ಬೆಂಗಳೂರು: ಸಾರಿಗೆ ಜನರ ಸಂಪರ್ಕ ಕೊಂಡಿ. ಅದರಲ್ಲೂ ಜನ ಸಾಮಾನ್ಯರ ಪ್ರಮುಖ ಸಾರಿಗೆ ಎಂದರೆ ಸರ್ಕಾರಿ ಬಸ್ಸುಗಳು. ಹೀಗಾಗಿ ರಾಜ್ಯದ ಬಸ್ ಇತಿಹಾಸದ ಕುರಿತು ವಸ್ತು ಸಂಗ್ರಹಾಲಯ ನಿರ್ಮಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆಯ ಇತಿಹಾಸ ಸಾರುವ ಅತ್ಯಾಕರ್ಷಕ ವಸ್ತು ಸಂಗ್ರಹಾಲಯವನ್ನು ಸಾರಿಗೆ ಇಲಾಖೆಯಿಂದ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಶೀಘ್ರದಲ್ಲೇ ನಿರ್ಮಾಣ ಮಾಡಲು ಮುಂದಾಗಿದೆ.
Advertisement
Advertisement
ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್) ಅರ್ಧ ಶತಮಾನ ಪೂರೈಸಿದ ಸವಿ ನೆನಪಿಗಾಗಿ ಈ ವಸ್ತು ಸಂಗ್ರಹಾಲಯ ಸ್ಥಾಪಿಸಲಾಗಿತ್ತಿದ್ದು, ಕೆಸ್ಆರ್ಟಿಸಿ ಬಸ್ಸುಗಳು ಯಾವಾಗ ರಸ್ತೆಗಳಿದವು, ವಾಯುವ್ಯ, ಈಶಾನ್ಯ, ನೈಋತ್ಯ ಸೇರಿದಂತೆ ಇತರೆ ವಿಭಾಗಗಳು ಹೇಗೆ ರೂಪುಗೊಂಡವು? ಈ ಸಂಸ್ಥೆಗಳ ಉಗಮಕ್ಕೂ ಮುನ್ನ, ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಹೇಗಿತ್ತು ಎಂಬುದರ ಕುರಿತು ಬಹುತೇಕರಿಗೆ ತಿಳಿದಿಲ್ಲ. ತಿಳಿದುಕೊಳ್ಳೋಣ ಅಂದುಕೊಂಡರೂ, ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ಯಾವುದೇ ಕೋಶ ಇಲ್ಲ. ಹೀಗಾಗಿ ವಸ್ತು ಸಂಗ್ರಹಾಲಯ ನಿರ್ಮಿಸಲು ಸಾರಿಗೆ ಇಲಾಖೆ ಚಿಂತಿಸಿದೆ.
Advertisement
ದೇಶದಲ್ಲಿ ರೈಲ್ವೆ ಮ್ಯೂಸಿಯಂ ಇದೆ. ಆದರೆ ಬಸ್ ಸಾರಿಗೆ ವ್ಯವಸ್ಥೆಯ ಇತಿಹಾಸ ಹೇಳುವ ಮ್ಯೂಸಿಯಂ ಎಲ್ಲೂ ಇಲ್ಲ. ಈ ಕೊರತೆಯನ್ನು ನೀಗಿಸಲು ಮೊದಲ ಬಾರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಈ ಪ್ರಯತ್ನಕ್ಕೆ ಕೈ ಹಾಕಿದೆ.
Advertisement
ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್) ಅರ್ಧ ಶತಮಾನ ಪೂರೈಸಿದ ಸವಿ ನೆನಪಿಗಾಗಿ, ಸುಮಾರು 3 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ವಸ್ತು ಸಂಗ್ರಹಾಲಯ ಜನ್ಮ ತಾಳಲಿದೆ. ಮ್ಯೂಸಿಯಂ ನಿರ್ಮಿಸಲು ಅನಾವಶ್ಯಕವಾಗಿ ದುಡ್ಡು ವೆಚ್ಚ ಮಾಡುತ್ತಿಲ್ಲ. ಬದಲಾಗಿ ಹಳೆಯ ಹಾಗೂ ಗುಜರಿ ಬಸ್ಗಳೇ, ಮ್ಯೂಸಿಯಂ ಆಗಿ ಪರಿವರ್ತನೆಗೊಂಡು, ಸಾರಿಗೆ ಇತಿಹಾಸ ಸಾರಲಿವೆ. ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಸಿಕೊಂಡು, ವಿಶೇಷ ವಿನ್ಯಾಸದ ವಸ್ತು ಸಂಗ್ರಹಾಲಯ ನಿರ್ಮಿಸಲು ನಿರ್ಧರಿಸಲಾಗಿದೆ. ಹಳೇ ಬಸ್ ಗಳಿಗೆ ಆಕರ್ಷಕ ರೂಪ ಕೊಟ್ಟು ಮ್ಯೂಸಿಯಂ ನಿರ್ಮಿಸಲು, ಅನೇಕ ವಿನ್ಯಾಸಕರು ಮುಂದೆ ಬಂದಿದ್ದಾರೆ. ಮೆಜೆಸ್ಟಿಕ್ನಲ್ಲಿನ ಒಟ್ಟು 5 ಹಳೆಯ ಬಸ್ಸುಗಳು ಮ್ಯೂಸಿಯಂ ರೂಪ ತಾಳಲಿವೆ.