ಹುಬ್ಬಳ್ಳಿ: ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಒತ್ತಾಯ ಕೇಳಿಬಂದ ಬೆನ್ನಲ್ಲೇ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಆಗ್ರಹ ಹೆಚ್ಚುತ್ತಿದೆ.
ಈ ಬಾರಿಯ ಗಣೇಶೋತ್ಸವದಲ್ಲಿ ಈದ್ಗಾ ಮೈದಾನದಲ್ಲಿ ಶತಾಯಗತಾಯ ಗಣೇಶ ಮೂರ್ತಿ ಕೂರಿಸಲು ಹುಬ್ಬಳ್ಳಿಯ ಹಿಂದೂಪರ ಸಂಘಟನೆಗಳ ನಿರ್ಧಾರ ಮಾಡಿವೆ. ಈ ಸಂಬಂಧ ಹಿಂದೂಪರ ಸಂಘಟನೆಗಳು ಮೂರು ಸಾವಿರ ಮಠದಲ್ಲಿ ಮಹತ್ವದ ಸಭೆ ಕೂಡ ನಡೆಸಿವೆ. ಈದ್ಗಾದಲ್ಲಿ ಗಣೇಶ ಕೂರಿಸಲು ಅನುಮತಿ ಕೊಡಿಸುವಂತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮೇಲೂ ಒತ್ತಡ ಹಾಕಿವೆ. ಇದನ್ನೂ ಓದಿ: ಸಿದ್ದರಾಮಯ್ಯ ಎದುರು ಯಡಿಯೂರಪ್ಪ ಮಾಸ್ ಇಮೇಜ್ ಅಸ್ತ್ರ – ಬಿಜೆಪಿ ಸಂಸದೀಯ ಮಂಡಳಿಗೆ ಬಿಎಸ್‍ವೈ ಆಯ್ಕೆ ಹಿಂದಿನ ಪ್ಲಾನ್ ಏನು?
Advertisement
Advertisement
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶನನ್ನು ಕೂರಿಸಲು ಚೆನ್ನಮ್ಮ ಈದ್ಗಾ ಮೈದಾನ ಗಜಾನನ ಸಮಿತಿ ಜೊತೆಗೆ ಶ್ರೀರಾಮಸೇನೆ ಮತ್ತು ಇತರೆ ಹಿಂದೂಪರ ಸಂಘಟನೆಗಳು ಕೈಜೋಡಿಸಿದೆ. ಈ ಮೂಲಕ ಹುಬ್ಬಳ್ಳಿಯಲ್ಲೂ ಈದ್ಗಾ ಮೈದಾನದ ಗಣೇಶ ಪ್ರತಿಷ್ಠಾಪನೆ ವಿವಾದ ಮುಂದುವರಿದಿದೆ. ಇದನ್ನೂ ಓದಿ: ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರಗೀತೆ ನಿತ್ಯ ಹಾಡಿಸೋದು ಕಡ್ಡಾಯ