟೆ ಪಾಡಿಗೆ ಸಹಾಯ ಮಾಡಬೇಕು. ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಆಗಿದೆ. ಆದಾಯ ಡಬಲ್ ಮಾಡ್ತೀವಿ ಅಂತ ಮೋದಿ ಸಾಹೇಬ್ರು ಹೇಳಿದ್ದರು. 15 ಲಕ್ಷ ಕೊಡ್ತೀವಿ, ರೈತರಿಗೆ ಡಬಲ್ ಆದಾಯ ಅಂತ ಹೇಳಿ ಅದನ್ನೂ ಮಾಡಲಿಲ್ಲ. ಆದರೆ ನಾವು ಐದು ಗ್ಯಾರಂಟಿ ಕೊಟ್ಟೆವು. ಐದು ಗ್ಯಾರಂಟಿ ಸೇರಿ ‘ಕೈ’ ಗಟ್ಟಿಯಾಯಿತು. ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ ಎಲ್ಲಾ ಗ್ಯಾರಂಟಿ ಜನರಿಗೆ ತಲುಪುವಂತೆ ಮಾಡಿದ್ದೇವೆ. ಇದಕ್ಕಿಂತ ಸಂತೃಪ್ತಿ ಇನ್ನೇನು ಬೇಕು ಎಂದು ಕೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಅಸಾಧ್ಯ: ಹೆಚ್.ಡಿ.ದೇವೇಗೌಡ
Advertisement
ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ 135 ಸೀಟ್ ಬರುತ್ತೆ ಎಂದಿದ್ದಿರಿ.. ಈಗ ಎಷ್ಟು ಸೀಟು ಬರುತ್ತೆ?
ಈಗ ಒಂದು ರೌಂಡ್ ನಾಮಪತ್ರ ಸಲ್ಲಿಕೆ ಆಗಿದೆ. ಎರಡನೇ ರೌಂಡ್ ಆಗಿ, ಪ್ರಚಾರ ಶುರುವಾಗಲಿ. ಆಮೇಲೆ ಹೇಳುತ್ತೇನೆ. ಮೋದಿ ಗಾಳಿ, ರಾಮಮಂದಿರ ಗಾಳಿ ಅಂತ ಮಾತನಾಡಿಕೊಳ್ಳುತ್ತಿದ್ದರು. ಅಕ್ಕಿ ಒಂದು ಕಡೆ ಅರಿಶಿನ ಒಂದು ಕಡೆ ಇತ್ತು. ಅವೆರಡು ಸೇರಿ ಆದ ಮಂತ್ರಾಕ್ಷತೆ ತಲುಪಲೇ ಇಲ್ಲ. ಗಂಡು ಹೆಣ್ಣಿಗೆ ತಾಳಿ ಕಟ್ಟುವಾಗ ಮಂತ್ರಾಕ್ಷತೆ ಹಾಕ್ತಾರೆ. ಆದರೆ ಇವರು ಮೂರು ತಿಂಗಳ ಮುಂಚಿತವಾಗಿ ಅನ್ನಭಾಗ್ಯದಿಂದ ಕೊಟ್ಟ ಅಕ್ಕಿಗೆ ಅರಿಶಿನ ಹಾಕಿ ಮಂತ್ರಾಕ್ಷತೆ ಅಂದರು. ಅದು ಮುಟ್ಟಲಿಲ್ಲ. ಎಲ್ಲಿಯೂ ಆ ದೇವಸ್ಥಾನದ (ರಾಮಮಂದಿರ) ಗಾಳಿ ಕಾಣುತ್ತಿಲ್ಲ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.