Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Karnataka

ಚುನಾವಣಾ ವ್ಯವಸ್ಥೆ ಬದಲಾಗದಿದ್ರೆ ಪ್ರಜಾಪ್ರಭುತ್ವ ದುರ್ಬಲವಾಗುತ್ತೆ: ಸಿದ್ದರಾಮಯ್ಯ

Public TV
Last updated: March 30, 2022 7:58 pm
Public TV
Share
5 Min Read
Siddaramaiah
SHARE

ಬೆಂಗಳೂರು: ಚುನಾವಣಾ ವ್ಯವಸ್ಥೆ ಬದಲಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಇದರ ಸುಧಾರಣೆಯಾಗದೆ ಹೋದರೆ ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಚುನಾವಣಾ ಸುಧಾರಣೆಗಳ ಬಗ್ಗೆ ಇಂದಿನ ಅಧಿವೇಶನದಲ್ಲಿ ಮಾತನಾಡಿ ಅವರು, ಪ್ರಜಾಪ್ರಭುತ್ವ ದುರ್ಬಲವಾದರೆ ಸಮಾಜ, ದೇಶ ದುರ್ಬಲವಾಗುತ್ತದೆ. ಎಪ್ಪತ್ತರ ದಶಕದಿಂದ ಈಚೆಗೆ ಚುನಾವಣಾ ವ್ಯವಸ್ಥೆ ಕೆಡಲು ಆರಂಭವಾಯಿತು ಎಂದು ಸಭಾದ್ಯಕ್ಷರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದ್ದಾರೆ. ಚುನಾವಣಾ ವ್ಯವಸ್ಥೆ ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಬಲಿಷ್ಠವಾಗುತ್ತಾ ಹೋಗಬೇಕಿತ್ತು. ಆದರೆ ನಮ್ಮಲ್ಲಿ ದುರ್ಬಲವಾಗುತ್ತಾ ಹೋಗುತ್ತಿದೆ ಎಂಬ ಒಟ್ಟು ಅಭಿಪ್ರಾಯ ಸದನದಲ್ಲಿ ವ್ಯಕ್ತವಾಗಿದೆ. ಇದು ಅತ್ಯಂತ ಕಳವಳದ ಸಂಗತಿಯಾಗಿದೆ ಎಂದರು. ಇದನ್ನೂ ಓದಿ: ದಲಿತರು, ಸವರ್ಣೀಯರ ಮಧ್ಯೆ ವಿವಾದ ಸೃಷ್ಟಿಸಲು ಕುಮಾರಸ್ವಾಮಿ ಯತ್ನ: ಆಂದೋಲಾ ಶ್ರೀ ಕಿಡಿ

kolkata vote

1971ರಿಂದ ನಾನು ರಾಜಕೀಯದಲ್ಲಿ ಭಾಗವಹಿಸಲು ಆರಂಭಿಸಿದೆ. ಆ ಸಂದರ್ಭದಲ್ಲಿ ನಾನು ಕಾನೂನು ಕಾಲೇಜಿನಲ್ಲಿ ಓದುತ್ತಿದ್ದೆ ಮತ್ತು ವಿದ್ಯಾರ್ಥಿ ಸಂಘಟನೆಯ ಮುಖಂಡನಾಗಿದ್ದೆ. ಆಗಿನ ಸಂಸತ್ ಚುನಾವಣೆಯಲ್ಲಿ ಹುಣಸೂರಿನ ಡಾ. ಹೆಚ್.ಎಲ್.ತಿಮ್ಮೇಗೌಡರ ಸಂಸ್ಥಾ ಕಾಂಗ್ರೆನ್‌ನಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ನಾನು ಆ ವೇಳೆಗೆ ಸಮಾಜವಾದಿ ಪಕ್ಷದ ಸದಸ್ಯನೂ ಆಗಿದ್ದೆ. ಸಮಾಜವಾದಿ ಪಕ್ಷದ ಅಭ್ಯರ್ಥಿ ಇಲ್ಲದಿರುವುದರಿಂದ ಸಂಸ್ಥಾ ಕಾಂಗ್ರೆಸ್ ಅನ್ನು ಬೆಂಬಲಿಸಿ ಎಂದು ಪ್ರೊ.ನಂಜುಂಡಸ್ವಾಮಿ ಅವರು ನಮಗೆ ಹೇಳಿದ್ದರು. ಹಾಗಾಗಿ ನಾನು ನಮ್ಮೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರಚಾರಕ್ಕೆ ಹೋಗಿದ್ದೆ ಎಂದು ನೆನಪಿಸಿಕೊಂಡರು.

