ಪುನೀತ್ ರಾಜ್‍ಕುಮಾರ್ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಹೆಚ್ಚಿದ ಬೇಡಿಕೆ!

Public TV
2 Min Read
PUNEETH 8

ಬೆಂಗಳೂರು: ಕರುನಾಡಿನ ಯುವರತ್ನ ಧ್ರುವತಾರೆಯಾಗಿ ಆಕಾಶದಲ್ಲಿ ಮಿನುಗುತ್ತಿದ್ದಾರೆ. ಅವರು ನಮ್ಮಿಂದ ಅಗಲಿದ್ದಾರೆ ಅನ್ನೋ ಸತ್ಯನ ಒಪ್ಪಿಕೊಳ್ಳೋಕೆ ಮನಸ್ಸಾಗ್ತಿಲ್ಲ. ಹೀಗಿರೋವಾಗ ಅಭಿಮಾನಿಗಳು ಅಪ್ಪುನ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೆಲವೆಡೆ ರಸ್ತೆಗಳಿಗೂ ಪುನೀತ್ ಹೆಸರು ಇಡಲಾಗಿದೆ.

PUNEETH 4

ಪುನೀತ್ ರಾಜ್‍ಕುಮಾರ್ ಇನ್ನಿಲ್ಲ ಎಂಬ ಸತ್ಯ ಒಪ್ಪಲು ಯಾರು ಸಿದ್ಧರಿಲ್ಲ. ಅಪ್ಪು ಇದ್ದಷ್ಟು ದಿನ ಜನರ ಜೊತೆಗೇ ಇದ್ರು. ಜನರ ಜೊತೆ ಸಿಂಪಲ್ ಆಗಿಯೇ ಬೆರೆಯುತ್ತಿದ್ದರು. ಅಭಿಮಾನಿಗಳ ಜೊತೆ ಕುಳಿತು ಊಟ ಮಾಡುತ್ತಿದ್ದರು. ಈಗ ವೀರಕನ್ನಡಿಗ ಚಿರನಿದ್ರೆಗೆ ಜಾರಿದ್ದಾರೆ. ಹಾಗಾಗಿ ಈಗ ಅಪ್ಪು ಪ್ರತಿಮೆ ನಿರ್ಮಿಸಲು ತಯಾರಿ ನಡೆಯುತ್ತಿದೆ. ಇದನ್ನೂ ಓದಿ: ಪವರ್ ಸ್ಟಾರ್ ಸಮಾಧಿ ಬಳಿ ಅಭಿಮಾನಿಗಳ ಕಣ್ಣೀರಧಾರೆ

PUNEETH 5

ಬೆಂಗಳೂರಿನ ಹಲವೆಡೆ ಅಪ್ಪು ಪುತ್ಥಳಿ ಇಡಲು ಆರ್ಡರ್‍ಗಳು ಶಿಲ್ಪಿ ಮನೆ ಬಾಗಿಲು ತಟ್ಟುತ್ತಿದೆ. ಚನ್ನಸಂದ್ರ ಶಿವಕುಮಾರ್ ಎಂಬ ಶಿಲ್ಪಿಗೆ ಈಗಾಗಲೇ 13ಕ್ಕೂ ಹೆಚ್ಚು ಅಪ್ಪು ಕಂಚಿನ ಪ್ರತಿಮೆಗೆ ಅಡ್ವಾನ್ಸ್ ಬುಕ್ ಆಗಿದೆ. ಮುಂದಿನ ಎರಡು ದಿನಗಳಲ್ಲಿ ವರ್ಕ್ ಸಹ ಶುರುವಾಗಲಿದೆ. ಇತ್ತ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲೂ ಅಧಿಕಾರಿ ಹಾಗೂ ನೌಕರರ ಸಂಘದ ವತಿಯಿಂದ ಪುತ್ಥಳಿ ಇಡಲು ಕಮೀಷನರ್ ಅನುಮತಿ ಕೇಳಲಾಗಿದೆ. 3 ಅಡಿಯ ಪುನೀತ್ ಕಂಚಿನ ಪುತ್ಥಳಿ ಸಿದ್ಧವಾಗಲಿದೆ ಎಂದು ಸಂಘದ ಅಧ್ಯಕ್ಷ ಅಮೃತ್ ರಾಜ್ ಹೇಳಿದರು. ಇದನ್ನೂ ಓದಿ: ನ.16ಕ್ಕೆ ಪ್ಯಾಲೇಸ್ ಗ್ರೌಂಡ್‍ನಲ್ಲಿ ಪವರ್ ಸ್ಟಾರ್‌ಗೆ ನುಡಿ ನಮನ

