ನವದೆಹಲಿ: ಆಮ್ ಆದ್ಮಿ ಪಕ್ಷದ (AAP) ಹಿಮಾಚಲ್ ಪ್ರದೇಶದ ಸಾಮಾಜಿಕ ಮಾಧ್ಯಮದ ಮುಖ್ಯಸ್ಥ ಹರ್‌ಪ್ರೀತ್ ಸಿಂಗ್ ಬೇಡಿ ತಮ್ಮ ಟ್ವೀಟ್‌ನಲ್ಲಿ ಖಲಿಸ್ತಾನ್ ಮುಕ್ತದೇಶ ಎಂದು ಘೋಷಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಖಲೀಸ್ತಾನದ ಬೇಡಿಕೆ ಸಾಂವಿಧಾನಿಕ ಹಕ್ಕು ಎಂದು ಉಲ್ಲೇಖಿಸಿ, ವ್ಯಾಪಕ ಟೀಕೆಗಳು ಬರುತ್ತಿದ್ದಂತೆ ಖಾತೆಯನ್ನು ಡಿಲೀಟ್ ಮಾಡಿದ್ದಾರೆ.
ಇದರೊಂದಿಗೆ ಖಲೀಸ್ತಾನಿ ನಾಯಕನ ಫೋಟೋ ಹಾಗೂ ರಿಪಬ್ಲಿಕ್ ಆಫ್ ಖಲಿಸ್ತಾನ್ ಎಂದು ಬರೆದಿರುವ ನೋಟಿನ ಚಿತ್ರವನ್ನು ಟ್ವೀಟ್ ಮಾಡಿರುವುದು ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದನ್ನೂ ಓದಿ: ಶಾಲೆಗಳಲ್ಲಿ ವೇದ, ರಾಮಾಯಣ, ಗೀತೆಗಳನ್ನು ಕಲಿಸಬೇಕು: ಧನ್ ಸಿಂಗ್ ರಾವತ್
ಹರ್‌ಪ್ರೀತ್ ಸಿಂಗ್ ತಮ್ಮ ಟ್ವಿಟ್ಟರ್‌ನಲ್ಲಿ ಖಲಿಸ್ತಾನ್‌ಗೆ ಬೆಂಬಲವಾಗಿ ಹಲವಾರು ಟ್ವೀಟ್‌ಗಳನ್ನು ಹಂಚಿಕೊಂಡಿದ್ದಾರೆ. ನಂತರ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಸಂವಿಧಾನದ ಅನ್ವಯ ಸಿಖ್ ಖಲೀಸ್ತಾನಕ್ಕಾಗಿ ಬೇಡಿಕೆ ಇಡಬಹುದಾಗಿದೆ. ಅದು ಹೇಗೆ ತಪ್ಪಾಗುತ್ತದೆ? ನೀವು ಈ ವಿವಾದವನ್ನು ಇಲ್ಲಿಗೆ ನಿಲ್ಲಿಸುವುದಿದ್ದರೆ ಕಾಯ್ದೆಯನ್ನು ಬದಲಾಯಿಸಲು ಪ್ರಯತ್ನಿಸಿ, ಇಲ್ಲದಿದ್ದರೆ ಮುಚ್ಚಿಹಾಕಿ ….’ ಎಂದು ಕಿಡಿಕಾರಿದ್ದಾರೆ.
ಬೇಡಿಗೆ ಬಹಿಷ್ಕಾರ: ಘಟನೆ ಕುರಿತು ಪ್ರತಿಕ್ರಿಯಿಸಿರುವ ಎಎಪಿ ದೆಹಲಿ ರಾಜ್ಯಘಟಕವು ಹರ್‌ಪ್ರೀತ್ ಸಿಂಗ್ ಬೇಡಿ ಅವರ ಅಭಿಪ್ರಾಯಗಳು ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿವೆ. ಅವರನ್ನು ಪಕ್ಷದಿಂದ ಬಹಿಷ್ಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಅಂಪೈರ್ ವಿರುದ್ಧ ಕೋರ್ಟ್‌ನಲ್ಲೇ ಆಕ್ರೋಶ – ಅನ್ಯಾಯದಿಂದ ಸೋತೆ ಎಂದ ಸಿಂಧು
ಈ ನಡುವೆ ಆಡಳಿತಾರೂಢ ಬಿಜೆಪಿ ಹೇಳಿಕೆಯಲ್ಲಿ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಪ್ರಕಟಣೆಯಲ್ಲಿ ಒತ್ತಾಯಿಸಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ತ್ರಿಲೋಕ್ ಜಮ್ವಾಲ್, ಖಜಾಂಚಿ ಸಂಜಯ್ ಸೂದ್, ರಾಜ್ಯ ಮಾಧ್ಯಮ ಸಹ ಉಸ್ತುವಾರಿ ಕರಣ್ ನಂದಾ ಮತ್ತು ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಪುನೀತ್ ಶರ್ಮಾ ಅವರು ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಂಜಾಬ್‌ನಲ್ಲಿ ಎಎಪಿ ಅಧಿಕಾರಕ್ಕೆ ಬಂದ ನಂತರ ದೇಶವಿರೋಧಿ ಶಕ್ತಿಗಳು ದೇಶದಲ್ಲಿ ತಲೆ ಎತ್ತಲು ಪ್ರಾರಂಭಿಸಿವೆ. ಪಕ್ಷದ ಪ್ರಮುಖ ಕಾರ್ಯಕರ್ತರು ತೀವ್ರಗಾಮಿ ಗುಂಪುಗಳನ್ನು ಬೆಂಬಲಿಸುತ್ತಿದ್ದು, ಹಿಮಾಚಲದಲ್ಲಿಯೂ ಇದರ ಪರಿಣಾಮ ಗೋಚರಿಸುತ್ತದೆ. ಎಎಪಿಯ ದೇಶವಿರೋಧಿ ಕಾರ್ಯಸೂಚಿಯನ್ನು ಒಪ್ಪಲಾಗದು. ಈ ನಡೆಗಳಿಂದ ಹಿಮಾಚಲ ರಾಜ್ಯವನ್ನು ವಿಭಜಿಸಲು ಕನಸು ಕಾಣುವವರಿಗೆ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ನಾಯಕರು ಟೀಕೆ ಮಾಡಿದೆ.