ಎಪ್ಪತ್ತರ ದಶಕದಲ್ಲಿ ಹಳ್ಳಿಗಳಲ್ಲಿ ಒಬ್ಬರು, ಇಬ್ಬರು ಮುಖಂಡರು ಇರುತ್ತಿದ್ದರು. ನಾವು ಅವರ ಬಳಿ ಹೋಗಿ ಹಳ್ಳಿಯ ಜನರ ಮತ ನಮಗೆ ಹಾಕಿಸಿ ಎಂದು ಕೇಳುತ್ತಿದ್ದೆವು. ಆ ಮುಖಂಡ ನಮಗೆ ಒಂದು ಸಲ ಮಾತು ಕೊಟ್ಟರೆ ಅಥವಾ ವೀಳ್ಯದೆಲೆ ನೀಡಿದರೆ ಆಮೇಲೆ ಯಾರೇ ಬಂದು ಆಸೆ, ಆಮಿಷ ಒಡ್ಡಿದರೂ ಅವರು ಬದಲಾಗುತ್ತಿರಲಿಲ್ಲ. 1972 ರ ಚುನಾವಣೆಯಲ್ಲಿ ರಾಜಶೇಖರ ಮೂರ್ತಿಯವರು ಸ್ಪರ್ಧೆ ಮಾಡಿದ್ದರು. ಆಗಲೂ ಪ್ರಚಾರ ಮಾಡಿದ್ದೆ. ಅಂದಿನ ಚುನಾವಣಾ ವ್ಯವಸ್ಥೆಗೂ ಇಂದಿನ ಚುನಾವಣಾ ವ್ಯವಸ್ಥೆಗೂ ಬಹಳಷ್ಟು ಬದಲಾಗಣೆ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಂ ಶಿಲ್ಪಿಗಳನ್ನು ಯಾವಾಗ ಬಹಿಷ್ಕರಿಸುತ್ತೀರಿ: ಹೆಚ್‌ಡಿಕೆ ಪ್ರಶ್ನೆ

evm ballot

1978 ರಲ್ಲಿ ತಾಲೂಕು ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೆ. ನಾನು ಮತ್ತು ನನ್ನ ಸ್ನೇಹಿತ ವೈ.ಮಹೇಶ್ ಇಬ್ಬರು ಕರಪತ್ರವನ್ನು ಸಿದ್ಧಪಡಿಸಿಕೊಂಡು, ಒಂದೇ ಒಂದು ಸ್ಕೂಟರ್‌ನಲ್ಲಿ ಊರೂರಿಗೆ ಹಂಚಿ ಬಂದಿದ್ದೆವು. ಆಗಿನ ಒಟ್ಟು ಖರ್ಚು 3,500 ರೂಪಾಯಿ. 1983 ರಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾಗ ಜಾರ್ಜ್ ಫರ್ನಾಂಡಿಸ್ ಅವರು 10,000 ರೂಪಾಯಿ ನನಗೆ ಕೊಟ್ಟಿದ್ದರು. ನಮ್ಮೂರ ಜನ 10,000 ರೂಪಾಯಿ ಸಂಗ್ರಹಿಸಿ ಕೊಟ್ಟಿದ್ದರು. ಹಳ್ಳಿಗಳಿಗೆ ಪ್ರಚಾರಕ್ಕೆ ಹೋದಾಗ ಜನ ದುಡ್ಡು ಕೊಡೋರು. ಆ ಚುನಾವಣೆಯಲ್ಲಿ ಒಟ್ಟು ಖರ್ಚಾದ ಹಣ 63,000 ರೂಪಾಯಿ ಎಂದು ಹೇಳಿದರು.