PUNEETH 7

ರಸ್ತೆಗಳಿಗೆ ‘ಅಪ್ಪು’ ಹೆಸರು..!
ಅಭಿಮಾನಿಗಳ ಅಭಿಮಾನಕ್ಕೆ, ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪುನೀತ್ ಮೇಲಿನ ಅಭಿಮಾನದಿಂದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶಿರವಾಳ ಗ್ರಾಮಸ್ಥರು ತಮ್ಮ ಗ್ರಾಮದ ವೃತ್ತವೊಂದಕ್ಕೆ ಪುನೀತ್ ರಾಜ್‍ಕುಮಾರ್ ವೃತ್ತ ಎಂದು ನಾಮಕರಣ ಮಾಡಿದ್ದಾರೆ. ಬೆಂಗಳೂರಿನಲ್ಲಿ ರಸ್ತೆಯೊಂದಕ್ಕೆ ಪುನೀತ್ ಹೆಸ್ರು ನಾಮಕರಣ ಮಾಡಬೇಕಂಬ ವಿಚಾರವಾಗಿ ರಾಘಣ್ಣ ಮಾತನಾಡಿದ್ದಾರೆ. ರಸ್ತೆಗೆ ಹೆಸರಿಡಬೇಕಾ ಅಥವಾ ಪುತ್ಥಳಿ ಮಾಡಬೇಕಾ ಗೊತ್ತಿಲ್ಲ. ನಾವು ಬಯೋಸೋದಿಲ್ಲ. ಇದೆಲ್ಲಾ ಜನರ ಪ್ರೀತಿ ಅಂದ್ರು. ಇದನ್ನೂ ಓದಿ: ಪುನೀತ್ ಸಾವಿನ ರಹಸ್ಯ ಒಂದೊಂದೇ ಬಯಲು!

PUNEETH 3

6ನೇ ದಿನದ ಪುಣ್ಯಸ್ಮರಣೆ ಆಚರಣೆ ಹಿನ್ನೆಲೆ ಮಂಡ್ಯದ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದಲ್ಲಿ ಪುನೀತ್ ಇಷ್ಟ ಪಡುವ ಮಾಂಸದೂಟ ಹಾಕಿ ಶ್ರದ್ಧಾಂಜಲಿ ಕೋರಲಾಯ್ತು. ಗ್ರಾಮಸ್ಥರು ನೂರಾರು ಮಂದಿಗೆ ಮಾಂಸದೂಟವನ್ನು ಹಾಕಿದರು. ದಾವಣಗೆರೆ ಸಿದ್ದಲಿಂಗೇಶ್ವರ ಶಾಲಾ ಮಕ್ಕಳು ವಿಶೇಷ ನಮನ ಸಲ್ಲಿಸಿದ್ರು. ಮಿಸ್ ಯು ಅಪ್ಪು ಎಂದು ಬ್ಲೈಂಡ್ ಪೋಲ್ಡರ್ ಡ್ರಾಯಿಂಗ್ ಮಾಡಿ ನಮನ ಸಲ್ಲಿಸಿದ್ರು.

APPU FANS

ಅಪ್ಪು ನಮ್ಮಿಂದ ಭೌತಿಕವಾಗಿ ದೂರ ಆಗಿದ್ದಾರೆ ಅಷ್ಟೇ. ಅವರ ಕೆಲಸ, ಸಿನಿಮಾದಿಂದ ಜನರ ಜೊತೆಗೇ ಇದ್ದಾರೆ. ಅಪ್ಪು ಇಲ್ಲ ಎಂಬ ಭಾವನೆ ದೂರ ಮಾಡಲು ಅಭಿಮಾನಿಗಳು ಈಗ ಪುತ್ಥಳಿಯನ್ನು ನಿರ್ಮಿಸೋಕೆ ನಿರ್ಧರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *