-ಮಹಿಳೆ ಬಳಿ ಬಂದು ಪ್ಯಾಂಟ್ ಜಿಪ್ ಬಿಚ್ಚಿದ್ದ ಯುವಕ
-ಟ್ವಿಟ್ಟರ್ ನಲ್ಲಿ ಮಹಿಳೆಯಿಂದ ದೂರು
-28 ವರ್ಷದ ಅವಿವಾಹಿತ ಸಿವಿಲ್ ಇಂಜಿನಿಯರ್
ನವದೆಹಲಿ: ಮೆಟ್ರೋದಲ್ಲಿ ಪ್ಯಾಂಟ್ ಜಿಪ್ ಬಿಚ್ಚಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ 28 ವರ್ಷದ ಟೆಕ್ಕಿಯನ್ನು ಬಂಧಿಸಲಾಗಿದೆ.
ಗುರುಗ್ರಾಮದ ಸೆಕ್ಟರ್ 22ರ ನಿವಾಸಿ ಅಭಿಲಾಷ್ (28) ಬಂಧಿತ ಸಿವಿಲ್ ಇಂಜಿನಿಯರ್. ಕರನಾಲದ ಮೂಲ ನಿವಾಸಿಯಾಗಿರುವ ಅಭಿಲಾಷ್ ಪ್ರತಿಷ್ಟಿತ ಕಂಪನಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಗುರುಗ್ರಾಮದಲ್ಲಿ ವಾಸವಾಗಿದ್ದನು. ಟೆಕ್ಕಿಯ ಬಂಧನ ಡಿಎಂಆರ್ ಸಿ ತನ್ನ ಟ್ವಿಟ್ಟರ್ ನಲ್ಲಿ ಖಚಿತ ಪಡಿಸಿದೆ.
Advertisement
Advertisement
ಕೆಲವು ದಿನಗಳ ಹಿಂದೆ ದೆಹಲಿ ಮೆಟ್ರೋದ ಹಳದಿ ಮಾರ್ಗದಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮಹಿಳೆ ಬಳಿ ಬಂದ ಟೆಕ್ಕಿ ತನ್ನ ಪ್ರೈವೇಟ್ ಪಾರ್ಟ್ ತೋರಿಸಿ ಅಸಭ್ಯವಾಗಿ ವರ್ತಿಸಿದ್ದನು. ಯುವಕನ ಅಸಭ್ಯ ವರ್ತನೆ ಕಂಡ ಮಹಿಳೆ ಆತನ ಫೋಟೋ ಕ್ಲಿಕ್ಕಿಸಿ ಟ್ವೀಟ್ ಮೂಲಕ ಡಿಎಂಆರ್ ಸಿ ಗೆ ದೂರು ಸಲ್ಲಿಸಿದ್ದರು. ಪ್ರಕರಣ ಗಂಭೀರವಾಗಿ ಪರಿಗಣಿಸಿದ ಸಿಬ್ಬಂದಿ, ಅಭಿಲಾಶ್ ಬಳಸುತ್ತಿದ್ದ ಮೆಟ್ರೋ ಕಾರ್ಡ್, ಫೋನ್ ನಂಬರ್ ಮೂಲಕ ಆತನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
Advertisement
ಮಹಿಳೆಯ ಟ್ವೀಟ್: ಆ ಯುವಕ ನನ್ನ ಬಳಿ ಯಾವಾಗ ಬಂದ ಅಂತ ಗೊತ್ತಾಗಲೇ ಇಲ್ಲ. ಬಂದವನೇ ತನ್ನ ಪ್ಯಾಂಟ್ ಜಿಪ್ ಬಿಚ್ಚಿ ಪ್ರೈವೇಟ್ ಪಾರ್ಟ್ ಹೊರಗಡೆ ತೆಗೆದನು. ಆ ಸಮಯದಲ್ಲಾದ ಕೆಟ್ಟ ಅನುಭವ ನನಗೆ ಇನ್ನು ನೆನಪಿದೆ. ಹಾಗಾಗಿ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಟೆಕ್ಕಿಯ ಫೋಟೋ ಟ್ವೀಟ್ ಮಾಡಿದ್ದರು.
We request the public to use the passenger emergency alarm button if they notice any suspicious behavior and inform the train operator immediately. Please also give the coach number that you are travelling in so that the person can be apprehended at the earliest.
— Delhi Metro Rail Corporation I कृपया मास्क पहनें???? (@OfficialDMRC) February 15, 2020
ಡಿಎಂಆರ್ ಸಿ ಪ್ರತಿಕ್ರಿಯೆ: ಸುಲ್ತಾನಪುರ ಪ್ರಕರಣಕ್ಕೆ ಸಂಬಂಧಿಸಿದ ಓರ್ವನನ್ನು ಡಿಎಂಆರ್‍ಸಿ ಭದ್ರತಾ ಸಿಬ್ಬಂದಿ ಪೊಲೀಸರ ಸಹಾಯದೊಂದಿಗೆ ಬಂಧಿಸಿದ್ದಾರೆ. ಮೆಟ್ರೋ ಪ್ರಯಾಣದಲ್ಲಿ ನಿಮ್ಮೊಂದಿಗೆ ಯಾರಾದ್ರೂ ಅಸಭ್ಯವಾಗಿ ವರ್ತಿಸಿದ್ರೆ ಎಮೆರ್ಜಿನ್ಸಿ ಬಟನ್ ಒತ್ತಬಹುದು. ಕೂಡಲೇ ನೀವು ಟ್ರೈನ್ ಆಪರೇಟರ್ ನ್ನು ಸಂಪರ್ಕಿಸಿ ಕೋಚ್ ನಂಬರ್ ನೀಡಬೇಕು. ಅಂತಹ ವ್ಯಕ್ತಿಯನ್ನು ನಿಲ್ದಾಣದಲ್ಲಿ ಹೊರಹೋಗುವ ಮೊದಲೇ ಬಂಧಿಸಲಾಗುವುದು.