ಚುನಾವಣಾ ಆಯೋಗ 40 ಲಕ್ಷ ರೂಪಾಯಿ ವಿಧಾನಸಭೆ ಚುನಾವಣೆಗೆ, 95 ಲಕ್ಷ ರೂಪಾಯಿ ಲೋಕಸಭಾ ಚುನಾವಣೆಗೆ ಖರ್ಚು ಮಾಡಬೇಕು ಎಂದು ನಿಗದಿ ಮಾಡಿದೆ. ಆದರೆ ಚುನಾವಣಾ ಆಯೋಗಕ್ಕೆ ನೀಡುವುದು ರಾಮನ ಲೆಕ್ಕ, ಇದನ್ನು ಬಿಟ್ಟು ಇನ್ನೊಂದು ಕೃಷ್ಣನ ಲೆಕ್ಕವೂ ಇರುತ್ತೆ. ಇಂದಿನ ಚುನಾವಣಾ ವ್ಯವಸ್ಥೆ ಹಾಳಾಗಲು ನಮ್ಮ ಪಾಲು ಎಷ್ಟಿದೆಯೂ ಅಷ್ಟೇ ಪ್ರಜಾಪ್ರಭುತ್ವದ ಉಳಿದ ಅಂಗಗಳ ಪಾಲೂ ಇದೆ. ಸಮಾಜದ ಎಲ್ಲಾ ಶಿಕ್ಷಿತ, ವಿಚಾರವಂತ, ಪ್ರಗತಿಪರ, ಸಾಮಾಜಿಕ ಕಾಳಜಿ ಇರುವ ಜನರ ಜೊತೆಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸುಧಾರಣೆ ಸಾಧ್ಯ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: 40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ

VIDHANASAUDHA

ಇಂದು ರಾಜಕೀಯ ಪಕ್ಷಗಳು ಮತ್ತು ಕಾರ್ಪೊರೇಟ್ ಬಾಡಿಗಳ ಮೈತ್ರಿ ಆರಂಭವಾಗಿದೆ. ಇದರಿಂದ ಕಾರ್ಪೊರೇಟ್ ಬಾಡಿಗಳು ಸರ್ಕಾರವನ್ನು ನಿಯಂತ್ರಿಸುವಷ್ಟು ಪ್ರಬಲವಾಗಿವೆ. 2013ರಲ್ಲಿ ದೇಶದ ಕೆಲವೇ ಕೆಲವು 142 ಕಾರ್ಪೊರೇಟ್ ಸಂಸ್ಥೆಗಳ‌ ಆಸ್ತಿ 23 ಲಕ್ಷ ಕೋಟಿ ರೂಪಾಯಿ ಇತ್ತು, ಈಗ ಅದು 54 ಲಕ್ಷ ಕೋಟಿಗೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಕಾರ್ಪೊರೇಟ್ ಕಂಪನಿಗಳೊಂದಿಗೆ ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಳ್ಳಬಾರದು ಎಂದು ಹೇಳಿದ್ದು ಎಂದು ಮಾತನಾಡಿದರು.

