ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 31 ವರ್ಷ ವಯಸ್ಸಿನ ಮಹಿಳೆಯಲ್ಲಿ ಮಂಕಿಪಾಕ್ಸ್ ಇರುವುದು ದೃಢಪಟ್ಟಿದೆ.
ಈ ಮೂಲಕ ದೆಹಲಿಯಲ್ಲಿ ಈವರೆಗೆ ಒಟ್ಟು 4 ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ದೇಶದಲ್ಲಿ ಒಟ್ಟು 9ನೇ ಪ್ರಕರಣವಾಗಿದೆ. ದೆಹಲಿಯಲ್ಲಿ ಮಂಕಿಪಾಕ್ಸ್ ದೃಢಗೊಂಡ ಮಹಿಳೆ ಇತ್ತಿಚೇಗೆ ವಿದೇಶದಿಂದ ವಾಪಸ್ಸಾಗಿದ್ದರು. ಆ ಬಳಿಕ ಜ್ವರ ಮತ್ತು ಮೈ ಕೈನಲ್ಲಿ ಗುಳ್ಳೆಗಳು ಕಾಣಿಸಿಕೊಂಡಿದೆ. ಮಂಕಿಪಾಕ್ಸ್ ಪತ್ತೆಯಾದ ಮಹಿಳೆಯನ್ನು ಲೋಕನಾಯಕ ಜೈ ಪ್ರಕಾಶ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಮಸೀದಿ ಪ್ರವೇಶಿಸಿ ತನ್ನ ಮದುವೆಗೆ ಸಾಕ್ಷಿಯಾದ ವಧು – ಕೇರಳದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ
ನಿನ್ನೆ ದೆಹಲಿಯ 35 ವರ್ಷದ ಪುರುಷನಿಗೆ ಮಂಕಿಪಾಕ್ಸ್ ಇರುವುದು ಪತ್ತೆಯಾಗಿತ್ತು. ಆದರೆ ಈತನಿಗೆ ಯಾವುದೇ ವಿದೇಶ ಪ್ರಯಾಣದ ಲಿಂಕ್ ಇರಲಿಲ್ಲ. ಆದರೂ ಸೋಂಕು ಕಾಣಿಸಿಕೊಂಡಿತ್ತು. ದೇಶದಲ್ಲಿ ಕಾಣಿಸಿಕೊಂಡ ಎಲ್ಲಾ 9 ಪ್ರಕರಣಗಳು ಕೇರಳ ಮತ್ತು ದೆಹಲಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಸರ್ಪದೋಷ ಪರಿಹಾರ ಮಾಡ್ತೀನೆಂದು, ಮಹಿಳೆ ಬಾಯಿಗೆ ಬಟ್ಟೆ ತುರುಕಿ ಆಶ್ರಮದಲ್ಲೇ ರೇಪ್ ಮಾಡಿದ ಬಾಬಾ!
ಕೆಲದಿನಗಳ ಹಿಂದೆ ದೇಶದಲ್ಲಿ ದಾಖಲಾಗಿದ್ದ ಮೊದಲ ಪ್ರಕರಣದ ಸೋಂಕಿತ ಯುಇಎಯಿಂದ ಬಂದಿದ್ದ ಕೇರಳದ 22 ವರ್ಷದ ಯುವಕ ತ್ರಿಶ್ಶೂರ್‍ನಲ್ಲಿ ಸಾವನ್ನಪ್ಪಿದ್ದ. ಯುಇಎಯಿಂದ ಭಾರತಕ್ಕೆ ಹಿಂದಿರುಗಿದಾಗ ಮಾಡಿಸಿದ ಪರೀಕ್ಷೆಯಲ್ಲಿ ಮಂಕಿಪಾಕ್ಸ್ ದೃಢವಾಗಿತ್ತು. ಆದರೂ ಮುಚ್ಚಿಟ್ಟು ಎಲ್ಲರೊಂದಿಗೆ ಬೆರೆತಿದ್ದ. ಸ್ನೇಹಿತರೊಂದಿಗೆ ಫುಟ್‍ಬಾಲ್ ಸಹ ಆಡಿದ್ದ. ಜುಲೈ 26 ರಂದು ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆ ದಾಖಲಾಗಿದ್ದ ಯುವಕ ಆಗಸ್ಟ್ 1 ರಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ.