ಚಿಕ್ಕಬಳ್ಳಾಪುರ: ಭೂಚಕ್ರ ಗಡ್ಡೆ ನಿಮಗೆ ಗೊತ್ತೇ ಎಂದು ಕೇಳಿದರೆ, ಈ ಹೆಸರು ಕೇಳೇ ಇಲ್ಲ ಎನ್ನುವವರೇ ಹೆಚ್ಚು. ಇದು ಅತ್ಯಂತ ವಿರಾಳಾತಿ ವಿರಳವಾಗಿ ಸಿಗುವ ಗಡ್ಡೆ. ಬೆಟ್ಟಗುಡ್ಡಗಳ ನಡುವೆ ಸಿಗುವ ಈ ಗಡ್ಡೆಗೆ ಭಾರೀ ಡಿಮ್ಯಾಂಡ್ ಇದೆ.
Advertisement
ಭೂಮಿಯೊಳಗೆ 10-15 ಮೀಟರ್ ಆಳದವರೆಗೂ ವ್ಯಾಪಿಸೋ ಈ ಗಡ್ಡೆ ಆಯುರ್ವೇದದಲ್ಲಿ ಪ್ರಾಮುಖ್ಯತೆ ಹೊಂದಿದ್ದು ಔಷಧೀಯ ಗುಣಗಳನ್ನು ಓಳಗೊಂಡಿದೆ. ಇಂತಹ ಭೂಚಕ್ರ ಗಡ್ಡೆಯ ಮಾರಾಟ ಚಿಕ್ಕಬಳ್ಳಾಪುರ ನಗರದ ಬೀದಿ ಬೀದಿಗಳಲ್ಲಿ ಬಲು ಜೋರಾಗಿ ಸಾಗಿದೆ. ಜನ ಸಹ ಆಶ್ಚರ್ಯಚಕಿತರಾಗಿ ಏನಪ್ಪ ಇದು ಅಂತ ಕೂತೂಹಲದಿಂದ ನೋಡುತ್ತಿದ್ದಾರೆ. ಮಾರಾಟಗಾರ ಹೇಳುವ ಪ್ರಕಾರ ಸಕ್ಕರೆ ಕಾಯಿಲೆ ಹಾಗೂ ಅಧಿಕ ರಕ್ತದೊತ್ತಡಕ್ಕೆ ಇದು ರಾಮಬಾಣ ಎನ್ನಲಾಗುತ್ತದೆ. ಹೀಗಾಗಿ ಜನರು ಅದನ್ನು ಖರೀದಿಸಿ ತಿನ್ನುತ್ತಿದ್ದಾರೆ. ಇದನ್ನೂ ಓದಿ: ಪುನೀತ್ ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ: ವಿಜಯ್ ಸೇತುಪತಿ
Advertisement
ಭೂಚಕ್ರ ಗಡ್ಡೆಯ ಹಿನ್ನೆಲೆ
ಭೂಚಕ್ರ ಗಡ್ಡೆ ಗಿಡದ ವೈಜ್ಞಾನಿಕ ಹೆಸರು ಕ್ಯಾಪರಿಸ್ ಒಬ್ಲಾಂಗಿಪೋಲಿಯಾ (Capparis oblongifolia) ಅಥವಾ (Maerua oblongifolia) ಅಂತ. ಭಾರತದ ಮೂಲದ ಈ ಗಿಡವನ್ನು ಸಂಸ್ಕೃತದಲ್ಲಿ ಮಧುಸ್ರವ, ಮಧುವಲ್ಲಿ, ಮುರಹರಿ, ಕನ್ನಡದಲ್ಲಿ ಭೂಚಕ್ರ ಗಡ್ಡೆ, ನೀಲ ಸಕ್ಕರೆ ಗಡ್ಡೆ, ಇರುಳ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಂಗ್ಲಿಷ್‌ನಲ್ಲಿ ಡೆಸರ್ಟ್ ಕ್ಯಾಪರ್ ಡೆಸರ್ಟ್ ಮೆರುವಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಮೂಲ ಭಾರತವಾದರೂ ಪಾಕಿಸ್ತಾನ, ಸೌದಿ ಅರೇಬಿಯಾ, ಅಫ್ರಿಕಾ ದೇಶಗಳಲ್ಲಿ ಈ ಗಿಡ ಕಂಡುಬರುತ್ತದೆ. ಕುರುಚಲು ಕಾಡುಗಳ ಮಧ್ಯೆ ಕರ್ನಾಟಕದ ಪಶ್ಚಿಮ ಘಟ್ಟಗಳು ಸೇರಿದಂತೆ ಕೇರಳ ಹಾಗೂ ಮಹಾರಾಷ್ಟ್ರದ ಬೆಟ್ಟಗುಡ್ಡಗಳ ಕುರುಚಲು ಕಾಡುಗಳಲ್ಲಿ ಬೆಳೆಯುತ್ತದೆ.