ದೇಶದಲ್ಲಿ ಸುಮಾರು 19 ಲಕ್ಷ ಇವಿಎಂ ಗಳು ನಾಪತ್ತೆಯಾಗಿವೆ ಎಂಬ ವರದಿಯನ್ನು ಹೆಚ್.ಕೆ.ಪಾಟೀಲರು ಓದಿ ಹೇಳಿದರು. ಇದಕ್ಕೆ ಹೊಣೆ ಯಾರು? ಇದೇ ಕಾರಣಕ್ಕೆ ಜನರಿಗೆ ಇವಿಎಂಗಳ ಮೇಲೆ ಭರವಸೆ ಕಡಿಮೆಯಾಗುತ್ತಿದೆ. ನನ್ನ ಬಳಿ ಒಬ್ಬ ತಂತ್ರಜ್ಞ ಬಂದು ಇವಿಎಂಗಳನ್ನು ಹೇಗೆ ದುರ್ಬಳಕೆ ಮಾಡಲು ಸಾಧ್ಯ ಎಂದು ಕಣ್ಣೆದುರೇ ಡೆಮೋ ತೋರಿಸಿದ. ತಂತ್ರಜ್ಞಾನದಲ್ಲಿ ನನಗೆ ಹೆಚ್ಚು ಮಾಹಿತಿ ಇಲ್ಲದಿರುವುದರಿಂದ ಸರಿ ಬಿಡಪ್ಪಾ ಅಂತ ಹೇಳಿ ಕಳುಹಿಸಿದೆ. ಆದರೆ ಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲು ಒಂದು ಅವಕಾಶ ಇದ್ದೇ ಇರುತ್ತದೆ ಎಂಬುದು ಸತ್ಯ. ಅದಕ್ಕೆ ಜರ್ಮನಿಯಂತಾ ಮುಂದುವರಿದ ರಾಷ್ಟ್ರ ಕೂಡ ಇವಿಎಂ ಬಿಟ್ಟು ಬ್ಯಾಲೆಟ್ ಪೇಪರ್ ಗೆ ಮರಳಿದೆ. ಗ್ರಾಮ ಪಂಚಾಯತಿ ಚುನಾವಣೆಗಳು ಪಕ್ಷದ ಚಿಹ್ನೆಯ ಮೇಲೆ ನಡೆಯಲ್ಲ ಅಂದಮೇಲೆ ಚುನಾವಣಾ ನೀತಿ ಸಂಹಿತೆ ಜಾರಿ ಮಾಡುವ ಅಗತ್ಯ ಏನಿದೆ? ಚುನಾವಣೆಯಲ್ಲಿ ವಿಳಂಬವಾದಷ್ಟೂ ಭ್ರಷ್ಟಾಚಾರ ಹೆಚ್ಚಾಗುತ್ತದೆ ಎಂಬುದು ನನ್ನ ಅನಿಸಿಕೆ ಎಂದರು. ಇದನ್ನೂ ಓದಿ: ಹಲೋ ಕಂದಾಯ ಸಚಿವರೇ ಅಂದ್ರೆ ಮನೆ ಬಾಗಿಲಿಗೆ ಬರಲಿದೆ ಮಾಶಾಸನ: ಆರ್. ಅಶೋಕ್

SIDDARAMAIAH

ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯೋಗದ ಆದ್ಯಕ್ಷರ ನೇಮಕವನ್ನು ಸರ್ಕಾರದ ಶಿಫಾರಸಿನ ಮೇಲೆ ರಾಜ್ಯಪಾಲರು, ರಾಷ್ಟ್ರಪತಿಗಳು ಮಾಡುವ ಬದಲು ಪ್ರಧಾನಿಗಳು, ವಿರೋಧ ಪಕ್ಷದ ನಾಯಕರು, ಮೇಲ್ಮನೆಯ ವಿರೋಧ ಪಕ್ಷದ ನಾಯಕ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಒಳಗೊಂಡ ಒಂದು ಮಂಡಳಿ ರಚನೆಯಾಗಬೇಕು. ಅವರ ಮೂಲಕ ಅಧ್ಯಕ್ಷರು ಮತ್ತು ಆಯುಕ್ತರ ನೇಮಕವಾಗಬೇಕು. ಸುಧಾರಣೆಗಳು ಹೀಗೆ ಆರಂಭವಾದಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಒಂದು ದೇಶ, ಒಂದು ಚುನಾವಣೆ ಎಂಬುದು ಭಾರತದಂತ ಒಕ್ಕೂಟ ವ್ಯವಸ್ಥೆಯ ದೇಶದಲ್ಲಿ ಪ್ರಾಯೋಗಿಕವಾಗಿ ಅಸಾಧ್ಯವಾದ ಮಾತು. ಇದಕ್ಕೆ ನೂರಾರು ಕಾರಣಗಳನ್ನು ಕೊಡಬಹುದು. ಸ್ವಾತಂತ್ರ್ಯ ಬಂದಾಗ ದೇಶದ ಸಾಕ್ಷರತೆ ಪ್ರಮಾಣ ಶೇ.16 ಇದ್ದದ್ದು, ಈಗ ಶೇ.82 ಆಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಇಷ್ಟು ಬದಲಾವಣೆ ಆದರೂ ಇಂದಿನ ಚುನಾವಣೆಯನ್ನು ಜಾತಿ, ಹಣ ಬಲ, ತೋಳ್ಬಲ ಮತ್ತು ಮಾಫಿಯಾಗಳು ನಿಯಂತ್ರಿಸುತ್ತಿವೆ. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ನಾಯಕರು ಆತ್ಮಾವಲೋಕನ ಮಾಡಿಕೊಂಡು, ಸ್ವಯಂ ಶುದ್ದೀಕರಣ ಮಾಡದೆ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವು ಕಷ್ಟವಾಗುತ್ತದೆ. ಪ್ರಾಮಾಣಿಕ ಜನಪರ ಕಾಳಜಿ ಇರುವ, ಆರ್ಥಿಕವಾಗಿ ದುರ್ಬಲರಾದ ನಿಷ್ಠಾವಂತ ಜನರು ರಾಜಕೀಯದಿಂದ ದೂರ ಹೋಗದಂತೆ ತಡೆಯಬೇಕು ಎಂಬ ಕಾರಣಕ್ಕೆ ರಾಜಕೀಯ ವ್ಯವಸ್ಥೆಯ ಬದಲಾವಣೆಯನ್ನು ಮಾಡಲೇಬೇಕಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಇಸ್ಪೀಟ್ ಆಡೋರಿಗೆ ಪೊಲೀಸರು ತೊಂದರೆ ಕೊಡದಂತೆ ಆದೇಶಿಸಿ: ಹೆಚ್‌ಡಿಕೆ ಮನವಿ

