ಭೋಪಾಲ್: ಪೋಷಕರು ಸ್ಮಾರ್ಟ್ ಫೋನ್ ಖರೀದಿ ಮಾಡಲು ಹಣ ನೀಡದ್ದಕ್ಕೆ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಭೋಪಾಲ್ ಅಶೋಕ್ ಗಾರ್ಡನ್ ನಲ್ಲಿ ನಡೆದಿದೆ.
ಮುಜಾಮಿಲ್ ಅನ್ಸಾರಿ(11) ನೇಣಿಗೆ ಶರಣಾದ ಬಾಲಕ. ಮನೆಯಲ್ಲಿ ನೇಣು ಹಾಕಿಕೊಂಡಿದ್ದ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆ ತಲುಪುತ್ತಿದ್ದಂತೆ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement
ಮೃತ ಬಾಲಕನ ತಂದೆ ಪಾನ್ ಶಾಪ್ ನಡೆಸುತ್ತಿದ್ದು, ಮುಜಾಮಿಲ್ ಹಾಗೂ ಆತನ ಸಹೋದರ ಸೋಯಿ ನಗರದ ಚಿಕ್ಕಪ್ಪನ ಮನೆಯಲ್ಲಿದ್ದು ಶಾಲೆಗೆ ಹೋಗುತ್ತಿದ್ದರು. ರಮ್ಜಾನ್ ನಿಮಿತ್ತ ಭೋಪಾಲ್‍ಗೆ ಬಂದಿದ್ದು, ಮುಜಾಮಿಲ್ ತಂದೆಗೆ ಸ್ಮಾರ್ಟ್ ಫೋನ್ ಕೊಡಿಸುವಂತೆ ಒತ್ತಾಯಿಸಿದ್ದಾನೆ. ಆದರೆ ಅವರು ಫೋನ್ ಬಳಕೆಯಿಂದ ಮಕ್ಕಳು ಹಾಳಾಗುತ್ತಾರೆ ಎಂದು ಹೇಳಿ ಬಟ್ಟೆ ಕೊಂಡುಕೊಳ್ಳಲು 1,500 ರೂ. ನೀಡಿದ್ದಾರೆ.
Advertisement
ಬಾಲಕ ಮುಜಾಮಿಲ್ ಶುಕ್ರವಾರ ಬೆಳಗ್ಗೆ ಬೇಗ ಎದ್ದು ನಮಾಜ್ ಮಾಡಿ, ಆಟವಾಡಲು ಹೋಗಿದ್ದನು. ಮರಳಿ ಮನೆಗೆ ಬಂದು ಮೇಲಿನ ರೂಮ್‍ನಲ್ಲಿ ಮಲಗಿದ್ದಾನೆ ಎಂದು ತಾಯಿ ತಿಳಿದಿದ್ದರು. ಆದರೆ ಅವರು ಸಂಜೆ 6.30 ಗಂಟೆಗೆ ರೂಮ್‍ಗೆ ಹೋಗಿ ನೋಡುತ್ತಿದ್ದಂತೆ ಬಾಲಕ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ. ತಕ್ಷಣವೇ ಪತಿಗೆ ಫೋನ್ ಮಾಡಿ ಕರೆಸಿಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲೇ ಬಾಲಕ ಮೃತಪಟ್ಟಿದ್ದಾನೆ.
Advertisement
ಬಾಲಕನ ಕೊಠಡಿಯಲ್ಲಿ ಯಾವುದೇ ಡೆತ್ ನೋಟ್ ದೊರೆತಿಲ್ಲ. ಬಾಲಕ ಹಠದಿಂದ ಕೂಡಿದ ಮನಸ್ಥಿತಿಯನ್ನು ಹೊಂದಿದ್ದ ಎಂದು ನೆರೆಹೊರೆ ಮನೆಯವರು ತಿಳಿಸಿದ್ದಾರೆ ಪೊಲೀಸರು ತಿಳಿಸಿದ್ದಾರೆ.