Advertisement
Advertisement
ಮುಳ್ಳಿನ ಗಿಡಗಳ ಮಧ್ಯೆ ಬೆಳೆದು ನಿಂತಿರುವ ಈ ಗಿಡದ ಬಿಳಿ ಬಣ್ಣದ ಹೂಗಳು ನೋಡಲು ಅಲಂಕಾರಿಕವಾಗಿ ಆಕರ್ಷಕವಾಗಿರುತ್ತದೆ. ಇದರ ಹಣ್ಣುಗಳು ಸಹ ಒಂದಕ್ಕೊಂದು ವೃತ್ತಕಾರದಲ್ಲಿ ಸುರುಳಿಯಂತೆ ಜೋಡಣೆಗೊಂಡಿರುತ್ತವೆ. ಈ ಗಿಡದ ಎಲೆ, ಕಾಂಡ, ಹೂ ಹಣ್ಣುಗಳಿಗಿಂತ ಇದರ ಬೇರು ಅಂದರೆ ಗಡ್ಡೆಗೆ ಬಹಳ ಡಿಮ್ಯಾಂಡ್. ಮೇಲ್ನೋಟಕ್ಕೆ ಕುರುಚಲು ಗಿಡದಂತೆ ಭಾಸವಾದರೂ ಭೂಮಿಯ ಆಳದಲ್ಲಿ ಇದರ ಬೇರು 10-15 ಆಡಿಯವರೆಗೂ ವ್ಯಾಪಿಸಿರುತ್ತದೆ. ಬೇರಿನ ಸುತ್ತಳತೆ ಒಂದರಿಂದ ಎರಡು ಅಡಿಯವರೆಗೆ ಇರಲಿದೆ. ಇಂತಹ ಭೂಚಕ್ರ ಗಡ್ಡೆ ಸಿಗುವುದು ಅಪರೂಪ. ಇದನ್ನೂ ಓದಿ: ಸಿಮೆಂಟ್ ಹಾಕಿದ ರಸ್ತೆಯಲ್ಲಿ ಕಾರು ಚಲಾಯಿಸಿದ್ದಕ್ಕೆ ಕೊಂದ್ರು
ಭೂಚಕ್ರ ಗಡ್ಡೆಯ ಉಪಯೋಗಗಳು
ಬಾಯಾರಿಕೆ ನೀಗಿಸುವುದು, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡಕ್ಕೆ ರಾಮಬಾಣ ಅಂತ ಹೇಳಲಾಗುತ್ತದೆ.
ಸರಿಸುಮಾರು 5-6 ಅಡಿ ಉದ್ದದ ಗಡ್ಡೆಯನ್ನು ಚಪಾತಿಯಾಕರದಲ್ಲಿ ಸಣ್ಣ ಸಣ್ಣದಾಗಿ ಕತ್ತರಿಸಿ ಸಕ್ಕರೆ, ಜೇನುತುಪ್ಪದ ಮಿಶ್ರಣದೊಂದಿಗೆ ಸವಿಯಲಾಗುವುದು.
10 ರೂಪಾಯಿಗೆ 4 ಪೀಸ್‌ನಂತೆ ಮಾರಾಟ
ಚಿಕ್ಕಬಳ್ಳಾಪುರ ನಗರದಲ್ಲಿ ಸಹ ಭೂಚಕ್ರ ಗಡ್ಡೆಯನ್ನು 10 ರೂ.ಗೆ 4 ಪೀಸ್‌ನಂತೆ ಮಾರಾಟ ಮಾಡಲಾಗುತ್ತಿದೆ.