ಚಿತ್ರದುರ್ಗ| ಪತಿ ಸಾವಿನಿಂದ ಖಿನ್ನತೆ – ತಾಯಿ, ಮಗಳು ನೇಣಿಗೆ ಶರಣು

Public TV
1 Min Read
Chitradurga Mother Daughter Suicide

ಚಿತ್ರದುರ್ಗ: ಪತಿಯ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ತಾಯಿ ಹಾಗೂ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ (Holalkere) ತಾಲೂಕಿನ ಚಿಕ್ಕಂದವಾಡಿ ಗ್ರಾಮದಲ್ಲಿ ನಡೆದಿದೆ.

ತಾಯಿ ಗೀತಾ (45), ಮಗಳು ಲಾವಣ್ಯ(17) ವಾರದ ಹಿಂದೆಯೇ ಆತ್ಮಹತ್ಯೆಗೆ ಶರಣಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಂದು (ಮಂಗಳವಾರ) ತಾಯಿ, ಮಗಳು ಆತ್ಮಹತ್ಯೆಗೆ ಶರಣಾಗಿದ್ದು ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಅಮ್ಮ, ಮಗಳ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಆಫ್ರಿಕಾ ವಿರುದ್ಧ ಸರಣಿ ಗೆದ್ದ ಬಳಿಕ ಪತ್ನಿಯೊಂದಿಗೆ ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸೂರ್ಯಕುಮಾರ್‌ ಭೇಟಿ

6 ತಿಂಗಳ ಹಿಂದಷ್ಟೇ ಗೀತಾ ಪತಿ ಬಸವರಾಜ ಹೃದಾಯಾಘಾತದಿಂದ ಮೃತಪಟ್ಟಿದ್ದರು. ಪತಿ ಬಸವರಾಜ ಸಾವಿನಿಂದ ಪತ್ನಿ ಹಾಗೂ ಪುತ್ರಿ ಬಹಳಷ್ಟು ನೊಂದಿದದ್ದರು. ಖಿನ್ನತೆಗೆ ಒಳಗಾಗಿ ನೇಣು ಬಿಗಿದುಕೊಂಡು ತಾಯಿ, ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕಜಾಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಯು.ಟಿ.ಪಿ ಕಾಲುವೆ ಒಡೆದು 1 ತಿಂಗಳಾದ್ರೂ ದುರಸ್ತಿ ಮಾಡದ ಅಧಿಕಾರಿಗಳು- ಕಂಗಾಲಾದ ರೈತರು

Share This Article