TAGGED:bengaluruelection systemsiddaramaiahಚುನಾವಣೆ ವ್ಯವಸ್ಥೆಬೆಂಗಳೂರುಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema Updates

Rakesh Poojary Anchor Anushree
ತಮಾಷೆಗೂ ಯಾರ ಮನಸ್ಸನ್ನೂ ನೋಯಿಸದ ಹುಡುಗ ರಾಕೇಶ್: ಅನುಶ್ರೀ
5 hours ago
Rakesh Poojari 1
ಉಡುಪಿಯಲ್ಲಿ ನೆರವೇರಿದ ರಾಕೇಶ್ ಪೂಜಾರಿ ಅಂತ್ಯಕ್ರಿಯೆ
7 hours ago
jr ntr
ಲಂಡನ್‌ನಲ್ಲಿ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್- ಜ್ಯೂ.ಎನ್‌ಟಿಆರ್ ಆಕ್ರೋಶ
10 hours ago
Chandanavana Film Critics
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ ಪ್ರದಾನ: ಯಾರಿಗೆ ಯಾವ ಪ್ರಶಸ್ತಿ?
11 hours ago

You Might Also Like

Tumakuru Yodha
Crime

ರಜೆಯಲ್ಲಿದ್ದ ಯೋಧ ಮರಳಿ ಗಡಿಯತ್ತ – ಬೀಳ್ಕೊಟ್ಟ ಗುಬ್ಬಿ ನಾಗರಿಕರು

Public TV
By Public TV
3 hours ago
IPL 2025 2
Cricket

ಮೇ 17 ರಿಂದ ಮತ್ತೆ ಐಪಿಎಲ್‌ ಆರಂಭ

Public TV
By Public TV
3 hours ago
Madikeri Death
Crime

Madikeri | ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನೀರುಪಾಲು

Public TV
By Public TV
3 hours ago
ಸಾಂದರ್ಭಿಕ ಚಿತ್ರ
Latest

ಎರಡೂ ಕಡೆಯಿಂದ ಒಂದೇ ಒಂದು ಗುಂಡು ಹೊಡೆಯಬಾರದು: DGMO ಸಭೆಯಲ್ಲಿ ಏನಾಯ್ತು?

Public TV
By Public TV
4 hours ago
Sachin Thendulkar
Cricket

ಆಪರೇಷನ್ ಸಿಂಧೂರ | ಪ್ರಧಾನಿ ಹಾಗೂ ರಕ್ಷಣಾ ತಂಡಗಳನ್ನು ಶ್ಲಾಘಿಸಿದ – ತೆಂಡೂಲ್ಕರ್

Public TV
By Public TV
4 hours ago
Pakistan Drone Attack
Latest

ಮೋದಿ ಭಾಷಣದ ಬೆನ್ನಲ್ಲೇ ಮತ್ತೆ ಪಾಕ್ ಡ್ರೋನ್ ದಾಳಿ

Public TV
By Public TV
4 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Welcome Back!

Sign in to your account

Username or Email Address
Password

Lost your password?