ಕಲಬುರಗಿ: ರಾಜ್ಯದಲ್ಲಿ ದಲಿತರ ಮತ್ತು ಸವರ್ಣೀಯರ ಮಧ್ಯೆ ದೊಡ್ಡ ವಿವಾದ ಸೃಷ್ಟಿಸಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ ಎಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಹಾಗೂ ಕರುಣೇಶ್ವರ ಮಠದ ಆಂದೋಲಾ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಕಿಡಿಕಾರಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಎಷ್ಟು ಜನ ದಲಿತ ಮತ್ತು ಹಿಂದೂಳಿದ ವರ್ಗದವರನ್ನು ನಿಮ್ಮ ಮನೆಗೆ ಮತ್ತು ದೇವರ ಕೋಣೆಗೆ ಕರೆಸಿಕೊಂಡಿದ್ದಿರಿ? ಬಹಿರಂಗಪಡಿಸಿ ಎಂದು ಸವಾಲೆಸೆದರು. ಸರ್ಕಾರವನ್ನು ಟೀಕಿಸುವ ಭರದಲ್ಲಿ ಮಠ-ಮಾನ್ಯಗಳನ್ನು ಎಳೆದು ತಂದು ವಿವಾದ ಸೃಷ್ಟಿ ಮಾಡುತ್ತಿದ್ದಿರಿ ಇದು ಸರಿಯಲ್ಲ ಎಂದರು. ಇದನ್ನೂ ಓದಿ: ಮುಸ್ಲಿಂ ಶಿಲ್ಪಿಗಳನ್ನು ಯಾವಾಗ ಬಹಿಷ್ಕರಿಸುತ್ತೀರಿ: ಹೆಚ್‌ಡಿಕೆ ಪ್ರಶ್ನೆ
ನೀವು ನಿಮ್ಮ ಮನೆಗಳನ್ನು ಮತ್ತು ರೆಸಾರ್ಟ್‍ಗಳನ್ನು ದಲಿತರಿಂದ ಕಟ್ಟಿಸಿಕೊಂಡಿದ್ದಿರಿ. ದೇವಸ್ಥಾನ ನಾವು ಕಟ್ಟಿದ್ದೇವೆ ಎಂದು ದಲಿತರು ದೇವಸ್ಥಾನಕ್ಕೆ ಪ್ರವೇಶ ಮಾಡುತ್ತೇವೆ ಎಂದು ಬಂದಿಲ್ಲ ಎಂದರು. ನೀವು ಮುಖ್ಯಮಂತ್ರಿ ಇದ್ದಾಗ ಮುಜರಾಯಿ ಇಲಾಖೆಯಿಂದ ದಲಿತರಿಗೆ ಪ್ರವೇಶ ಕೊಟ್ಟಿದ್ದಿರಿ ಎಂದರು.
ಹಲಾಲ್ ವಿರುದ್ಧ ಹೋರಾಟ ವಿಚಾರವಾಗಿ ಮಾತನಾಡಿದ ಅವರು, ಹಲಾಲ್ ವಿರುದ್ಧ ಹಿಂದೂ ಸಂಘಟನೆಗಳ ಹೋರಾಟ ಸ್ವಾಗತಾರ್ಹ. ಹಿಂದೂಗಳು ಯಾವುದೇ ಕಾರಣಕ್ಕೂ ಮುಸ್ಲಿಂರ ಹಲಾಲ್ ಅಂಗಡಿಗೆ ಹೋಗಿ ಮಾಂಸ ಖರೀದಿಸಬಾರದು ಎಂದರು. ಇದನ್ನೂ ಓದಿ: 40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ
ಹಲಾಲ್ ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡಿದರೆ, ಹಿಂದೂ ವಿರೋಧಿಗಳ ಶಕ್ತಿ ಕೈ ಬಲಪಡಿಸಿದಂತಾಗುತ್ತದೆ. ಹಿಂದೂಗಳಿಗೆ ದ್ರೋಹ ಬಗೆದಂತಾಗುತ್ತದೆ ಎಂದರು. ಮುಸ್ಲಿಂ ವ್ಯಕ್ತಿ ಚೂರಿ ಹಾಕಿದ ಮಾಂಸ, ಮುಸ್ಲಿಂರಿಗೆ ಮಾತ್ರ ಶ್ರೇಷ್ಠವಾಗಿರುತ್ತದೆ. ಅದು ಹಿಂದೂಗಳಿಗೆ ಎಂಜಲಾಗುತ್ತದೆ ಎಂದು ಹೇಳಿದ್ದಾರೆ.